ಕೊರೋನಾ ಸೋಂಕಿತರ ಕುಟುಂಬಕ್ಕೆ ಕನಿಷ್ಠ ೧ ಲಕ್ಷ ನೀಡಿ, ಸರಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸದಿದ್ರೆ ಹೋರಾಟ: ಹೆಚ್.ಕೆ. ಕುಮಾರಸ್ವಾಮಿ

ಹಾಸನ: ಕೊರೋನಾ ಸೋಂಕಿತರ ಕುಟುಂಬಕ್ಕೆ ಕನಿಷ್ಠ ೧ ಲಕ್ಷ ನೀಡಿ, ಸರಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯವನ್ನು ಸರಕಾರ ಕೂಡಲೇ ಒದಗಿಸದಿದ್ದರೇ ಜೆಡಿಎಸ್ ಪಕ್ಷದವತಿಯಿಂದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಎಚ್ಚರಿಸಿದರು.



      ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕೊರೋನಾ ಸೋಂಕು ಹರಡುವಿಕೆ ದಿನೆ ದಿನೆ ಹೆಚ್ಚಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕರ್ತವ್ಯ ನಿರ್ವಹಿಸದೆ ಎರಡು ಸರಕಾರಗಳು ಅಸಹಾಯಕವಾಗಿ ಕೈ ಚೆಲ್ಲಿ ಕುಳಿತಿವೆ. ಚಾಮರಾಜನಗರದ ದುರಂತ ನಿಜಕ್ಕೂ ವಿಷಾದನೀಯ. ಸರ್ಕಾರ ಮತ್ತು ಸ್ಥಳಿಯ ಆಡಳಿತ ಸಂಪೂರ್ಣ ವಿಫಲವಾಗಿದೆ. ಉದಾಸೀನದಿಂದಲೇ ಈ ದುರಂತ ನಡೆದಿದೆ, ಇದಕ್ಕೆ ಸರ್ಕಾರ ಬೇರೆ ಕಾರಣ ನೀಡಬಾರದು. ಜಿಲ್ಲಾಡಳಿತದ ವೈಫಲ್ಯ ಕಾರಣ, ತಪ್ಪಿತಸ್ಥರನ್ನು ಕೂಡಲೇ ಅಮಾನತು ಮಾಡುವ ಮೂಲಕ ಇದು ಬೇರೆಯವರಿಗೆ ಎಚ್ಚರಿಕೆಯ ಪಾಠವಾಗಬೇಕು ಎಂದರು. ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆಗೆ ಬೇಕಾದ ಸಿಬ್ಬಂದಿಯನ್ನು ಕೂಡಲೇ ನೇಮಿಸಿಕೊಳ್ಳಬೇಕು. ಅವರಿಗೆ ಸಂಬಳ ಬೇಕಾದರೇ ಕಡಿಮೆ ಕೊಟ್ಟರೂ ಕೆಲಸ ಮಾಡಲು ಸಿದ್ಧರಿದ್ದಾರೆ. ಕೂಡಲೇ ಕೊರತೆ ಇರುವ ವೈದ್ಯರು, ಫಿಜಿಷಿಯನ್ ನೇಮಕ ಮಾಡಿಕೊಳ್ಳಬೇಕು. ಜೊತೆಗೆ 

ವೈದ್ಯರು, ಸಿಬ್ಬಂದಿ, ಚಿಕಿತ್ಸಾ ಉಪಕರಣ ಕೊರತೆ ಎಲ್ಲೆಡೆ ಕಾಡುತ್ತಿದ್ದರೂ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಿಮಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೆ ಇದ್ದರೆ ಕೂಡಲೇ ರಾಜೀನಾಮೆ ಕೊಡಲು ಮುಂದಾಗಿ ಎಂದು ಆಗ್ರಹಿಸಿದರು. 

     ಹಾಸನ ಹಿಮ್ಸ್ ಜಿಲ್ಲಾ ಸರ್ಜನ್ ರವರು ಉತ್ತಮವಾಗಿ ಸ್ಪಂದಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಈ ವೇಳೆ ವರ್ಗಾವಣೆ ಮಾಡಬಾರದು. ವರ್ಗಾವಣೆ ರದ್ದು ಮಾಡಿರುವುದು ಸ್ವಾಗತಾರ್ಹವಾಗಿದೆ. ರೆಮಿಡಿಸಿವರ್ ಮೆಡಿಸನ್ ನನ್ನು ಎಲ್ಲಾ ಕಡೆಯೂ ಪೂರೈಕೆ ಮಾಡಬೇಕು. ಇಲ್ಲವಾದರೇ ಇದರ ಕೊರತೆಯಿಂದಲೇ ಇನ್ನು ಹೆಚ್ಚು ಜನರ ಸಾವು ನೋಡಬೇಕಾಗುತ್ತದೆ. ರೆಮಿಡಿಸಿವರ್ ದುರುಪಯೋಗವಾದರೆ ಕ್ರಮ ಕೈಗೊಳ್ಳಬೇಕು. ಇನ್ನು ಬೇಡಿಕೆ ಇರುವ ಹಣಕಾಸು ನೀಡಬೇಕು. ಬಡವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಪೊಲೀಸರು ಸೇರಿ ಕೊರೊನಾ ವಾರಿಯರ್ಸ್ಗಳಿಗೆೆ ವಿಮೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇವೆ. ಸರ್ಕಾರದ ಮಾರ್ಗ ಸೂಚಿಯಂತೆ ನಡೆದುಕೊಳ್ಳಲು ಮುಂದಾಗಿ. ಹೀಗೆ ಮಾಡಿದರೆ ಕೊರೋನಾ ಹರಡುವಿಕೆಯನ್ನು ತಡೆಯಬಹುದು. 

ಯಾರಿಗೆ ಕೊರೋನಾ ಪಾಸಿಟಿವ್ ಬಂದಿದೆ ಅಂತಹ ಸೋಂಕಿತರ ಕುಟುಂಬಕ್ಕೆ ಕನಿಷ್ಠ ೧ ಲಕ್ಷ ರೂ ಆರ್ಥಿಕ ನೆರವು ನೀಡುವ ಮೂಲಕ ಸಲ್ಪವಾದರೂ ನೆರವಾಗಬೇಕು. ಯಾರೆ ರೋಗಿ ಆಸ್ಪತ್ರೆಗೆ ಬಂದರೆ ವಾಪಸ್ ಕಳಿಸಬಾರದು. ಅವರಿಗೆ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಇಲ್ಲವಾದರೆ ನಮ್ಮ ಪಕ್ಷದಿಂದ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. 

      ಇನ್ನು ನಡೆಯಬೇಕಾಗಿರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯನ್ನು ಸರ್ಕಾರ ಮುಂದೂಡಬೇಕು. ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹಿನ್ನೆಡೆ ಆಗಿರಬಹುದು. ಆದರೇ 

ನಾವು ಗೌರವಯುತವಾಗಿ ಮತ ಪಡೆದಿದ್ದೇವೆ. ಮುಂದೆ ಸುಧಾರಿಸಿಕೊಳ್ಳುತ್ತೇವೆ. ದೇಶದಲ್ಲಿ ಬಿಜೆಪಿಯ ವಿರೋಧಿ ಅಲೆ ಈಗಾಗಲೇ ಆರಂಭವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷ ಸಂಘಟನೆ ಕೆಲಸ ಆರಂಭವಾಗಲಿದೆ. 

ದೇಶಕ್ಕೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ. ಈ ವಿಚಾರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಮಮತಾ ಬ್ಯಾನರ್ಜಿ ಸೇರಿದಂತೆ ಇತರರು ಚರ್ಚೆ ಮಾಡುವ ಮೂಲಕ ಉತ್ತಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. 

      ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಎಸ್. ದ್ಯಾವೇಗೌಡ ಉಪಸ್ಥಿತರಿದ್ದರು.


Post a Comment

Previous Post Next Post