ಹಾಸನ ಜಿಲ್ಲೆ ವಾರದ ೪ ದಿನ ಸಂಪೂರ್ಣ ಲಾಕ್ ಡೌನ್

ಹಾಸನ: ದಿನೆ ದಿನೆ ಹೆಚ್ಚಾಗುತ್ತಿರುವ ಕೊರೋನಾ ಪಾಸಿಟವ್ ಪ್ರಕರಣದ ಹಿನ್ನಲೆಯಲ್ಲಿ ಇನ್ನು ಮುಂದೆ ಹಾಸನ ಜಿಲ್ಲೆಯಲ್ಲಿ ವಾರದ ಮೂರು ದಿನ ಮಾತ್ರ ಅಂಗಡಿ-ಮುಗಟ್ಟನ್ನು ಬೆಳಿಗ್ಗೆ ೬ ರಿಂದ ೧೦ರ ವರೆಗೂ ತೆಗೆದು ವ್ಯವಹಾರ ಮಾಡಬಹುದು. ಉಳಿದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ಯಾರಾದರೂ ಕಾನೂನನ್ನು ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಸೂಚನೆ ನೀಡಿದ್ದಾರೆ. 


       ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊವೀಡ್ ೧೯ ಪ್ರಗತಿ ಪರಿಶೀಲನೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಜಾಸ್ತಿಯಾದ ಕಾರಣ ತಕ್ಷಣ ಆಯಾ  ಜಿಲ್ಲೆಗೆ ಹೊಗಲು ಸೂಚನೆ ನೀಡಿದರು. ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಡಳಿತ, ಡಿ.ಎಚ್.ಒ ಜೊತೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದ್ದಾರೆ. ಹಾಸನ ಜಿಲ್ಲೆಯ ಶಾಸಕರುಗಳೆಲ್ಲಾ ಹಲವಾರು ಸಲಹೆ ನೀಡಿದ್ದಾರೆ. ಹಾಸನ ಜಿಲ್ಲೆಯ ಶಾಸಕರು ಹಾಗು ಜಿಲ್ಲಾಡಳಿತ ತಿರ್ಮಾನ ಮಾಡಿದಂತೆ ಸೋಮವಾರ-ಬುಧವಾರ- ಶುಕ್ರವಾರ ಮಾತ್ರ ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೆ ಅಂಗಡಿ ತೆರೆಯಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಉಳಿದಿ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದ ನಾಲ್ಕು ದಿನಗಳು ಸಂಪೂರ್ಣ ಲಾಕ್ ಡೌನ್ ಇರುತ್ತದೆ. ಇದರ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸರ್ಕಾರಿ ಕಚೇರಿಗೆ ಬರುವರು ತಮ್ಮ ಗುರುತ್ತಿನ ಚೀಟಿ ನೀಡಿ ಸಂಚಾರ ಮಾಡಬಹುದು. ಕೊರೊನಾ ಹೆಲ್ಪಲೈನ್ ಬಗ್ಗೆ ೪ ಬ್ಯಾಚ್ ಮಾಡಲಾಗುವುದು, ಇನ್ನು ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳು ತೆರೆದಿರುತ್ತದೆ ಎಂದು ಹೇಳಿದರು.

    ಹಿಂದುಳಿದ ವರ್ಗಗಳ .ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಶಕ್ಕೆ ಪಡೆದು ಅಲ್ಲಿನ ಸಿಬ್ಬಂದಿ ಉಪಯೋಗಿಸಿಕೊಂಡು ಮೊದಲ ಅಲೆಯಲ್ಲಿ ಮಾಡಿದ ಹಾಗೆ ಕೊವೀಡ್ ಸೆಂಟರ್ ಕೆಲಸ ಪ್ರಾರಂಭ ಮಾಡುತ್ತೆವೆ. ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರತಿ ತಾಲ್ಲೂಕಿಗೆ ೨೫ ಲಕ್ಷ ಹಣ ಕೊಡಿಸುವ ಕೆಲಸ ಮಾಡಿಸುತ್ತೆನೆ ಎಂದರು. ಮಾಜಿ ಪ್ರಧಾನಿ ದೇವೇಗೌಡರು ದೂರವಾಣಿ ಕರೆ ಮಾಡಿ ಹಾಸನ ಜಿಲ್ಲೆಯ ಬಗ್ಗೆ ಕೊವೀಡ್ ನಿಯಂತ್ರಣ ಮಾಡಲು ಸಲಹೆ ನೀಡಿದ್ದಾರೆ ದೇವೇಗೌಡರು ನನ್ನ ಗುರುಗಳು. ಅದರಂತೆ ವಯಕ್ತಿಕ ಹಣದಲ್ಲಿ ಹೋಮ್ ಎಷೋಲೆಷನ್ ಕಿಟ್ ನೀಡಲಾಗುವುದು. ಎಲ್ಲಾರು ಒಟ್ಟಾಗಿ ಕೈಜೋಡಿಸಿ ಕೆಲಸ ಮಾಡಿದರೆ ಇನ್ನೂ ೧ ತಿಂಗಳಲ್ಲಿ ಕೊರೊನಾ ನಿಯಂತ್ರಣ ತರಬಹುದು ಎಂದು ವಿಶ್ವಾಸವ್ಯಕ್ತಪಡಿಸಿದರು. 


Post a Comment

Previous Post Next Post