ಹಾಸನ ಮೇ೨೫ ;- ಜಿಲ್ಲೆಯಲ್ಲಿ ಪ್ರತಿ ಮನೆ ಮನೆ ಸಮೀಕ್ಷೆ, ಹಾಗೂ ಪರೀಕ್ಷೆಗಳನ್ನು ಹೆಚ್ಚಿಸಿ ಕೋವಿಡ್ ೧೯ ಸೋಂಕು ಹರಡುವಿಕೆಯನ್ನು ಸಂಪೂರ್ಣ ನಿಯಂತ್ರಿಸಿ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು ಗ್ರಾಮಿಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿದ್ದು ಅದನ್ನು ಸಂಪೂರ್ಣ ತಡೆಗಟ್ಟಲು ಗ್ರಾಮ ಮಟ್ಟದ ತಂಡಗಳನ್ನು ಸನದ್ದಗೊಳಿಸಿ ತರಭೇತಿ ನೀಡಿ ಇನ್ನೊಂದು ವಾರದೊಳಗೆ ವ್ಯವಸ್ಥಿತ ಕಾರ್ಯಾಚರಣೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿನ ದೈನಂದಿನ ೩೦೦೦ ಕ್ಕೂ ಅಧಿಕ ಆರ್.ಟಿ.ಪಿ.ಸಿ.ಅರ್ ಪರೀಕ್ಷೆಗಳ ಜೊತೆಗೆ ೧೦೦೦ ರ‍್ಯಾಟ್ ಪರೀಕ್ಷೆಗಳನ್ನೂ ನಡೆಸುವಂತೆ ಅವರು ನಿರ್ದೇಶನ ನೀಡಿದರು.
ಹೊಸದಾಗಿ ಪತ್ತೆಯಾಗುವ ಕೋವಿಡ್ ಸೊಂಕಿತರೆಲ್ಲರನ್ನು ನಿಗದಿತ ಆಸ್ಪತೆಗಳು ಅಥವಾ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರ ಮಾಡಿ ಸೋಂಕು ಹರಡುವಿಕೆಯನ್ನು ತಡೆಗಟ್ಟಿ, ಮುಂದಿನ ೧೫ ದಿನಗಳೊಳಗೆ ಎಲ್ಲವನ್ನೂ ಸಂಪೂರ್ಣ ನಿಯಂತ್ರಣಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಮ್ಸ್ ಆಸ್ಪತ್ರೆಗೆ ಈಗಾಗಲೇ ೨೦ಕೆ.ಎಲ್ ಟ್ಯಾಂಕ್ ಮಂಜೂರಾಗಿದ್ದು ಶೀಘ್ರ ಅಳವಡಿಕೆಯಾಗಲಿದೆ ನೆನ್ನೆಯ ಸಭೆಯಲ್ಲಿ ಕೇಂದ್ರ ಸರ್ಕಾರದಿಂದ ಹೊಸದಾಗಿ ಪ್ರತಿ ನಿಮಿಷಕ್ಕೆ ೧೦೦೦ ಲೀಟರ್ ಉತ್ಪಾದಿಸುವ ಆಕ್ಸಿಜನ್ ಜನರೇಟರ್ ಮಂಜೂರಾಗಿದೆ. ರಾಜ್ಯ ಸರ್ಕಾರದಿಂದ ಪ್ರತಿ ನಿಮಿಷಕ್ಕೆ ೧೫೦೦ ಲೀಟರ್ ಉತ್ಪಾದಿಸುವ ಎರಡು ಆಮ್ಲಜನಕ ಜನರೇಟರ್ ಪೂರೈಕೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಇದರಿಂದ ಆಸ್ಪತ್ರೆಯ ಆಕ್ಸಿಜನ್ ಸಾಮರ್ಥ್ಯ ಹೆಚ್ಚಾಗಲಿದೆ ಅವರು ಹೇಳಿದರು.
ಜಿಲ್ಲೆಗೆ ಹೊಸದಾಗಿ ೧೦೦ ಆಮ್ಲಜನಕ ಸಿಲಿಂಡರ್ ೫೦ ಮಾನಿಟರ್‌ಗಳನ್ನು ಪೂರೈಸಲಾಗುವುದು ಎಲ್ಲಾ ಸೌಲಭ್ಯ ಬಳಸಿ ಸಾವಿನ ಪ್ರಮಾಣ ಸಂಪೂರ್ಣ ಕಡಿಮೆ ಮಾಡಿ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು.
ಬ್ಲಾ÷್ಯಕ್ ಫಂಗಸ್ ಹಾಗೂ ವೈಟ್ ಫಂಗಸ್ ಸೋಂಕಿತರನ್ನು ಬೇರೆಡೆಗೆ ಕಳಿಸದೆ ಅಯಾಯ ಜಿಲ್ಲೆಗಳಲ್ಲಿಯೇ ಚಿಕಿತ್ಸೆ ನೀಡಿ ಅದಕ್ಕೆ ಬೇಕಿರುವ ಔಷಧಿಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗೆ ಔಷಧಗಳ ಪೂರೈಕೆಗೆ ಆಸ್ಪತ್ರೆಗಳಲಲಿ ಕೊರತೆ ಇಲ್ಲ ಬೇಡಿಕೆಗನುಸಾರವಾಗಿ ಸರಬರಾಜು ಮಾಡಲು ಸೂಚಿಸಲಾಗಿದೆ, ಅದರೆ ಆಮ್ಲಜನಕವನ್ನು ಜವಾಬ್ದಾರಿಯುತವಾಗಿ ಬಳಸಿ ಎಂದು ಮುಖ್ಯಕಾರ್ಯದರ್ಶಿ ಅವರು ನಿರ್ದೇಶನ ನೀಡಿದರು.
ಗ್ರಾಮ ಮಟ್ಟದ ಸಮಿತಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಸ್ವಾö್ಯಬ್ ಸಂಗ್ರಹಕ್ಕೆ ಈಗ ನೇಮಿಸಿರುವವರ ಸೇವೆ ಜೊತೆಗೆ ಹೆಚ್ಚುವರಿ ಅಗತ್ಯ ಇದ್ದಲ್ಲಿ ಆಶಾ ಕಾರ್ಯಕರ್ತೆಯರಿಗೂ ತರಬೇತಿ ನೀಡಿ ಎಲ್ಲಾ ಮನೆಗಳಲ್ಲಿ ಸೋಂಕು ಲಕ್ಷಣ ಇರುವವರನ್ನು ತಪಾಸಣೆಗೆ ಒಳಪಡಿಸಿ ಎಂದು ಅದೇ ರೀತಿ ಲಭ್ಯವಿರುವ ಕೋವಿಡ್ ಲಸಿಕೆಗಳನ್ನು ಏಕಕಾಲದಲ್ಲಿ ಬೀದಿ ಬದಿ ವ್ಯಾಪರಿಗಳು ಸೇರಿದಂತೆ ಗುರುತಿಸಲಾಗಿರುವ ಆದ್ಯತ ಗುಂಪುಗಳ ಅರ್ಹರಿಗೆ ಅಯಾಯ ತಾಲ್ಲೂಕುಗಳಲ್ಲೇ ವಿತರಿಸಿ ಎಂದು ಅವರು ಪಿ.ರವಿಕುಮಾರ್ ಸೂಚನೆ ನೀಡಿದರು.
ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ಮಾತನಾಡಿ ಕೊವಿಡ್ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಕೈಗೊಳ್ಳುವಂತೆ ಹಾಗೂ ಮುಖ್ಯ ಕಾರ್ಯದರ್ಶಿ ಅವರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಈವರೆಗೆ ಕೈಗೊಂಡಿರುವ ಕ್ರಮಗಳು ಹೆಚ್ಚುವರಿಯಾಗಿ ಅಗತ್ಯವಿರುವ ಆಮ್ಲಜನಕ ಮತ್ತು ಔಷಧಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಹಿಮ್ಸ್ನಲ್ಲಿ ಆಮ್ಲಜನಕ ಬಫರ್ ಸ್ಟಾಕ್ ವ್ಯವಸ್ಥೆಯ ಕೊರತೆ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಆಮ್ಲಜನಕ ಘಟಕದ ಅಳವಡಿಕೆ ಅವಶ್ಯಕತೆಗಳ ಬಗ್ಗೆ ಅವರು ಮನವಿ ಮಾಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹಿಮ್ಸ್ ನಿರ್ದೇಶಕರಾದ ಡಾ|| ರವಿ ಕುಮಾರ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್, ಮತ್ತಿತರರು ಹಾಜರಿದ್ದರು.