ಹಾಸನ: ಸಾಗುವಳಿ ಮಾಡುತ್ತಿದ್ದ ದಲಿತರ ಭೂಮಿಯಲ್ಲಿ ಗಿಡ ನೆಡಲು ಮುಂದಾದ ಅರಣ್ಯ ಇಲಾಖೆಯವರ ಕ್ರಮಕ್ಕೆ ಗಂಗೂರು ಜೀತ ವಿಮುಕ್ತ ದಲಿತರು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಅರಕಲಗೂಡು ತಾಲ್ಲೂಕಿನ, ಗಂಗೂರು ಜೀತ ವಿಮುಕ್ತ ದಲಿತರಿಗೆ ಕಳೆದ ೨೭ ವರ್ಷಗಳಿಂದ ಭೂಮಿ ಮಂಜೂರು ಮಾಡದ ದಲಿತ ವಿರೋಧಿ, ನಾಚಿಕೆಗೇಟ್ಟ, ಬಂಡ ಸರ್ಕಾರಗಳು ಮತ್ತು ಜಿಲ್ಲಾಡಳಿತವು ಬಡ ದಲಿತರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿದ್ದೆಂದು ಹೇಳಿ ಅಲ್ಲಿಂದ ಆ ಜೀತ ವಿಮುಕ್ತ ಭೂಹೀನ ದಲಿತರನ್ನು ಕಳೆದ ತಿಂಗಳು ಎಪ್ರಿಲ್ ೦೧ರಂದು ಅಮಾನವೀಯವಾಗಿ ಒಕ್ಕಲೆಬ್ಬಿಸಲಾಗಿತ್ತು.
ಅರಣ್ಯ ಇಲಾಖೆ, ಜಿಲ್ಲಾ ಮತ್ತು ತಾಲ್ಲೂಕು ಡಳಿತದ ದಲಿತ ವಿರೋಧಿ ಈ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಗಂಗೂರು ಜೀತ ವಿಮುಕ್ತ, ಭೂಹೀನ ದಲಿತರಿಗೆ ಕೂಡಲೇ ಭೂಮಿಯನ್ನು ಮಂಜೂರು ಮಾಡಬೇಕೆಂದು ಹಾಗೂ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಹಾಸನ ಜಿಲ್ಲಾಧಿಕಾರಿಗಳಿಗೆ ಮತ್ತು ಅರಕಲಗೂಡು ತಹಶಿಲ್ದಾರರಿಗೆ ಗಂಗೂರಿನ ಜೀತ ವಿಮುಕ್ತ ದಲಿತರು 'ದಲಿತ ಹಕ್ಕುಗಳ ಸಮಿತಿ-ಕರ್ನಾಟಕ (ಡಿಎಚ್‌ಎಸ್)', ಜಿಲ್ಲೆಯ ದಲಿತ, ಜನಪರ ಮುಖಂಡರಿAದ ಹಕ್ಕೊತ್ತಾಯ ಮಾಡಲಾಗಿತ್ತು.
ಇದುವರೆಗೂ ಭೂಮಿ ಮತ್ತು ಶಾಶ್ವತ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಪ್ರಸ್ತುತ ಕೊವಿಡ್-೧೯ (ಕೊರೊನ ಸೋಂಕು) ದೇಶದವನ್ನು ಆವರಿಸಿ ಜನರು ಜಿವನ್ಮರಣ ಹೋರಾಟದಲ್ಲಿ ತೊಡಗಿರುವಾಗ, ರಾಜ್ಯ ಮತ್ತು ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಸಂಧರ್ಭದಲ್ಲಿ ಬಡವರು,ದಲಿತರು, ದುಡಿಯುವ ವರ್ಗದ ಜನರು ಜೀವನ ನಿರ್ವಹಣೆಯ ಸಂಕಷ್ಟದಲ್ಲಿದ್ದಾರೆ.
ಆದರೆ ಇಂತಹ ಸಂದರ್ಭವನ್ನೇ ಬಳಸಿಕೊಂಡು ಅರಣ್ಯ ಇಲಾಖೆಯು ಗಂಗೂರಿನ ದಲಿತರು ಉಳುಮೆ ಮಾಡುತ್ತಿದ್ದ ಭೂಮಿಗೆ ಗಿಡ ನೆಡಲು ಮುಂದಾಗಿರುವುದು ತೀವ್ರ ಖಂಡನೀಯವಾದುದಲ್ಲದೇ, ಇದು ಎಲ್ಲರ ಆಕ್ರೋಷಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯು ಬಾನುವಾರ ಗಿಡನೆಡಲು ಮುಂದಾದಾಗ ಆಕ್ರೋಶಗೊಂಡ ಗಂಗೂರಿನ ದಲಿತರು ಪ್ರತಿಭಟಿಸಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.* ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಾಪಾಸ್ಸಾಗಿದ್ದಾರೆ.
ಗಂಗೂರು ಜೀತ ವಿಮುಕ್ತ, ಭೂ ಹೀನ ದಲಿತರಿಗೆ ಕೂಡಲೇ ತಲಾ ೪.೩೦ ಎಕರೆ ಉಳುಮೆಯ ಭುಮಿಯನ್ನು ಮಂಜೂರು ಮಾಡಬೇಕು ಮತ್ತು ಶಾಶ್ವತ ಪರಿಹಾರವನ್ನು ಕಲ್ಲಿಸಬೇಕೆಂದು ಸರ್ಕಾರ, ಜಿಲ್ಲಾಡಳಿತಕ್ಕೆ ಮತ್ತೊಮ್ಮೆ ಈ ಮೂಲಕ ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ಜಿಲ್ಲೆಯ ದಲಿತ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ತೀವ್ರತರವಾದ ಹೋರಾಟ ನಡೆಸಲು ಮುಂದಾಗುತ್ತೇವೆAದು ಈ ಮೂಲಕ ಎಚ್ಚರಿಸಿ ತಿಳಿಸುತ್ತೇವೆ.*
ಜೊತೆಗೆ ಮೇಲ್ಕಂಡ ಗಿಡ ನೆಡುವ ಕೆಲಸಕ್ಕೆ ಚಿಕ್ಕ ಮಕ್ಕಳನ್ನು ಬಳಸಿಕೊಂಡು ಮುಂದಾದ ಅರಣ್ಯ ಇಲಾಖೆಯ ಕ್ರಮ ಅಮಾನವೀಯ. ಈ ಬಗ್ಗೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿಯ ಮೇಲೆ ತಕ್ಷಣದಲ್ಲಿ ಕಾನೂನು ಕ್ರಮ ಜರುಗಿಸಿ ಬಾಲಕಾರ್ಮಿಕ ನಿಷೇಧ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕೆಂದು ಸಂಬAಧಪಟ್ಟ ಇಲಾಖೆಗಳಿಗೆ ಒತ್ತಾಯಿಸುತ್ತೇವೆ.