ಹಾಸನ: ಕೊರೋನಾ ಸೋಂಕು ನಿಯಂತ್ರಣ ಮಾಡುವ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಪ್ರಧಾನಿಯವರು ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಲಾಕ್ ಡೌನ್ ವಿಚಾರದಲ್ಲಿ ಕಠಿಣ ಕ್ರಮ ಅಗತ್ಯವಿದೆ. ಒಂದು ತಿಂಗಳಾದರೂ ಲಾಕ್ ಡೌನ್ ಮಾಡಬೇಕು. ಇನ್ನು ಕೂಲಿ ಕಾರ್ಮಿಕರಿಗೆ, ವ್ಯಾಪಾರಸ್ತರಿಗೆ ಸೇರಿದಂತೆ ಬಡವರಿಗೆ ಕನಿಷ್ಠ ೫ ಸಾವಿರದಂತೆ ಪ್ಯಾಕೇಜ್ ಕೊಡಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳ ವಿಡಿಯೋ ಕಾನ್ಫರೆನ್ಸ್ ವಿಚಾರದಲ್ಲಿ ೧೭ ಜನ ಜಿಲ್ಲಾಧಿಕಾರಿಗಳನ್ನು ಕೂರಿಸಿಕೊಂಡು ಅವಮಾನ ಮಾಡಿದ್ದೀರಿ, ಯಾವ ಜಿಲ್ಲಾಧಿಕಾರಿ ಜೊತೆ ಮಾತನಾಡದೇ ಬೆಂಗಳೂರಿನ ಆಯುಕ್ತರ ಜೊತೆ ಮಾತ್ರ ಮಾತನಾಡಿದ್ದು, ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ. ಪ್ರಧಾನಿಗಳು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಬೇಕಿತ್ತು. ಪ್ರಧಾನಿಯವರು ಸಭೆ ಮಾಡಿ ಈ ರಾಜ್ಯದ ಬಗ್ಗೆ ಏನು ತಿಳಿದುಕೊಂಡರು ಎಂದು ಅಸಮಧಾನವ್ಯಕ್ತಪಡಿಸಿದರು. ಕರ್ನಾಟಕದ ಸ್ಥಿತಿ ನೋಡಿ ಪ್ರಧಾನಿಯವರು ಸಭೆಯಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಒಂದು ವಾರ ಮಾತ್ರ ಲಾಕ್ ಡೌನ್ ಮಾಡಿದರೇ ಸಾಲುವುದಿಲ್ಲ. ಕನಿಷ್ಠ ಒಂದು ತಿಂಗಳಾದರೂ ಲಾಕ್ ಡೌನ್ ಮಾಡಬೇಕು ಎಂದರು. ಲಾಕ್ ಡೌನ್ ಆದೇಶ ಹತ್ತು ದಿನಗಳ ಮೊದಲೆ ನೀಡಿದ್ದರೇ ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಮುಖ ಆಗುತ್ತಿತ್ತು ಎಂದ ಅವರು, ಹಾಸನ ಜಿಲ್ಲೆಯ ಜನತೆಗೆ ನಾ ಕ್ಷಮೆ ಕೇಳುತ್ತೇನೆ. ಜಿಲ್ಲೆಯಲ್ಲಿ ೬ ಜನ ಜೆಡಿಎಸ್ ಶಾಸಕರು ಇದ್ದೇವೆ. ರಾಜ್ಯ ಸರಕಾರವು ಧ್ವೇಷದ ರಾಜಕೀಯ ನಡೆಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಮುಖ್ಯಮಂತ್ರಿಗಳು ಪ್ಯಾಕೇಜ್ ಘೋಷಣೆ ಮಾಡಿದ್ದು, ಆದರೇ ನಿಜವಾದ ಕೂಲಿ ಕಾರ್ಮಿಕರಿಗೆ ಸಿಗಬೇಕು. ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಇತರರಿಗೆ ಕೇವಲ ೨ ಸಾವಿರ ರೂ ನೀಡುವುದಾಗಿ ಹೇಳಿದ್ದು, ಒಬ್ಬರಿಗೆ ಕನಿಷ್ಟ ೫ ಸಾವಿರದಿಂದ ೧೦ ಸಾವಿರ ವಾದರೂ ಪ್ಯಾಕೇಜ್ ಕೊಡಬೇಕಾಗಿತ್ತು. ಮಂತ್ರಿಗಳು ಬಡವರಿಂದ ಸಲ್ಪ ಲೂಟಿ ಮಾಡುವುದನ್ನು ನಿಲ್ಲಿಸಿ ಶೇಕಡ ೧೦ ರಷ್ಟು ಕೊಟ್ಟರೇ ಸಾಕು. ಬಡವರಿಗೆ ಒಂದು ತಿಂಗಳು ಏನೆಲ್ಲ ಸಹಾಯ ಮಾಡಬೇಕು ಮಾಡಿದರೇ ಸಮಸ್ಯೆ ಏನು ಆಗುವುದಿಲ್ಲ ಎಂದು ಕುಟುಕಿದರು. ಎಲ್ಲಾರಿಗೂ ಪ್ಯಾಕೇಜ್ ಮಾಡುತ್ತೀರಿ ಜೊತೆಗೆ ಪತ್ರಕರ್ತರೆಲ್ಲಾರಿಗೂ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಅವರ ಸಂಕಷ್ಟಕ್ಕೂ ನೆರವಾಗಬೇಕು.
ಕೊರೋನಾ ಎಂಬ ಮಹಾಮಾರಿ ದಿನೆ ದಿನೆ ಹೆಚ್ಚಾಗಿ ಸಾವು-ನೋವಿನ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆ ಉಂಟಾಗಿದೆ. ಸೋಂಕಿನಿAದ ಮೇ.೧೧ರ ವರೆಗೂ ಮೃತ ಪಟ್ಟವರ ಸಂಖ್ಯೆ ೮೪೯. ಪಾಸಿಟಿವ್ ಸಂಖ್ಯೆ ೬೬,೫೮೯, ಒಂದು ತಿಂಗಳಲ್ಲಿ ೩೮೩ ಜನರು ಸೋಂಕು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಕಳೆದ ೭ ದಿನಗಳಲ್ಲಿ ಪಾಸಿಟಿವ್ ಶೇಕಡ ೪೫ ರಷ್ಟಿದೆ. ಹಾಸನ ಜಿಲ್ಲೆಯ ಮಂತ್ರಿಯವರು ಏನು ಮಾಡುವುದಕ್ಕೆ ಆಗುವುದಿಲ್ಲ. ಕೈಮುಗಿದು ಬಂದು ಹೋಗುತ್ತಾರೆ ಅಷ್ಟೆ. ಆರೋಗ್ಯ ಮಂತ್ರಿಗಳು ಬಂದ್ರು ವಾಪಸ್ ಹೋದ್ರು.. ಇನ್ನು ವೆಂಟಿಲೇಟರ್ ಹುಡುಕಾಟದಲ್ಲಿ ಇದ್ದಾರೆ. ಯಾವ ಕಂಪನಿಯವರು ಎಷ್ಟು ಪರ್ಸೇಟೆಜ್ ಕೊಡ್ತಾರೆ ಎಂಬ ಲೆಕ್ಕಚಾರದಲ್ಲಿ ಇದ್ದಾರೆ ಎಂದು ಗುಡುಗಿದರು.
ಜಿಲ್ಲೆಗೆ ಪ್ರತಿದಿನ ೧೨೦ ಸಿಲೆಂಡರ್ ಮಾತ್ರ ಬರುತ್ತಿದ್ದು, ಆದರೇ ೧೨೦೦ ಸಿಲೆಂಡರ್ ನ ಅವಶ್ಯಕತೆ ಇರುವ ಬಗ್ಗೆ ಜಿಲ್ಲಾ ಮಂತ್ರಿಗಳಿಗೂ ಮತ್ತು ಮುಖ್ಯಮಂತ್ರಿಗಲ ಗಮನಕ್ಕೂ ತರಲಾಗಿದೆ. ಸುಪ್ರಿಂ ಕೊರ್ಟ್ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದರೂ ಯಾವ ಪ್ರಯೋಜನವಾಗಿರುವುದಿಲ್ಲ. ಆಮ್ಲಜನಕದಿಂದ ಯಾವ ಪ್ರಯೋಜನ ವಾಗುವುದಿಲ್ಲ ಎನ್ನುತ್ತಾರೆ. ಮತೊಂದು ಕಡೆ ತೊಂದರೆ ಆಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ರೆಮಿಡಿಸಿವರ್ ಇಂಜೆಕ್ಷನ್ ಕೊರತೆ, ಎಲ್ಲಾವುದರ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.
ಹೆಚ್.ಡಿ. ಕುಮಾರಸ್ವಾಮಿ ಕಾಲದಲ್ಲಿನ ಎಲ್ಲಾ ಅಭಿವೃದ್ಧಿ ಕೆಲಸವನ್ನು ಬಿಜೆಪಿ ಸರಕಾರ ನಿಲ್ಲಿಸಿದೆ. ಸಿಎಂ ಮನೆ ಮುಂದೆ ಧರಣಿ ಮಾಡುವುದಾಗಿ ನಾವುಗಳು ಎಲ್ಲಾ ಹೇಳಿದ್ದು ಆಗಿದೆ. ಆದರೇ ಬಿಜೆಪಿ ಶಾಸಕರು ಇರುವ ಕಡೆ ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ. ಇಂತಹ ಧೌಏಷದ ರಾಜಕಾರಣವು ಹೆಚ್ಚು ದಿನ ಉಳಿಯುವುದಿಲ್ಲ. ಕೇವಲ ಬಿಜೆಪಿಗೆ ಮಾತ್ರ ಮುಖ್ಯಮಂತ್ರಿಗಳಲ್ಲ. ಕರ್ನಾಟಕದಲ್ಲಿರುವ ಎಲ್ಲಾ ಜನರಿಗು ಮುಖ್ಯಮಂತ್ರಿಗಳು ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.