ಪುರಸಭೆಯಲ್ಲಿ ತನ್ನದೇ ಆದ ರಾಜಕೀಯ ನೆಲೆಯನ್ನು ಕಟ್ಟಿದ್ದ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದ ಆಪ್ತರಲ್ಲಿ ಒಬ್ಬರಾಗಿದ್ದ ಬಿಸಿ ಮಂಜುನಾಥ್ ಅವರಿಗೆ ಕೋವೀಡ್ ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೇವಲ ಒಂದು ದಿನದ ಹಿಂದಷ್ಟೇ ನೆಗಟಿವ್ ಬಂದು ಗುಣಮುಖರಾಗುವ ವಿಶ್ವಾಸ ಹೊಂದಿದ್ದ ಕುಟುಂಬಸ್ಥರಿಗೆ ಮಂಗಳವಾರ ರಾತ್ರಿ ೯-೩೦ ರ ಸಮಯದಲ್ಲಿ ಉಸಿರಾಟದ ತೀವ್ರ ತೊಂದರೆಯಿಂದಾಗಿ ನಿಧನಹೊಂದಿದರು.
ಮೃತರು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಹೇಮಾವತಿ ಮಂಜುನಾಥ್, ಪುತ್ರ ಹಾಗೂ ಪುತ್ರಿ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.
ಮೃತರಿಗೆ ಅಂತಿಮ ನಮನವನ್ನು ಶಾಸಕ ಕೆ ಎಸ್ ಲಿಂಗೇಶ್, ಪುರಸಭೆ ಮಾಜಿ ಅಧ್ಯಕ್ಷ ಹೆಚ್ ಎಂ ದಯಾನಂದ್, ಜೆಡಿಎಸ್ ಅಧ್ಯಕ್ಷ ತೊಚಅನಂತ ಸುಬ್ಬರಾಯ್, ಎಸ್ ನಾಗೇಶ್, ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಸೇರಿದಂತೆ ಹಲವಾರು ಗಣ್ಯರು ಅಂತಿಮ ರ‍್ಶನ ಪಡೆದು ಕಂಬನಿ ಮಿಡಿದರು.
Tags
ಬೇಲೂರು.