ಅರೇಹಳ್ಳಿ ವ್ಯಾಪ್ತೀಯಲ್ಲಿ ಬುಧವಾರ ಎಂದಿನಂತೆ ಲಾಕ್ ಡೌನ್ ಹಿನ್ನಲೆಯಲ್ಲಿ ವಾಹನಗಳನ್ನು ಪಿಎಸ್ಐ ಮಹೇಶ್ ಹಾಗೂ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದಾಗ ಅಪ್ರಾಪ್ತ ವಯಸ್ಸಿನ ಯುವಕ ಕೆಇಬಿ ಬಳಿ ನಮ್ಮ ಪೋಲೀಸರನ್ನು ಕಂಡೊಡನೆ ವಾಹನವನ್ನು ಬಿಟ್ಟು ಗಾಬರಿಯಿಂದ ಓಡುತ್ತಿದ್ದಾಗ ಅನುಮಾನಗೊಂಡು ಸಿಬ್ಬಂದಿಗಳಾದ ನಂದೀಶ್,ಜಗದೀಶ್ ಹನುಮಂತ ಯುವಕನನ್ನು ಬೆನ್ನೆಟ್ಟಿ ಹಿಡಿದು ವಿಚಾರಿಸಿದಾಗ ಈತ ವಿವಿಧ ಭಾಗಗಳಲ್ಲಿ ಬೈಕ್ ಕಳವು ಮಾಡಿದ್ದು ಕಂಡುಬಂದಿದ್ದು ಸುಮಾರು ೬ ದ್ವಿಚಕ್ರ ವಾಹನಗಳನ್ನು ಕದ್ದಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ನಂತರ ಕದ್ದ ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಯಿತು.
ಈ ಸಂರ‍್ಭದಲ್ಲಿ ಎಎಸ್ಐ ಶಿವರಾಂ,ಕುಮಾರ್ ಹಾಜರಿದ್ದರು.
Tags
ಬೇಲೂರು
