ಹಾಸನ: ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಆದೇಶ ಬಂದಿದ್ದರೂ ಯಾವ ಪ್ರಯೋಜನವಿಲ್ಲವಂತೆ ಹಾಸನ ನಗರದಲ್ಲಿ ವಾಹನ ಸಂಚಾರ ಎಂದಿನAತೆ ಇರುವುದು ಕಂಡು ಬಂದಿತು.
ಮೊದಲು ಲಾಕ್ ಡೌನ್ ಆದೇಶದಲ್ಲಿ ಬೆಳಿಗ್ಗೆ ೬ ರಿಂದ ೧೦ರ ವರೆಗೂ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿತ್ತು. ನಂತರ ಯಾರು ಸುಖಸುಮ್ಮನೆ ಓಡಾಡಬಾರದು ಎಂದು ಸೂಚನೆ ಕೊಡಲಾಗಿದ್ದರೂ ವಾಹನ ಸಂಚಾರ ಅಷ್ಟೊಂದು ನಿಯಂತ್ರಣಕ್ಕೆ ಬರಲಿಲ್ಲ. ಆಗೇ ಕೊರೋನಾದಿಂದ ಸಾವು-ನೋವುಗಳು ಕುಡ ಹೆಚ್ಚಾಗುತ್ತಲೆ ಬಂದಿದೆ. ಇನ್ನು ಇಷ್ಟು ದೊಡ್ಡ ನಗರದಲ್ಲಿ ಎಲ್ಲೊ ಒಂದೆರಡು ಕಡೆ ಮಾತ್ರ ವಾಹನ ತಪಾಸಣೆ ಮಾಡಿ ದಂಢ ಹಾಕಲಾಗುತ್ತಿದೆ. ನಂತರದಲ್ಲಿ ಪ್ರಧಾನಿಗಳ ಆದೇಶದಲ್ಲಿ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿ ಈಗ ವಾರದ ನಾಲ್ಕು ದಿನಗಳು ಪೂರ್ಣ ಲಾಕ್ ಡೌನ್ ಹಾಗೂ ವಾರದ ಮೂರು ದಿನಗಳ ಕಾಲ ಬೆಳಿಗ್ಗೆ ೧೦ರ ವರೆಗೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಆದರೇ ಅನೇಕರು ಕೊರೋನಾ ಬಗ್ಗೆ ಜಾಗೃತಿ ಇಲ್ಲದೇ ಬೇಕಾಬಿಟ್ಟಿ ರಸ್ತೆಯಲ್ಲಿಳಿದಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕು ಎಂಬುದು ಎಲ್ಲರ ಆಗ್ರಹವಾಗಿದೆ.