ಹಾಸನ: ಮೇ ೧೦ ರಿಂದ ೨೪ರ ವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಜನಜಂಗುಳಿ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಟ್ಟಿನಕೆರೆ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಿ ಅದೆ ವ್ಯಾಪಾರವನ್ನು ಬಸ್ ನಿಲ್ದಾಣ, ಜಿಲ್ಲಾ ಕ್ರೀಡಾಂಗಣದ ಜಾಗ ಗುರುತಿಸಲಾಗಿದ್ದು, ಒಂದು ದಿನ ಮೊದಲೆ ವ್ಯಾಪಾರಸ್ತರು ಸಿದ್ಧತೆಯಲ್ಲಿ ತೊಡಗಿದ್ದರು.
ವ್ಯಾಪಾರದ ಜಾಗವನ್ನು ಗುರುತು ಮಾಡಿಕೊಳ್ಳಲು ನಗರದ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್, ಚಾಪೆ, ಗೋಣಚೀಲ ಇತರೆಯನ್ನು ಹಾಸುತ್ತಿದ್ದರು. ಇನ್ನು ಕೆಲವರು ಜಾಗಕ್ಕಾಗಿ ಕಿತ್ತಾಡುತ್ತಿದ್ದ ದೃಶ್ಯ ಕಂಡು ಬಂದಿತು. ಸೋಮವಾರದಿಂದ ೧೪ ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿದ್ದು, ಬೆಳಿಗ್ಗೆ ೬ ರಿಂದ ೧೦ರ ವರೆಗೆ ಮಾತ್ರ ನಿಗಧಿ ಮಾಡಿದ ಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡಲಾಗಿದೆ. ಇನ್ನು ಗ್ರಾಹಕರು ವಾಹನದಲ್ಲಿ ಬಂದು ವ್ಯಾಪಾರ ಮಾಡುವಾಗಿಲ್ಲ. ನಡೆದುಕೊಂಡು ಬಂದು ವಸ್ತುಗಳನ್ನು ಕೊಂಡುಕೊಳ್ಳಲು ಅವಕಾಶ ಕೊಡಲಾಗಿದೆ. ವಾಹನದಲ್ಲಿ ಸುಖಸುಮ್ಮನೆ ಯಾರಾದರೂ ತಿರುಗಾಡಿದರೇ ಅವರಿಗೆ ಬೀಳುತ್ತೆ ದಂಢ.