ಕರೋನಾ ವೈರಸ್ ಹೆಚ್ಚುತ್ತಿರುವ ಸಂರ‍್ಭದಲ್ಲಿ ಜನನಿಬಿಡ ಪ್ರದೇಶಗಳನ್ನು ಯಂತ್ರದ ಸಹಾಯದಿಂದ ಸ್ಯಾನಿಟೈಸರ್ ಸಿಂಪರಣೆ ಮಾಡಲಾಯಿತು. ಪರ‍್ವಾಹ್ನ ೧೦ ಗಂಟೆಯ ಬಳಿಕ ಪುರಸಭೆ ಸಿಬ್ಬಂದಿಗಳು ಕರ‍್ಯಕ್ಕಿಳಿದರು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಜನಸಂಚಾರ ಇಲ್ಲದ ಕಾರಣ ಪರಿಣಾಮಕಾರಿಯಾಗಿ ಸ್ಯಾನಿಟೈಸರ್ ಸಿಂಪರಣೆ ಮಾಡಲಾಯಿತು.
ಈ ಸಂರ‍್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸುಜಯ್ ಬೆಳಗ್ಗೆ ೬ ರಿಂದ ೧೦ ರವರೆಗೆ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು ಹೆಚ್ಚಾಗಿ ಸರ‍್ವಜನಿಕರು ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ.ಸರ‍್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಅಲ್ಲದೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.
ಈ ಸಂರ‍್ಭದಲ್ಲಿ ಪುರಸಭೆಯ ಅಭ್ಯಂತರರಾದ ಮಧುಸೂದನ್, ಆರೋಗ್ಯ ನಿರೀಕ್ಷಕರಾದ ಲೋಹಿತ್ ಸಿಬ್ಬಂದಿಗಳು ಹಾಜರಿದ್ದರು.
Tags
ಬೇಲೂರು
