ಕೊರೋನಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಗೋಪಾಲಯ್ಯ ಗರಂ

ಹಾಸನ: ನಮಗೆ ಕಾರಣ ಹೇಳದೇ ಯಾವ ಮೆಡಿಸನ್ ಕೊರತೆ ಇದ್ರೆ ಕೂಡಲೇ ಖರೀದಿ ಮಾಡಬೇಕು. ನಮ್ಮ ಗಮನಕ್ಕೂ ತಂದಿರುವುದಿಲ್ಲ ಎಂದು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಗರಂ ಸಂಬAಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.



        ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ಬುಧವಾರದಂದು ನಡೆದ ಹಾಸನ ಜಿಲ್ಲೆಯ ಕೊವೀಡ್-೧೯ರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಾಲೂಕುಗಳ ಕೊರೋನಾದ ಹರಡುವಿಕೆಯ ಪ್ರಮಾಣ ಮತ್ತು ರೋಗಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಹಾಸಿಗೆ, ಆಕ್ಸಿಜನ್ ಮತ್ತು ಮೆಡಿಸನ್ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈವೇಳೆ ರೆಮಿಡಿಸಿವರ್ ಮೆಡಿಸನ್ ಕೊರತೆ ಇರುವ ಬಗ್ಗೆ ಶಾಸಕರುಗಳಿಂದ ಹೆಚ್ಚು ದೂರು ಕೇಳಿ ಬಂದಿತು. ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಗಟ್ಟಿ ಧ್ವನಿಯಲ್ಲೆ ರೆಮಿಡಿಸಿವರ್ ಮೆಡಿಸನ್ ನನ್ನು ಸರಕಾರಕ್ಕೆ ತರಲು ಆಗಲ್ವ ಎಂದು ಸಚಿವರನ್ನು ಪ್ರಶ್ನೆ ಮಾಡಿದರು. ಕೋಪಿತಗೊಂಡ ಸಚಿವರು ಸಂಬAಧಪಟ್ಟ ಡ್ರಗ್ಸ್ ಮತ್ತು ಜಿಲ್ಲಾ ಸರ್ಜನ್ ಸೇರಿದಂತೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೆಡಿಸಿವರ್ ಕೊರತೆ, ಮಾಸ್ಕ್, ಗ್ಲೌಸ್ ಕೊರತೆ ಇದ್ದರೆ ಖರೀದಿ ಮಾಡ್ರಿ. ನಿಮಗೆ ಅಧಿಕಾರ ಕೊಟ್ಟಿಲ್ಲವೇ ? ಎಂದು ಸಂಬAದ ಪಟ್ಟ ಅಧಿಕಾರಿಗಳಿಗೆ ಆಕ್ರೋಶದಲ್ಲಿ ಪ್ರಶ್ನೆ ಮಾಡಿದರು. 

     ಇದಕ್ಕೆ ಮೊದಲು ಹಾಸನ ಜಿಲ್ಲೆಯ ಕೊರೋನಾ ಪಾಸಿಟಿವ್ ಸಂಬAಧಪಟ್ಟAತೆ ಜಿಲ್ಲಾಧಿಕಾರಿಗಳಾದ ಆರ್. ಗಿರೀಶ್ ರವರು ಮಾಹಿತಿ ನೀಡುತ್ತಾ, ಕಳೆದ ೭ ದಿನಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಮತ್ತು ೮ ಸಾವಿರ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಶೆಕಡಾ ೩೩ ರಷ್ಟು ಪಾಸಿಟಿವ್ ಧರ ಕಂಡು ಬಂದಿದೆ. ಜಿಲ್ಲೆಯಲ್ಲಿ ೨೧೦೦ ಹಾಸಿಗೆಗಳಿವೆ. ಈ ತಿಂಗಳೊಳಗೆ ಹಾಸಿಗೆ ಕೊರತೆ ಕಾಣಿಸಿಕೊಳ್ಳಬಹುದು. ಆಕ್ಸಿಜನ್ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆ ಇದ್ದು, ೪೦೦ ಜನರಲ್ಲಿ ೧೫೦ ಜನರಿಗೆ ಆಕ್ಸಿಜನ್ ಅವಶ್ಯಕತೆ ಇರುವುದಿಲ್ಲವೊ ಅಂತರವನ್ನು ಗುರುತಿಸಿ ಹಿಮ್ಸ್ ಎದರು ಹಳೆ ಕೋರ್ಟ್ ಕಟ್ಟಡಕ್ಕೆ ಶಿಪ್ಟಿಂಗ್ ಮಾಡಲಾಗಿದೆ. ದಿನನಿತ್ಯ ೨೦೦ ಸಿಲಿಂಡರ್ ಸಾಕಾಗಿತ್ತು. ಈಗ ೬೦೦ ಸಿಲಿಂಡರ್ ಅವಶ್ಯಕತೆ ಇದೆ. ನಮ್ಮಲ್ಲಿ ದಿನನಿತ್ಯ ಕೇವಲ ೫೦೦ ಸಿಲಿಂಡರ್ ಉತ್ಪಾದನೆ ಆಗುತ್ತಿದ್ದು, ಐಸಿಯು ಕಷ್ಟ ಆಗುತ್ತದೆ ಎಂದರು. ಖಾಸಗಿ ವಲಯದಲ್ಲಿ ೨೦ ಐಸಿಯು ಇದೆ. ಪ್ರತಿ ಖಾಸಗಿ ಆಸ್ಪತ್ರೆಗೆ ನೊಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರೆಮಿಡಿಸಿವಿರ್ ಪ್ರತಿದಿನ ೩೫೦ ಸರ್ಕಾರಿ ವಲಯಕ್ಕೆ ಮತ್ತು ಖಾಸಗಿ ವಲಯಕ್ಕೆ ೩೫೦ ಅವಶ್ಯಕತೆ ಇದೆ. ಕೆಸ್ ಇತಿಹಾಸ ನೋಡಿ ರೆಮಿಡಿಸಿವಿರ್ ನೀಡಲಾಗುತ್ತದೆ. ಖಾಸಗೀ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗುತ್ತಿದ್ದು, ೧೯ ಕಿಲೋ ಲಿಟರ್ ಅವಶ್ಯಕತೆ ಇದೆ. ಆಕ್ಸಿಜನ್ ಸಮಸ್ಯೆ ಇನ್ನೊಂದು ವಾರದಲ್ಲಿ ತಿವ್ರತೆ ಆಗಲಿದೆ ಎಂದು ಆತಂಕವ್ಯಕ್ತಪಡಿಸಿದರು. ಮೆಡಿಸನ್ ಕೊರತೆ ಬಗ್ಗೆ ಹೊಳೆನರಸೀಪುರ ತಾಲೂಕಿನಲ್ಲಿ ಟಿಎಚ್‌ಒ ನನ್ನ ಗಮನಕ್ಕೆ ತಂದಿಲ್ಲದಿರುವುದರಿAದ ಅವರನ್ನು ಕೆಲಸದಿಂದ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

    ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಮಾತನಾಡಿ, ಹಾಸನದ ಶಾಸಕರು ಜಿಲ್ಲೆಯ ಶಾಸಕರನ್ನು ಬೀದಿನಾಯಿಗಳು ಅಂತ ಕರೆಯುತ್ತಾರೆ. ಮಾಜಿ ಪ್ರಧಾನಿಗೆ ಬೆಲೆ ಇಲ್ಲವೆ. ರೆಮಿಡಿಸಿವಿರ್ ಇಂಜೆಕ್ಷನ್ ೧೫ ದಿನಕ್ಕೆ ೧೦  ಸಾವಿರ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ೯೯೬೪ ಸಕ್ರಿಯ ಪ್ರಕರಣಗಳು ಇದ್ದು, ತಾಲ್ಲೂಕು ಮಟ್ಟದಲ್ಲಿ ಹಣ ಬಿಡುಗಡೆ ಮಾಡಿ. ಶಾಸಕರು ತಹಶಿಲ್ದಾರ್. ಟಿ.ಎಚ್.ಒ ರವರಿಗೆ ಜವಾಬ್ದಾರಿ ಕೊಡಬೇಕು. ಮುಂದಿನ ಹಿತಾ ದೃಷ್ಟಿಯಿಂದ ಹಾಸನ ಜಿಲ್ಲೆಗೆ ಸಿಲಿಂಡರ್ ಸ್ಟಾಕ್ ಇರಬೇಕು ಎಂದರು. ೭ ಕೋಟಿ ಹಣ ಪ್ರತಿ ಜಿಲ್ಲೆಗೆ ಬಂದಿದೆ. ಆ ಹಣ ಎನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು. ಕೊರತೆ ಇರುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗು ಔಷದಿ ಕೂಡಲೆ ಖರೀದಿಸಲು ಸೂಚನೆ ನೀಡುವಂತೆ ಜಿಲ್ಲಾ ಮಂತ್ರಿಗಳನ್ನು ಕೊರಿದರು.

     ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಕೃಷ್ಣಮೂರ್ತಿ ಮಾತನಾಡಿ, ಕೊರೋನಾ ಬಂದಾಗ ಹೆಚ್ಚು ರೆಮಿಡಿಸಿಯನ್ ಮೆಡಿಸನ್ ಕೇಳುತ್ತಾರೆ. ಇದರ ಬಗ್ಗೆ ಅನೇಕರಿಗೆ ಮಾಹಿತಿ ಇರುವುದಿಲ್ಲ. ಪಾಸಿಟಿವ್ ಬಂದ ೫ ದಿನಗಳ ಒಳಗೆ ಈ ಔಷಧಿ ಕೊಡಬೇಕು ನಂತರ ಕೊಟ್ಟರೆ ಉಪಯೋಗಕ್ಕೆ ಬರುವುದಿಲ್ಲ. ಇನ್ನು ಹೆಚ್ಚು ತೆಗೆದುಕೊಂಡರೆ ಕಿಡ್ನಿಗೆ ತೊಂದರೆಯ ಸಾಧ್ಯತೆ ಹೆಚ್ಚು ಇದೆ. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಹೆಚ್ಚು ರೆಮಿಡಿಸಿಯನ್ ಮೆಡಿಸನ್ ತರಲು ಹೇಳುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

     ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕೊವೀಡ್ ನಿಂದ ಸತ್ತ ಹೆಣ ತಂದು ನಮ್ಮ ಮನೆ ಕಡೆ ನೋಡಿ ಜನರು ಬೈಯುತ್ತಿದ್ದಾರೆ. ಅರಸೀಕೆರೆ ತಾಲ್ಲೂಕಿನಲ್ಲಿ ಸಿಸಿಸಿ ಸೆಂಟರ್ ನಲ್ಲಿ ೮೩ ಜನ ಇದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲಿ ೩೭ ಸರ್ಕರಿ ಆಸ್ಪತ್ರೆಯಲ್ಲಿ ೫೦ ಆಕ್ಸಿಜನ್ ಬೆಡ್ ಇದೆ. ೧೩೫೯ ಹೋಮ್ ಎಷೋಲೇಷನ್ ನಲ್ಲಿ ಇದ್ದಾರೆ. ಹೋಮ್ ಎಷೋಲೇಷನ್ ಇದ್ದವರು ಆ ಗ್ರಾಮಕ್ಕೆ ಪೂರ್ತಿ ಕೊರೋನಾ ಹಬ್ಬಿಸುತ್ತಾವರೆ. ಕೊವಿಡ್ ಕೆರ್ ಸೆಂಟರ್ ಗೆ ಪಾಸಿಟಿವ್ ರೋಗಿಗಳನ್ನು ಶಿಪ್ಟ್ ಮಾಡಬೇಕು ಎಂದು 

ಜಿಲ್ಲಾಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹೋಮ್ ಎಷೋಲೇಷನ್ ತೆಗೆದು ೮ ಮೊರಾರ್ಜಿ ವಸತಿ ಶಾಲೆ ಇದೆ. ಅದನ್ನು ಬಳಸಿಕೊಳ್ಳಿ ಭೇಕಾದರೇ ನಾನೆ ೧೦ ಲಕ್ಷ ಖರ್ಚು ಮಾಡಿ ಊಟ ಹಾಕುತ್ತೆನೆ ಎಂದರು. ಕೊವ್ಯಾಕ್ಸಿನ್‌ಮತ್ತು  ಕೊವೀಶಿಲ್ಡ್ ಕೊರತೆಯಿಂದಾಗಿ ಜನ ಬಾಯಿಗೆ ಬಂದಹಾಗೆ ಬೈಯುತ್ತಿದ್ದಾರೆ. ನೀವು ಹೇಳಿಕೆ ಕೊಟ್ಟು ನಮ್ಮನ್ನು ಜನರಿಂದ ಬೈಯುಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. 

      ಸಕಲೇಶಪುರ ಕ್ಷೇತ್ರದ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಶಾಸಕರು ಕೇಳಿದರೆ ಹಾಸಿಗೆ ಕೊಡುತ್ತಿಲ್ಲ. ಸಕಲೇಶಪುರದಲ್ಲಿ ೩೦ ಆಲೂರಿನಲ್ಲಿ ೨೦ ಆಕ್ಸಿಜನ್ ಬೆಡ್ ಇದೆ. ಸಿಲಿಂಡರ್ ಸಂಖ್ಯೆ ಜಾಸ್ತಿ ಮಾಡಬೇಕು. ನಸ್Àðಗಳ ಕೊರತೆ ಇದ್ದು, ವಾರಕೊಮ್ಮ ಒಂದು ದಿನ ತರಕಾರಿ ದಿನಸಿ ಅಂಗಡಿಗಳು ತೆರೆಯಲು ಅವಕಾಶ ನೀಡಿ ಇಲ್ಲವಾದಲ್ಲಿ ಜನ ಅನವಾಸ್ಯಕವಾಗಿ ಸುತ್ತುತ್ತಿದ್ದಾರೆ. ಸೋಮವಾರ ಬುಧವಾರ ಶುಕ್ರವಾರ ಮಾತ್ರ ಅವಕಾಶ ಕೊಡಿ. ಎಣ್ಣೆ ಅಂಗಡಿ ಕೂಡ ೩ ದಿನದಲ್ಲಿ ಮಾತ್ರ ತೆಗೆಯಲ್ಲಿ ಎಂದು ಸಲಹೆ ನೀಡಿದರು.

       ಬೇಲೂರು ಕ್ಷೇತ್ರದ ಶಾಸಕರಾದ ಲಿಂಗೇಶ್ ಮಾತನಾಡಿ, ಬೇಲೂರು ತಾಲ್ಲೂಕಿನಲ್ಲಿ ೩೦ ಹಾಸಿಗೆ  ಪೂರ್ತಿಯಾಗಿದೆ. ರೆಮಿಡಿಸಿವಿರ್ ಇಂಜೆಕ್ಷನ್ ಕೊರತೆ ಇದೆ. ಸಿಲಿಂಡರ್ ಕೊರತೆ ಇದೆ. ಕ್ಯೊವಾಕ್ಸಿನ್ ಕೊರತೆ ಇದೆ. ಆರ್.ಟಿ.ಪಿ.ಸಿ.ಆರ್ ರಿಸೆಲ್ಟ್  ತಾಲ್ಲೂಕು ಆಡಳಿತದ ಗಮನಕ್ಕೆ ಬರುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡರು. 

       ಚನ್ನರಾಯಪಟ್ಟಣ ಕ್ಷೇತ್ರದ ಶಾಸಕರಾದ ಸಿ.ಎನ್. ಬಾಲಕೃಷ್ಣ ಮಾತನಾಡಿ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ೮೧ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ೫ ಸಿಲಿಂಡರ್ ಮಾತ್ರ ಭರ್ತಿಯಾಗಿದೆ. ೧೫ ಸಿಲಿಂಡರ್ ಭರ್ತಿಯಾಗಿರುವುದಿಲ್ಲ. ೨೫ ಸಿಲಿಂಡರ್ ಇದ್ದು, ಇನ್ನೂ ೨೫ ಸಿಲಿಂಡರ್ ಅವಶ್ಯಕತೆ ಇದೆ. ಉಸಿರಾಟದ ಸಮಸ್ಯೆ ಇರುವರನ್ನು ಎಲ್ಲಿ ದಾಖಲು ಮಾಡುವುದು. ಚನ್ನರಾಯಪಟ್ಟಣದಲ್ಲಿ ಆಕ್ಸಿಜನ್ ಕೊರತೆ ಇದೆ. ಎರಡನೆ ಚಾಮರಾಜನಗರ ಚನ್ನರಾಯಪಟ್ಟಣ ಆಗಲಿದ್ದು, ೬ ದಿನ ಆದರು ಆರ್.ಟಿ.ಪಿ.ಸಿ.ಆರ್ ವರದಿ ಬರುತ್ತಿಲ್ಲ. ಬರುವ ಅಷ್ಟರಲ್ಲಿ ರೋಗಿ ತಾಲ್ಲೂಕಿಗೆಲ್ಲ ಹಬ್ಬಿಸಿರುತ್ತಾರೆ ಎಂದು ತಮ್ಮ ತಾಲೂಕಿನ ಸಮಸ್ಯೆಯನ್ನು ತೋಡಿಕೊಂಡರು.

     ಸಂಸದರಾದ ಪ್ರಜ್ವಲ್ ರೇವಣ್ಣನವರು ಮಾತನಾಡಿ, ಈ ಜಿಲ್ಲೆಯ ಸಂಸದರಾಗಿ ನನ್ನನ್ನು ಸಭೆಗೆ ಕರೆಯುವ ಪ್ರೋಟೊಕಾಲ್ ಇಲ್ಲ ಎನ್ನುತ್ತಾರೆ ಡಿಸಿ, ಒಬ್ಬ ಶಾಸಕ ಬಂದು ನೆನ್ನೆ ಬಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಇಲಾಖೆಗಳ ಸಭೆ ಮಾಡುತ್ತಾನೆ. ಅವನಿಗೆ ಯಾವ ಫ್ರೋಟೋಕಲ್ ಇದೆ, ನನಗೆ ಯಾವ ಪ್ರೋಟೊ ಕಾಲ್ ಇದೆ ಎಂದು ಶಾಸಕ ಪ್ರೀತಮ್ ಜೆ. ಗೌಡ ವಿರುದ್ಧ ಹರಿಹಾಯ್ದು ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡಿದರು. 

     ಸಭೆಯಲ್ಲಿ ಎಲ್ಲಾರ ಸಲಹೆಯನ್ನು ಸ್ವೀಕರಿಸಿದ ಜಿಲ್ಲಾ ಮಂತ್ರಿ ಗೋಪಾಲಯ್ಯ ರವರು ಮಾತನಾಡಿ, ದಿನೆ ದಿನೆ ಹೆಚ್ಚಾಗುತ್ತಿರುವ ಕೊರೋನಾ ಪಾಸಿಟವ್ ಪ್ರಕರಣದ ಹಿನ್ನಲೆಯಲ್ಲಿ ಇನ್ನು ಮುಂದೆ ಹಾಸನ ಜಿಲ್ಲೆಯಲ್ಲಿ ವಾರದ ಮೂರು ದಿನ ಮಾತ್ರ ಅಂಗಡಿ-ಮುಗಟ್ಟನ್ನು ಬೆಳಿಗ್ಗೆ ೬ ರಿಂದ ೧೦ರ ವರೆಗೂ ತೆಗೆದು ವ್ಯವಹಾರ ಮಾಡಬಹುದು. ಉಳಿದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ಯಾರಾದರೂ ಕಾನೂನನ್ನು ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು. ಸರ್ಕಾರಿ ಕಚೇರಿಗೆ ಬರುವರು ತಮ್ಮ ಗುರುತ್ತಿನ ಚೀಟಿ ನೀಡಿ ಸಂಚಾರ ಮಾಡಬಹುದು. ಕೊರೊನಾ ಹೆಲ್ಪಲೈನ್ ಬಗ್ಗೆ ೪ ಬ್ಯಾಚ್ ಮಾಡಲಾಗುವುದು, ಇನ್ನು ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳು ತೆರೆದಿರುತ್ತದೆ ಎಂದು ಹೇಳಿದರು.

     ಕೊರೋನಾ ಹರಡುವಿಕೆಯ ವೇಗ ತಿಳಿದಿದ್ದರೂ ಬುಧವಾರ ನಡೆದ ಜಿಲ್ಲಾ ಮಂತ್ರಿ ಸಭೆಯಲ್ಲಿ ಅಂತರ ಕಾಪಾಡದೇ ಒಟ್ಟಿಗೆ ಕುಳಿತು ಸಭೆ ನಡೆಸಲಾಯಿತು.

      ಇದೆ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಉಪವಿಭಾಗಧಿಕಾರಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಸೇರಿದಂತೆ ಸಂಬAಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Post a Comment

Previous Post Next Post