ಮರ‍್ನಾಲ್ಕು ದಿನದಲ್ಲಿ ಹಾಸನ ಜಿಲ್ಲೆಯ ಕೊರೋನಾ ಪರಿಸ್ಥಿತಿ ಸರಿಪಡಿಸದಿದ್ದರೇ ಕಾಂಗ್ರೆಸ್ ಪಕ್ಷದಿಂದ ಹೋರಾಟ: ಗೋಪಾಲಸ್ವಾಮಿ ಎಚ್ಚರಿಕೆ

ಹಾಸನ: ಮೂರು ನಾಲ್ಕು ದಿನಗಳಲ್ಲಿ ಹಾಸನ ಜಿಲ್ಲೆಯ ಕೊರೋನಾ ಸೋಂಕಿನ ಪರಿಸ್ಥಿತಿ ಸರಿಪಡಿಸದಿದ್ದರೇ ತಾಲೂಕು ಕಛೇರಿ ಮತ್ತು ಜಿಲ್ಲಾಧಿಕಾರಿ ಕಛೇರಿ ಮುಂದೆ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುವುದಾಗಿ ವಿಧಾನ ಪರಿಷತ್ತು ಸದಸ್ಯ ಗೋಪಾಲಸ್ವಾಮಿ ಎಚ್ಚರಿಸಿದರು.



       ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡಿ, ಕೊರೋನಾ ವಿಚಾರದಲ್ಲಿ ಜಿಲ್ಲೆ ಒಳಗೆ ತಾತ್ಸರ ಆಗುತ್ತಿದೆ. ರೋಗಿಗಳಿಂದ ಆಕ್ಸೀಜನ್, ಮೆಡಿಸನ್ ಇಲ್ಲ ಹಾಗೂ ಹಾಸಿಗೆ ಇಲ್ಲದೇ ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ನನಗೆ ದೂರು ಬಂದ ಹಿನ್ನಲೆಯಲ್ಲಿ ನಾನೋಬ್ಬ ಶಾಸಕನಾಗಿ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಇತರರಿಗೆ ಕರೆ ಮಾಡಿ ಮನವರಿಕೆ ಮಾಡಿದರೇ  ಕೈಚೆಲ್ಲುವ ಕೆಲಸ ಮಾಡಲಾಗುತ್ತಿದೆ. ನಾವು ಯಾವ ದೇಶದಲ್ಲಿ ಇದ್ದೀವಿ ಎಂದು ಪ್ರಶ್ನೆ ಎದುರಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಕಳೆದ ವರ್ಷದಲ್ಲಿ ಕೊರೋನಾ ನಿಬಾಯಿಸಿದಂತೆ ಈವರ್ಷದಲ್ಲಿ ಸರಿಯಾದ ಚಿಕಿತ್ಸೆ ನಡೆಯುತ್ತಿಲ್ಲ. ಸಚಿವರಿಗೂ ಮನವರಿಕೆ ಮಾಡಿದರು ಪ್ರಯೋಜನವಾಗಿಲ್ಲ. ಮತ್ತು ಜಿಲ್ಲಾಧಿಕಾರಿಗಳು ಕೂಡ ಈ ವಿಚಾರದಲ್ಲಿ ತಿಳಿಸಿದರೂ ಆಯ್ತು ಎಂದು ಆರೈಕೆಯ ಉತ್ತರ ಕೊಡುವ ಮೂಲಕ ತಮ್ಮ ಅಸಹಯಕತೆ ಪ್ರದರ್ಶಿಸಿದ್ದಾರೆ. ಕೊರತೆ ಇರುವ ನರ್ಸ್, ಲ್ಯಾಬ್ ಟೆಕ್ನಿಸಿಯನ್ ಹುದ್ದೆ ಭರ್ತಿ ಮಾಡುವುದು, ತುರ್ತು ವಾಹನ ಹೆಚ್ಚುವರಿ ತರಿಸುವುದು, ಖಾಲಿ ಇರುವ ಮುರಾರ್ಜಿ ಶಾಲೆಯಲ್ಲಿ ಹೆಚ್ಚುವರಿ ಹಾಸಿಗೆ ನಿರ್ಮಿಸುವುದು ಯಾವುದು ನಿಬಾಯಿಸುತ್ತಿಲ್ಲ ಇದರಿಂದ ಕೊರೋನಾ ಸೋಂಕು ಹಾಸನ ಜಿಲ್ಲೆಯಲ್ಲಿ ಕಡಿಮೆ ಆಗುತ್ತಿಲ್ಲ. ದಿನೆ ದಿನೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲಾ ಸರಕಾರದ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ನೇರ ಹೊಣೆ ಹೊರಬೇಕು. ಕೈಚೆಲ್ಲುವ ಕೆಲಸ ಇವರಿಂದ ಆಗುತ್ತಿದ್ದು, ಹಿಂದೆ ಪ್ಲೇ ರೋಗ ಬಂದರೆ ಊರು ಬಿಟ್ಟು ಬೇರೆ ಸ್ಥಳಕ್ಕೆ ಹೋಗುತ್ತಿದ್ದ ಪರಿಸ್ಥಿತಿ ಬಂದಿದೆ. ನಮ್ಮಂತಹ ಪ್ರತಿನಿಧಿಗಳೆ ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ಬಂದಿದೆ. ಕೂಡಲೇ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದರು. 

        ಇನ್ನು ಮರ‍್ಮಾಲ್ಕು ದಿನದಲ್ಲಿ ಕೊರೋನಾದ ಪರಿಸ್ಥಿತಿ, ಕೊರತೆಯನ್ನು ಸರಿಪಡಿಸದಿದ್ದರೇ ತಾಲೂಕು ಕಛೇರಿ ಮತ್ತು ಜಿಲ್ಲಾಧಿಕಾರಿ ಕಛೇರಿ ಮುಂದೆ ಕಾಂಗ್ರೆಸ್ ಪಕ್ಷದವತಿಯಿಂದ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ೧೪೪ ಸೆಕ್ಷೆನ್ ಜಾರಿ ಇದ್ದರೇ ನಮ್ಮನ್ನು ಬೇಕಾದರೇ ಜೈಲಿಗೆ ಹಾಕಲಿ. ಪ್ರತಿಭಟನೆ ಮಾಡುವಾಗ ನಾವೆಲ್ಲಾ ಸಾಮಾಜಿಕ ಅಂತರ ಕಾಪಾಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರನ್ನು ಉಳಿಸುವ ಕೆಲಸ ಪಕ್ಷ ಮಾಡಬೇಕಾಗುತ್ತದೆ. ಹಾಸನದ ಜಿಲ್ಲಾ ಸರ್ಜನ್ ವರ್ಗಾವಣೆ ಮಾಡದಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಕೂಡ ಒತ್ತಾಯಿಸಿರುವುದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸರ್ಜನ್ ಕೃಷ್ಣಮೂರ್ತಿ ವರ್ಗಾವಣೆ ಎಷ್ಟು ಸೂಕ್ತ ಎಂದರು. 

    ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಮಹೇಶ್ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಜೆಡಿಎಸ್ ನ ಶಾಸಕರು ಮತ್ತು ಬಿಜೆಪಿ ಓರ್ವ ಶಾಸಕರು ಸಾರ್ವಜನಿಕರಿಗೆ ಯಾವ ಮನವರಿಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಶಾಸಕರು ತಮ್ಮ ಜವಬ್ಧಾರಿಯನ್ನು ಅರಿತು ಕೆಲಸ ಮಾಡಬೇಕು. ಎಲ್ಲಾ ಶಾಸಕರು ಒಂದು ಸಭೆ ಕರೆದು ಸಾರ್ವಜನಿಕರಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಬೇಕು ಎಂದರು. ಖಾಯಿಲೆ ಬರುವುದನ್ನು ಯಾರು ತಪ್ಪಿಸಲು ಆಗುವುದಿಲ್ಲ ಆದರೇ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಇನ್ನು ಸರಕಾರದ ಮಂತ್ರಿ ಹದಗೆಟ್ಟಿ ಹೋಗಿದ್ದಾರೆ. ಆರೋಗ್ಯ ಸಚಿವರು ಯಾವ ಪ್ರಯೋಜನವಿಲ್ಲ. ಸರಕಾರವೇ ಫೇಲಾಗಿದೆ ಎಂದು ಹರಿಹಾಯ್ದರು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆದು ಆಗಿರುವ ಅನಾಹುತಗಳಿಗೆ ಎಚ್ಚೆತ್ತುಕೊಂಡು ಜನರ ಪ್ರಾಣ ಉಳಿಸುವ ಕೆಲಸ ಮಾಡಿದರೇ ನಾವೆಲ್ಲಾ ಕೈಜೋಡಿಸುತ್ತೇವೆ ಎಂದು ಸಲಹೆ ನೀಡಿದರು. 


Post a Comment

Previous Post Next Post