ಕೋವಿಡ್ ಖಾಸಗಿ ಆಸ್ಪತ್ರೆಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಚಿಕಿತ್ಸೆ ಧರ ಪ್ರಕಟಿಸಲು ದೇವರಾಜೇಗೌಡ ಆಗ್ರಹ

ಹಾಸನ: ಜಿಲ್ಲಾಡಳಿತವು ಕೂಡಲೇ ಕೋವಿಡ್ ಆಸ್ಪತ್ರೆಗಳನ್ನು ತನ್ನ ವಶಕ್ಕೆ ಪಡೆದು ಮಾಹಿತಿ ತಿಳಿಯಬೇಕು. ಜೊತೆಗೆ ಆಸ್ಪತ್ರೆ ಮುಂದೆ ಚಿಕಿತ್ಸೆ ಧರವನ್ನು ನಾಮಫಲಕದಲ್ಲಿ ಪ್ರಕಟಿಸುವಂತೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡರಾದ ದೇವರಾಜೇಗೌಡ ಆಗ್ರಹಿಸಿದರು.



 ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕೊರೋನಾ ಸೋಂಕು ಎಂಬುದು ಹಾಸನ ಜಿಲ್ಲೆಯಲ್ಲಿ ದಿನೆ ದಿನೆ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಅದೆ ರೀತಿ ಸಾವಿನ ಸಂಖ್ಯೆಯು ಕೂಡ ಪ್ರತಿದಿನ ಏರಿಕೆಯಾಗುತ್ತಿದೆ.

ಹಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಹಲವು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಸೆಂಟರ್ ಎಂದು ಘೋಷಿಸಿದ್ದರು ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸುಲಿಗೆ ಹೆಚ್ಚಾಗಿರುವುದರಿಂದ ಆಸ್ಪತ್ರೆ ಕಡೆ ಸೋಂಕಿತರು ಗಮನ ಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಪ್ರತಿ ಖಾಸಗಿ ಆಸ್ಪತ್ರೆಗಳನ್ನು ತನ್ನ ವಶಕ್ಕೆ ಪಡೆದುಕೊಂಡು ನಿಯಂತ್ರಣ ಮಾಡಬೇಕಾಗಿರುವುದು ಅತ್ಯವಶ್ಯಕವಾಗಿರುತ್ತದೆ . ತಪ್ಪಿದ್ದಲ್ಲಿ ಖಾಸಗಿಯವರು ಜನರನ್ನು ಸುಲಿಗೆ ಮಾಡಿ ಭಯದಿಂದ ಸಾವು ಉಂಟಾಗುವAತೆ ಮಾಡುತ್ತಾರೆ . ಆದುದರಿಂದ ಜಿಲ್ಲಾಡಳಿತ ಶೀಘ್ರದಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆಗಳನ್ನು ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು. 

 ಆಡಳಿತ ಪಕ್ಷದ ಹಲವು ಮುಖಂಡರುಗಳು ಉಪಚುನಾಣೆಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸಾಂಕ್ರಾಮಿಕ ರೋಗದ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಈ ಮಧ್ಯೆ ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ. ರವಿಯವರು ತಮ್ಮ ವೈಪಲ್ಯಗಳನ್ನು ಮುಚ್ಚಿಕೊಂಡು ವಿರೋಧ ಪಕ್ಷ ಮತ್ತು ಮಾಧ್ಯಮಗಳ ಮೇಲೆ ಆರೋಪ ಮಾಡುವ ಮೂಲಕ ನೀವುಗಳು ಸರ್ಕಾರವನ್ನು ಎಚ್ಚರಿಸಬೇಕಾಗಿತ್ತು. ನಾನು ತಮಿಳುನಾಡು ರಾಜ್ಯದ ಚುನಾವಣೆ ಕಡೆ ಗಮನ ಹರಿಸಿದ್ದರಿಂದ ರಾಜ್ಯದ ಜನತೆಯ ಕಷ್ಟ ತಿಳಿದುಕೊಳ್ಳಲು ಸಾಧ್ಯವಾಗಿಲ್ಲವೆಂದು ಹೇಳಿರುವುದು ಮೂರ್ಖತನವಾಗಿರುತ್ತದೆ. ಇವರಿಗೆ ಜನರ ಸಂಕಷ್ಟಗಳಿAತ ಚುನಾವಣೆಗಳೇ ಮುಖ್ಯವಾಗಿರುತ್ತವೆ. ಬೆಂಗಳೂರಿನ ಸಂಸದ ಸನ್ಮಾನ್ಯ ತೇಜಸ್ವಿಸೂರ್ಯ ಇವರು ವಾರ್‌ರೂಮ್‌ಗಳ ಮೇಲೆ ದಾಳಿ ಮಾಡಿ ಬೆಡ್‌ಗಳ ವಿಚಾರವಾಗಿ ನಡೆದಿರುವ ಅವ್ಯವಹಾರವನ್ನು ಬಯಲಿಗೆ ಎಳೆದಿದ್ದಾರೆ ಎಂದರು. 

 ಆದರೆ ಮಾದ್ಯಮಗಳಿಗೆ ಹೇಳಿಕೆ ನೀಡುವ ಕಾಲಕ್ಕೆ ಮಾನ್ಯ ಸಂಸದರು ಮತ್ತು ಇತರೇ 3 ಜನ ಶಾಸಕರುಗಳು ಬೇಜಬ್ದಾರಿ ಹೇಳಿಕೆ ನೀಡಿರುವುದು ಇವರ ಕೋಮುವಾದದ ಮನಸ್ಸಿಗೆ ಸಾಕ್ಷಿಯಾಗಿದೆ. ವಾರ್‌ರೂಮ್‌ನಲ್ಲಿ ಸುಮಾರು 270 ಕ್ಕೂ ಹೆಚ್ಚು ಜನ ಪಾಳಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ . ಆದರೆ ಮಾನ್ಯ ಸಂಸದರು ಈ ವಿಚಾರವನ್ನು ಮುಚ್ಚಿಟ್ಟು ಕೇವಲ 17 ಜನ ಮುಸ್ಲಿಂ ಜನಾಂಗದ ಹೆಸರುಗಳನ್ನು ಘೋಷಣೆ ಮಾಡುವ ಮೂಲಕ ಕೋಮುವಾದಕ್ಕೆ ಹಿಂಬುಕೊಟ್ಟಿರುತ್ತಾರೆ ಎಂದು ಆರೋಪಿಸಿದರು. ಬಿ.ಜೆ.ಪಿ. ಶಾಸಕರುಗಳು ಮತ್ತು ಸಂಸದರುಗಳು ದಯಮಾಡಿ ಇಂತಹ ವಿಚಾರಗಳನ್ನು ಮುಂದಿಟ್ಟುಕೊAಡು ಸಾವಿನ ಮೇಲೆ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಕಥೆಗಾರ ಮಂಜಣ್ಣನAತೆ ವರ್ತಿಸುವ ಜವಬ್ದಾರಿಯನ್ನು ಅರಿತುಕೊಂಡು ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಈ ಮಧ್ಯೆ ಸರ್ಕಾರ ಜನತಾ ಕರ್ಪ್ಯೂ ಜಾರಿ ಮಾಡಿ ಜನರನ್ನು ಐರಾಣಗೊಳಿಸಿದೇ ಈ ಮಧ್ಯೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕಳೆದ ಎರಡು ದಿನಗಳ ಹಿಂದೆ ವಾರದ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಎಂದು ಆದೇಶ ಮಾಡಿದ ತೀರ್ಮಾನವನ್ನು ತೆಗೆದುಕೊಂಡು ಸಂಜೆಯ ಒಳಗೆ ಪುನಃ ರದ್ದು ಮಾಡಿದರು. ಇಂತಹ ಭಿನ್ನಾಭಿಪ್ರಾಯದ ಹೇಳಿಕೆಗಳಿಂದ ಜನರು ಗೊಂದಲಕ್ಕೆ ಒಳಗಾಗಿರುತ್ತಾರೆ. ದಯಮಾಡಿ ನಾಯಕರುಗಳು ಯೋಚಿಸಿ ಸೂಕ್ತ ತೀರ್ಮಾನವನ್ನು ಜನತೆಗೆ ಅನುಕೂಲವಾಗುವಂತೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಲ್ಲಿಗೆವಾಳ್ ದೇವಪ್ಪ, ಗುತ್ತಿಗೆದಾರ ಶಿವಕುಮಾರ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಹೇಂದ್ರ, ಕಾಂಗ್ರೆಸ್ ಮುಖಂಡ ಜಾರ್ಜ್ ವಿಲ್ಸನ್, ಮಹಾಮದ್ ಗೌಸ್ ಉಪಸ್ಥಿತರಿದ್ದರು.

Post a Comment

Previous Post Next Post