ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಧಿಕಾರಿಗಳ ತಂಡ ಭೇಟಿ: ಪರಿಶೀಲನೆ

ಬೇಲೂರು: ಕೊರೊನಾ ಮಹಾಮಾರಿ ಎರಡನೆ ಅಲೆ ಹೆಚ್ಚಿರುವ ಹಿನ್ನಲೆಯಲ್ಲಿ ತಹಸೀಲ್ದಾರ್ ಎನ್.ವಿ.ನಟೇಶ್ ನೇತೃತ್ವದ ಅಧಿಕಾರಿಗಳ ತಂಡ ಅರೇಹಳ್ಳಿಗೆ ಭೇಟಿ ನೀಡಿ ಸಲಹೆ ಸೂಚನೆ ನೀಡಿದರು.
ಈ ಸಂದರ್ಭ ಅರೇಹಳ್ಳಿ ವೈದ್ಯರು, ಆಶಾಕಾರ್ಯಕರ್ತೆಯರು ಹಾಗೂ ಸಿಬ್ಬಂದಿಯೊಂದಿಗೆ ಕೆಲವೊಂದು ಸಲಹೆ ಹಾಗೂ ಸೂಚನೆ ನೀಡಲಾಯಿತು. ಪ್ರೈಮರಿ ಹಾಗೂ ಸೆಕಂಡರಿ ಕಾಂಟ್ಯಾಕ್ಟ್ ಇರುವವರನ್ನು ಪತ್ತೆಹಚ್ಚುವುದು ಮತ್ತು ಅವರ ವಿವಿರಗಳನ್ನು ದಾಖಲಿಸಬೇಕು, ಇದಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಅವರ ಸಹಾಯ ಪಡೆದುಕೊಳ್ಳುವಂತೆ ಸಲಹೆ ನೀಡಲಾಯಿತು. ಕೊರೊನಾ ಕೇಸ್‍ಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಅರೇಹಳ್ಳಿ ಆಸ್ಪತ್ರೆಗೆ ಲ್ಯಾಬ್ ಟೆಕ್ನಿಷಿಯನ್, ವೈದ್ಯರು ಹಾಗೂ ಕೋವಿಡ್-19 ವ್ಯವಸ್ಥೆಯ ಬಗ್ಗೆ ಕೊಠಡಿಗಳ ಪರಿಶೀಲಿಸಲಾಯಿತು.ಸೀಮಿತ ಸಂಖ್ಯೆಯಲ್ಲಿ ವಿವಾಹಕ್ಕೆ ಅನುಮತಿ ಹೊರತು ಉಳಿದ ಯಾವುದಕ್ಕೂ ಅನುಮತಿ ನೀಡದಂತೆ ಸೂಚಿಸಲಾಯಿತು. ಶೀತ, ಕೆಮ್ಮು, ಜ್ವರ ಇರುವವರು ತಕ್ಷಣ ಆಸ್ಪತ್ರೆಗೆ ಆಗಮಿಸಿ ಪರೀಕ್ಷೆಗೆ ಒಳಪಡಬೇಕು. 
ಕೊವಿಡ್ ಸಮಸ್ಯೆ ಬಗೆಹರಿದ ನಂತರ ಉಳಿದ ಆಸ್ಪತ್ರೆಯ ಸಮಸ್ಯೆಗಳತ್ತ ಗಮನ ಹರಿಸಲಾಗುವುದು ಎಂದು ತಿಳಿಸಲಾಯಿತು. 
ಈ ಸಂದರ್ಭ ತಾ.ಪಂ.ಇಒ ರವಿಕುಮಾರ್, ಸರ್ಕಲ್ ಇನ್‍ಸ್ಪೆಕ್ಟರ್ ಶ್ರೀಕಾಂತ್, ತಾಲ್ಲೂಕು ಮೆಡಿಕಲ್ ಆಫೀಸರ್ ಡಾ.ವಿಜಯ್, ಪಿಡಿಒ , ಸ್ತ್ರೀ ಮತ್ತು ಪ್ರಸೂತಿ  ವೈದ್ಯೆ ಮಮತಾ, ಆಶಾಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ ಇತರರು ಇದ್ದರು.

Post a Comment

Previous Post Next Post