ಬೇಲೂರು : ಇಲ್ಲಿನ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಪರವಾದ ಕೆಲವೊಂದು ಕಾರ್ಯದಲ್ಲಿ ತೊಡಗಿದ್ದಾರೆ.
ಹಿಂದಿದ್ದ ಅಧಿಕಾರಿಗಳು ಕೊರೊನಾ ಸಂದರ್ಭ ವಾರಿಯರ್ಸ್
ಆಗಿ ಉತ್ತಮ ಕಾರ್ಯಗಳ ಮಾಡಿದ್ದರೂ ಇದೀಗ ಇನ್ನೊಂದು
ಹೆಜ್ಜೆ ಮುಂದೆ ಹೋಗಿರುವ ಹಾಲಿ ಅಧಿಕಾರಿಗಳು
ಜನಸಾಮಾನ್ಯರೊಂದಿಗೆ ಸೌಹಾರ್ಧಯುತ ವಾತಾವರಣದೊಂದಿಗೆ
ಹಲವು ಜನಪರವಾದ ಕೆಲಸಗಳತ್ತ ಹೆಜ್ಜೆ ಇಟ್ಟಿದ್ದಾರೆ.
ಪಾದಚಾರಿಗಳು ರಸ್ತೆ ದಾಟಲು ರಸ್ತೆಗೆ ಅಡ್ಡಪಟ್ಟಿ
ಅಳವಡಿಕೆ, ರಸ್ತೆ ಉಬ್ಬುಗಳು, ಸಿಸಿ ಕ್ಯಾಮರಾ ಅಳವಡಿಕೆ, ಇರುವ ಕಿರಿದಾದ ರಸ್ತೆಯಲ್ಲೆ ಸಾಧ್ಯವಾದಷ್ಟು ವಾಹನ ನಿಲುಗಡೆ
ಸಮರ್ಪಕ ವ್ಯವಸ್ಥೆ ಬಗ್ಗೆ ಬೇಲೂರು ಪೊಲೀಸ್ ಅಧಿಕಾರಿಗಳು
ಹೆಚ್ಚು ಗಮನ ಹರಿಸಿದ್ದು ಇದು ಸಾರ್ವಜನಿಕರ ಪ್ರಶಂಸೆಗೆ
ಕಾರಣವಾಗಿದೆ. ಇಲ್ಲಿನ ಆರಕ್ಷಕ ವೃತ್ತ ನಿರೀಕ್ಷಕ ಕಚೇರಿ
ಮುಂಭಾಗ ಬಸವೇಶ್ವರ ವೃತ್ತದಲ್ಲಿ 2 ದಿನ ಹಿಂದೆ ಅಳವಡಿಸಿದ್ದ 2 ಸಿಸಿ ಕ್ಯಾಮರಾದ ಜೊತೆಗೆ ಇದೀಗ ಹೆಚ್ಚುವರಿಯಾಗಿ 5
ಕ್ಯಾಮರಾಗಳನ್ನು ಹೊಂದಿದೆ. ಕ್ಯಾಮರಾಗಳು ಉತ್ತಮ
ಗುಣಮಟ್ಟದ್ದಾಗಿದ್ದು ಠಾಣೆಯಲ್ಲೆ ಕುಳಿತು (ಸಿಪಿಐ ಹಾಗೂ ಪಿಎಸ್‍ಐ)ವಾಹನ ಸಂಖ್ಯೆ ಸಹಿತ ವಾಹನ ಸಂಚಾರ ಕುರಿತು ನಿಗಾ ಇಡುವುದಕ್ಕೆ ಈ ಕ್ಯಾಮರಾ ಸಹಕಾರಿ ಆಗಿದೆ.
ಈ ಸ್ಥಳಕ್ಕೆ ಈ ಕ್ಯಾಮರಾಗಳ ಅಗತ್ಯ ಇತ್ತು
ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಇದನ್ನು ಪೂರೈಸಿರುವ
ಹೆಗ್ಗಳಿಕೆ ಅಧಿಕಾರಿಗಳದ್ದಾಗಿದೆ. ಈ ಕಾರಣದಿಂದ ವಾಹನ
ಸಂಚಾರಿಗಳು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವ
ಅಗತ್ಯವಿದೆ. ಇಲ್ಲದಿದ್ದಲ್ಲಿ ಠಾಣೆಯಲ್ಲೆ ಕುಳಿತು ವಾಹನ ಸಂಖ್ಯೆ
ಸಹಿತ ಪ್ರಕರಣ ದಾಖಲಿಸುವ ಸಾಧ್ಯತೆಯನ್ನು
ಅಲ್ಲಗೆಳೆಯುವಂತಿಲ್ಲ.
ಜಾಗೃತಿ ಇಲ್ಲ: ಕೊರೊನಾ ಹೆಮ್ಮಾರಿಯ ಎರಡನೆ ಅಲೆಯ ಈ
ಸಂದರ್ಭ ಸಾರ್ವಜನಿಕರಲ್ಲಿ ಎಚ್ಚರಿಕೆ ಇಲ್ಲದಿರುವುದು
ಗೋಚರಿಸುತ್ತಿದೆ. ನಿಯಮ ಮೀರಿ ಸುಕಾಸುಮ್ಮನೆ ವಾಹನ ಚಾಲನೆ ಮಾಡುವವರ ಬಗ್ಗೆ ಲಾಠಿ ಸಹಿತ ಕ್ರಮ ಕೈಗೊಳ್ಳುವುದಕ್ಕೆ
ಉನ್ನತ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ
ಪೊಲೀಸರು ಲಾಠಿಯಿಂದ ದೂರವಾಗಿದ್ದಾರೆ. ಇದನ್ನೇ ನೆಪ
ಮಾಡಿಕೊಂಡ ದ್ವಿಚಕ್ರ ಮಾಲೀಕರು ಬೇಕಾಬಿಟ್ಟಿ ವಾಹನ
ಓಡಿಸುವುದು ಕಂಡುಬರುತ್ತಿದೆ. ಇದರಿಂದ ನೋವು
ಅನುಭವಿಸುವುದು ನಾವು ನಮ್ಮ ಕುಟುಂಬ ಎಂಬ ಪರಿಜ್ಞಾನವೂ ಇಲ್ಲದೆ ಮನಬಂದಂತೆ ನಡೆದುಕೊಳ್ಳುತ್ತಿರುವುದು
ಅನುಭವಸ್ತರ ಟೀಕೆಗೂ ಅವಕಾಶವಾಗಿದೆ.
ಲಾಠಿ ಹಿಡಿಯದೆ ಮಾತು ಕೇಳುವುದಿಲ್ಲ ಎಂಬುದು ವಾಸ್ತವ
ಸಂಗತಿಯಾಗಿದ್ದು ಇದಕ್ಕೆ ಅವಕಾಶ ಕೊಡದಂತೆ ಸ್ವಯಂ
ಪ್ರೇರಿತವಾಗಿ ಕೆಲವೊಂದು ನಿರ್ಬಂಧ ಹಾಕಿಕೊಳ್ಳುವ ಜವಾಬ್ದಾರಿ
ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ ಎಂಬುದನ್ನು ಜನತೆ
ಮನಗಾಣಬೇಕಿದೆ. ಬೆಳಿಗ್ಗೆಯಿಂದ ರಾತ್ರಿವರಗೂ ಬಿಸಿಲು, ಮಳೆ
ಎನ್ನದೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಸಾರ್ವಜನಿಕರ
ಸಹಕಾರವೂ ಅಷ್ಟೇ ಮುಖ್ಯವಾಗಿದೆ. ಒಟ್ಟಾರೆ, ಸಿಪಿಐ ಶ್ರೀಕಾಂತ್, ಪಿಎಸ್‍ಐ ಎಸ್.ಜಿ.ಪಾಟೀಲ್ ಮತ್ತು ಆರಕ್ಷಕ ಎಲ್ಲಾ ಹಂತದ ಸಿಬ್ಬಂದಿ ಮತ್ತು ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ಪರಿಪಾಲನೆ ಪ್ರಶಂಸನೀಯ