ಸಾರ್ವಜನಿಕರಿಗೆ ಹೂವು, ಹಣ್ಣು, ತರಕಾರಿ ಕೊಳ್ಳಲು ೭ ಸ್ಥಳಗಳಲ್ಲಿ ಮಾರಕಟ್ಟೆಯನ್ನು ತೆರೆಯಲಾಗಿದೆ.

ಹಾಸನ ಮೇ ೨೨ :- ಹಾಸನ ನಗರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ತಿಳಿಯಪಡಿಸುವುದೆನೆಂದರೆ ಸರ್ಕಾರದ ಆದೇಶದಂತೆ ಲಾಕ್‌ಡೌನ್ ನಿಮಿತ್ತ ಕೋವಿಡ್-೧೯ ನಿಯಂತ್ರಣ ಸಲುವಾಗಿ ಸಾರ್ವಜನಿಕರಿಗೆ ಹೂವು, ಹಣ್ಣು, ತರಕಾರಿ ಕೊಳ್ಳಲು ೭ ಸ್ಥಳಗಳಲ್ಲಿ ಮಾರಕಟ್ಟೆಯನ್ನು ತೆರೆಯಲಾಗಿದೆ.

ಹೊಸ ಬ


ಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಡೈರಿ ಸರ್ಕಲ್(ಪಾಲಿಟೆಕ್ನಿಕ್ ಕಾಲೇಜು ಆವರಣ), ಸ್ಟೇಡಿಯಂ(ಸಾಲಗಾಮೆ ರಸ್ತೆ), ಸಂತೆಪೇಟೆ ಸ್ಕೂಲ್ ಆವರಣ, ತಮ್ಲಾಪುರ, ವಿಜಯ ನಗರ ಇಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ವಾರದ ಮೂರು ದಿನಗಳು ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ ೬ ಗಂಟೆಯಿAದ ೧೦ ಗಂಟೆವರೆಗೆ ಮಾತ್ರ ಅವಕಾಶವಿದ್ದು, ಇನ್ನುಳಿದ ದಿನದಂದು ಮುಂದಿನ ಆದೇಶದವರೆಗೆ ಸಂಪೂರ್ಣ ಲಾಕ್‌ಡೌನ್ ಆಗಿರುತ್ತದೆ.

ಸಾರ್ವಜನಿಕರು ತಾವು ವಾಸಿಸುವ ಹತ್ತಿರದ ಮಾರುಕಟ್ಟೆಯಲ್ಲಿ ವ್ಯವಹರಿಸಲು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದು ಕಂಡು ಬಂದಲ್ಲಿ ಕಾನೂನು ರೀತಿಯ ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.


Post a Comment

Previous Post Next Post