ಶ್ರವಣಬೆಳಗೊಳ ಹೋಬಳಿಯಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿದ್ದು ತಡೆಯಲು ಗ್ರಾಮ ಪಂಚಾಯಿತಿ. ಆರಕ್ಷಕ ಠಾಣೆ. ಹಾಗೂ ಅರೋಗ್ಯ ಅಧಿಕಾರಿಗಳು ಊರಿನ ಮುಂಖಡರೊಂದಿಗೆ ಸಭೆ ನಡೆಸಿದರು.
ಪಟ್ಟಣದ ಆರಕ್ಷಕ ಠಾಣಾ ಆವರಣದಲ್ಲಿ ಸಭೆಯಲ್ಲಿ ಮಾತನಾಡಿದ ಆಡಳಿತ ವ್ಯೆದ್ಯಾಧಿಕಾರಿ ಡಾ. ಯುವರಾಜ್ ಹೊಂ ಐಸೋಲೇಷನ್ ಆದಷ್ಟು ತಡೆಯಬೇಕು ಹೋಂ ಐಸೋಲೇಷನ್ ಇರಬಹುದಾದ ಹೋಂ ಗಳಿಗೆ ಮಾತ್ರ ಅವಕಾಶ ನೀಡಿ ಮಿಕ್ಕಿದ್ದವರನ್ನು ಕೋವಿಡ್ ಕೇರ್ ಗೆ ತಂದು ಬಿಡಬೇಕು ಇದರಿಂದ ಕೋವಿಡ್ ತಡೆಯಲು ಸಾಧ್ಯವಿದೆ ಎಂದರು.
ಪಿ ಎಸ್ ಐ ಆರ್ ಮಂಜುನಾಥ್ ಮಾತನಾಡಿ ಕೋವಿಡ್ ತಡೆಗೆ ಎಲ್ಲರ ಸಹಕಾರ ಅಗತ್ಯ ಎಲ್ಲಾ ಇಲಾಖೆ ಸಹ ಒಟ್ಟಿಗೆ ಕರ್ತವ್ಯ ನಿರ್ವಹಿಸಬೇಕು. ಆರಕ್ಷಕ ಠಾಣೆಯಿಂದ ಕಟ್ಟು ನಿಟ್ಟಿನಲ್ಲಿ ಕ್ರಮ ಜರುಗಿಸಾಲಗುವುದು. ಸ್ವತಃ ತಾವೇ ನಾಳೆಯಿಂದ ರಸ್ತೆಗೆ ಇಳಿದು ಕರ್ತವ್ಯ ನಿರ್ವಹಿಸಲ್ಲಿದ್ದು ಅಗತ್ಯ ವಸ್ತು ಹೊರತು ಪಡಿಸಿ. ಮಿಕ್ಕಿಉಳಿದ ಎಲ್ಲಾ ಅಂಗಡಿ ಮುಚ್ಚಿಸಲಾಗುವುದು. ಕೋವಿಡ್ ಮಾರ್ಗಸೂಚಿಗಳನ್ನು ಯಾರು ಪಾಲಿಸುವುದಿಲ್ಲವೋ ಅವರಿಗೆ ದಂಡ ವಿಧಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲತಾ ರಮೇಶ್. ಮಾಜಿ ಅಧ್ಯಕ್ಷ ಲಕ್ಷ್ಮಣ. ಊರಿನ ಮುಖಂಡ ಪಾಲಾಕ್ಷ. ಜೆಡಿಎಸ್ ಹೋಬಳಿ ಅಧ್ಯಕ್ಷ ಸಾಗರ್. ಗ್ರಾಮ ಪಂಚಾಯತಿ ಸಿಬ್ಬಂದಿ ಆತಿಕ್. ಇತರರು ಇದ್ದರು
Tags
ಚನ್ನರಾಯಪಟ್ಟಣ