ಚನ್ನರಾಯಪಟ್ಟಣ:ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಕೆಂಪೇಗೌಡ್ರು ಸೇನೆ, ಇಂಟರ್ನಷನಲ್ ಕೆಂಪೇಗೌಡ್ರು ಚಾರಿಟೇಬಲ್ ಟ್ರಸ್ಟ್ ಸ್ನೇಹಿತರು ಸಂಕಷ್ಟದಲ್ಲಿರುವ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಹಸಿದವರಿಗೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ಕೆಂಪೇಗೌಡ ಸೇನಾವತಿಯಿಂದ ಶನಿವಾರ ಹಸಿದವರಿಗೆ ಆಹಾರ ವಿತರಣಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಸೇನೆಯ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಆಹಾರ ವಿತರಣಾ ಕಾರ್ಯಕ್ಕೆ ಸಹಾಯ ಮಾಡಿದಲ್ಲದೆ ಅವರೇ ಮುಂದೆ ನಿಂತು ಹಸಿದವರಿಗೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದರು.
ಕೊರೊನಾ ಸೋಂಕಿನ ಹಾವಳಿಯಿಂದಾಗಿ ಲಾಕ್ ಡೌನ್ ಆಗಿದ್ದು ಈ ಸಂದರ್ಭದಲ್ಲಿ ಮುಂಜಾಗ್ರತೆ ಕ್ರಮ ವಹಿಸಿ ಅವರ ಕೈಯಲ್ಲಿ ಆಗುವಷ್ಟು ಹಸಿದವರಿಗೆ ಆಹಾರ ವಿತರಣಾ ಕೆಲಸ ಮಾಡೋಣ, ನೀವು ಕೊಟ್ಟ ತುತ್ತು ಹಸಿದವನ ಕಾಯ್ದರೆ ಅವನಿಟ್ಟ ಆಶೀರ್ವಾದ ನಿಮ್ಮನ್ನು ಕಾಯುತ್ತದೆ ಎನ್ನುವ ಸ್ಲೋಗನ್ ನೊಂದಿಗೆ ಕೆಂಪೇಗೌಡ ಸೇನೆ,ಚನ್ನರಾಯಪಟ್ಟಣ
ಸದಸ್ಯರು ಮತ್ತು ಪದಾಧಿಕಾರಿಗಳು ಉತ್ತಮ ಕಾರ್ಯ ಮಾಡಿದರು. ಮತ್ತು ಮುಂದೆಯು ಮಾಡಲಿದ್ದಾರೆ.
Tags
ಚನ್ನರಾಯಪಟ್ಟಣ