ದಿನಾಂಕ 08-05-2021ರ ಶನಿವಾರ ಬೆಳಿಗ್ಗೆ 10 ಗಂಟೆಯ ಸಮಯಕ್ಕೆ ಹಾಸನ ವೈಧ್ಯಕೀಯ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ನೇತೃತ್ವವನ್ನು ಹಿಮ್ಸ್ ಕಾಲೇಜಿನ ಸಂಯೋಜಕರು ವಹಿಸಲಿದ್ದು, ಇವರ ಜೊತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಾಸನ ಜಿಲ್ಲಾ ಶಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಘಟನೆ, ಹಾಸನಾಂಬ ಡೆಂಟಲ್ ಕಾಲೇಜು, ಸಂಜೀವಿನಿ ಮತ್ತು ಜ್ಞಾನದಾರೆ ಪ್ಯಾರ ಮೆಡಿಕಲ್ ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್ ಮಿಡ್‍ಟೌನ್ ಹಾಗೂ ಮಜ್ದೂರ್ ಆಟೋ ಚಾಲಕರ ಸಂಘ ಹಾಗೂ ವಿವಿಧ ಸಂಘಟನೆಗಳು ಈ ಶಿಬಿರದಲ್ಲಿ ಸಹಕರಿಸುವರಿದ್ದಾರೆ.
ರಕ್ತದ ಬೇಡಿಕೆ ಹೆಚ್ಚಾಗಿದ್ದು, ರಕ್ತನಿಧಿ ಕೇಂದ್ರದಲ್ಲಿ ರಕ್ತದ ಸಂಗ್ರಹ ಕಡಿಮೆ ಇರುವುದರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರು ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನವನ್ನು ಮಾಡಬೇಕೆಂದು ವಿನಂತಿಸಿಕೊಳ್ಳಲಾಗಿದೆ. ಕೊರೋನಾ ವೈರಸ್ ಪಿಡುಗಿನ ಹಾವಳಿ ಗಂಭೀರವಾಗಿರುವ ಪರಿಸ್ಥಿತಿಯಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಸ್ವಇಚ್ಛೆಯಿಂದ ರಕ್ತವನ್ನು ದಾನಿಗಳು ನೀಡಬೇಕೆಂದು ಹಿಮ್ಸ್ ಕಾಲೇಜಿನ ನಿರ್ದೇಶಕರಾದ ಡಾ. ರವಿಕುಮಾರ್ ರವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ
Tags
ಹಾಸನ
