ಅರಕಲಗೂಡು: ಲಾಕ್ ಡೌನ್ ಸಂದರ್ಭದಲ್ಲಿ ಆಹಾರದ ಕೊರತೆ ಎದುರಿಸುತ್ತಿದ್ದ ವಲಸೆ ಜನರು, ಬಿಕ್ಷುಕರು ಗಳಿಗೆ ಕೊಣನೂರಿನ ಮಾನಸ ಲೋಹಿತ್ ಅವರು ಆಹಾರ ಮತ್ತು ನೀರು ಒದಗಿಸಿದರು. ಪಟ್ಟಣ ಹಾಗೂ ತಾಲೂಕಿನ ವಿವಿದೆಡೆಗಳಲ್ಲಿ ಲಾಕ್ ಡೌನ್ ನಿಂದ ಆಹಾರ ಸಿಗದೇ ಅಲೆಮಾರಿ ಜನರು ಪರದಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಾನಸ ಲೋಹಿತ್ ಅವರು ಸ್ವಯಂ ಪ್ರೇರಿತವಾಗಿ ಆಹಾರ ಮತ್ತು ನೀರನ್ನು , ಸ್ಥಳಕ್ಕೆ ತೆರಳಿ ಒದಗಿಸಿದರು. ಕೊಣನೂರು, ರಾಮನಾಥಪುರ ಹಾಗೂ ಅರಕಲಗೂಡು ಪಟ್ಟಣದ ವಿವಿಧ ಸ್ಥಳಗಳಲ್ಲಿ ಅವಶ್ಯಕತೆ ಇರುವವರಿಗೆ ಮಾನಸ ಲೋಹಿತ್ ಅವರ ತಂಡ ನಿಯಮಿತವಾಗಿ ಆಹಾರ ಒದಗಿಸುತ್ತಿದೆ.
Tags
ಅರಕಲಗೂಡು