ರಾಮನಾಥಪುರ;- ಅಧಿಕಾರಿಗಳ ಕಣ್ತಪ್ಪಿಸಿ ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸುತ್ತಿರುವ ಕೆಲವರು ಗುಟ್ಟಾಗಿ ಮನೆ ಬಂದು ನಂತರ ರಸ್ತೆಯಲ್ಲಿ ಅಡ್ಡಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಕುರಿತ ಮಾಹಿತಿಯನ್ನು ತಾಲ್ಲೂಕು ಆಡಳಿತ, ಅಂಗನವಾಡಿ ಕಾರ್ಯಕರ್ತರು, ಅಥವ ಟಾಸ್ಕ್ಫೋರ್ಸ್ ಸಮಿತಿಯ ಗಮನಕ್ಕೆ ತರುವ ಮೂಲಕ ಕೊರೊನಾ ಸೋಂಕು ತಡೆಗೆ ಸಹಕರಿಸಿ ಎಂದು ಮಾಜಿ ಸಚಿವ ಎ. ಮಂಜು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ರಾಮನಾಥಪುರದ ದೇವರಹಟ್ಟಿ ಸಭಾಂಗಣದ ಅವರಣದಲ್ಲಿ ಕಾರ್ಯಕರ್ತರ ಜೊತೆ ಕೊರೊನಾ ಸೋಂಕಿನ ಬಗ್ಗೆ ಎಚ್ಚರ ವಿರಲಿ ಎಂದು ತಿಳಿಹೇಳಿದ ಅವರು ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್ ಸೋಂಕು ಕಂಡು ಬಂದಿರುವ ಕುಟುಂಬಗಳಿಗೆ ನಿತ್ಯವೂ ಆರೋಗ್ಯ ಇಲಾಖೆಯವರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಶಿಕ್ಷಣ ನೀಡುತ್ತಿದ್ದು ಯಾವುದೇ ಹೆಚ್ಚಿನ ಸಮಸ್ಯೆ ಕಂಡುಬAದರೆ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಎಂಬುದಾಗಿ ಸಲಹೆ ನೀಡಿ ರೋಗಿಗಳಿಗೆ ಹಾಗೂ ಗ್ರಾಮಸ್ಥರಿಗೆ ಆತ್ಮಸ್ಥೆöÊರ್ಯ ತುಂಬಲಾಗುತ್ತಿದೆ.
ಪ್ರತಿಯೊಬ್ಬರು ಸಹಕರಿಸಿ ಮಾಸ್ಕ್ ಧರಿಸಬೇಕು. ಕೊರೊನಾ ನಿಯಮ ಪಾಲಿಸಬೇಕು. ಜನ ಸಹಕರಿಸಿದರೆ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಬಹುದು. ಮತ್ತು ೬೦ ವರ್ಷ ಮೇಲ್ಪಟ್ಟವರಿಗೆ, ಸುಗರ್, ಮತ್ತು ಬಿ.ಪಿ. ಇರುವವರಿಗೂ ಈಗಾಗಲೇ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕಿಸಿಕೊಂಡವರು ಸಹ ಎಚ್ಚರಿಕೆಯಿಂದ ಇರಬೇಕು ಮತ್ತು ಕೊರೊನಾ ನಿರೋದಕ ಲಸಿಕೆ ಹಾಕಿಸಿಕೊಳ್ಳುವಂತೆ ಉಳಿದ ಹಿರಿಯರಲ್ಲಿ ಮನವಿ ಮಾಡದರು.
ಕೊರೊನಾ ಸಾಂಕ್ರಾಮಿಕ ರೋಗವಾಗಿ ಪರಿವರ್ತನೆಯಾಗುತ್ತಿದ್ದು ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ರೋಗಿಗಳ ಬಗೆಗೆ ಜಾಗೃತೆ ವಹಿಸಿ ಕೊರೊನಾ ಹರಡದಂತೆ ಎಚ್ಚರಿಕೆ ವಹಿಸಬೇಕು. ಚರಂಡಿಗಳ ಕೊಳಚೆನೀರು ನಿಲ್ಲದಂತೆ ಮತ್ತು ಸೋಂಕು ನಿವಾರಕಗಳನ್ನು ಸಿಂಪಡಿಸಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಕೆಲಸವನ್ನು ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂಧಿಗಳು ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಣ್ಣ, ಹಾಲಿ ಸದಸ್ಯರಾದ ಜಿ.ಪಿ. ಜಯಪ್ರಕಾಶ್. ಸಿದ್ದರಾಜು, ವಿನು, ರಾಜೇಗೌಡ, ಕೃಷ್ಣೇಗೌಡ ಮುಂತಾದವರು ಇದ್ದರು.
