ಜೆಡಿಎಸ್ ಭದ್ರಕೋಟೆಯಾಗಿದ್ದ ಪಟ್ಟಣ ಪುರಸಭೆ ಕೈತಪ್ಪಿ ಹೋಗಲು ಜೆಡಿಎಸ್ ನಾಯಕರ ಗುಂಪುಗಾರಿಕೆ ಮತ್ತು ನಗರ ಸಮಿತಿಯನ್ನು ಕಡೆಗಣಿಸಿದ್ದೇ ಕಾರಣ ಎಂದು ಜೆಡಿಎಸ್ ರಾಜ್ಯ ಯುವ ಕರ‍್ಯರ‍್ಶಿ ವಿ ಎಸ್ ಬೋಜೇಗೌಡ ಕಿಡಿಕಾರಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಎಂಎಲ್ಎ ಹಾಗೂ ಎಂಪಿ ಚುನಾವಣೆಯ ಸಂರ‍್ಭದಲ್ಲಿ ತಾಲ್ಲೂಕು ಅಧ್ಯಕ್ಷರ ಅಪೇಕ್ಷೆಯಂತೆ ೩೩ ಕರ‍್ಯರ‍್ತರನ್ನು ಒಳಗೊಂಡ ನಗರ ಸಮಿತಿಯನ್ನು ರಚನೆ ಮಾಡಲಾಗಿತ್ತು . ಜೆಡಿಎಸ್ ಕರ‍್ಯರ‍್ತರು ಹಾಗೂ ನಗರ ಸಮಿತಿಯ ಸದಸ್ಯರು ಪಟ್ಟಣದ ೨೩ ವರ‍್ಡಿಗಳಿಗೆ ತೆರಳಿ ಪ್ರಚಾರ ಮಾಡಿದ್ದರಿಂದ ಎಂಎಲ್ಎ ಹಾಗೂ ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಗಿಂತ ಹೆಚ್ಚು ಮತಗಳು ಜೆಡಿಎಸ್ ಗೆ ಲಭ್ಯವಾಗಿದ್ದವು.
ಆದರೆ ಪಟ್ಟಣ ಪುರಸಭೆ ಚುನಾವಣೆ ಸಂರ‍್ಭದಲ್ಲಿ ಜೆಡಿಎಸ್ ನಗರ ಸಮಿತಿಯನ್ನು ಸಂಪರ‍್ಣ ನರ‍್ಲಕ್ಷ್ಯ ಮಾಡಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಹೀನಾಯ ಸೋಲು ಉಂಟಾಗಿದೆ .
ತಾಲೂಕು ಅಧ್ಯಕ್ಷರು ಹಾಗೂ ಮುಖಂಡರ ರ‍್ವಾಧಿಕಾರಿ ಧೋರಣೆಯಿಂದ ತಮ್ಮ ಹಿಂಬಾಲಕರಿಗೆ ಹಾಗೂ ಪಕ್ಷಾಂತರಿಗೆ ಪುರಸಭೆ ಟಿಕೆಟ್ ನೀಡಿದ್ದರಿಂದ ಜೆಡಿಎಸ್ ಗೆ ಇಂದು ಈ ಸ್ಥಿತಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ .
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮತ್ತು ಕುಟುಂಬದವರು ಬಂದಾಗ ವೇದಿಕೆಯ ಮೇಲೆ ಮತ್ತು ಅವರ ಹಿಂದೆ - ಮುಂದೆ ತಿರುಗಿ ಸ್ವಾಮಿನಿಷ್ಠೆ ತೋರುವಂತೆ ನಟಿಸುವವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಮಾನ ಕೊಡಲಾಗುತ್ತಿದೆ . ಆದರೆ ಕಳೆದ ೨ದಶಕಗಳಿಂದ ಜೆಡಿಎಸ್ ಪಕ್ಷಕ್ಕಾಗಿ ಪ್ರಾಣವನ್ನೇ ಕೊಡುವ ಪ್ರಾಮಾಣಿಕ ಕರ‍್ಯರ‍್ತ ಮಾತ್ರ ಎಲೆಮರೆಯ ಕಾಯಿಯಂತೆ ಜೀವಿಸುತ್ತಿದ್ದಾನೆ . ನಿಷ್ಠಾವಂತ ಕರ‍್ಯರ‍್ತ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ ಪೋಸು ಕೊಡುವ ಮುಖಂಡರುಗಳು ಮಾತ್ರ ಎಲ್ಲಾ ರೀತಿಯ ಸೌರ‍್ಯಗಳನ್ನು ಪಡೆದು ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ . ಸುಮಾರು ೨೦ ರ‍್ಷಗಳಿಂದಲೂ ಪಕ್ಷದ ಕರ‍್ಯರ‍್ತನಾಗಿ ತಾವು ಗಮನಿಸುತ್ತಾ ಬಂದಿದ್ದು ತಾಲೂಕು ಜೆಡಿಎಸ್ ನಲ್ಲಿ ಏಳೆಂಟು ಜನ ನಾಯಕರನ್ನು ಬಿಟ್ಟರೆ ಬೇರೆ ಯಾರು ನಾಯಕರಾಗಿ ಬೆಳೆದಿಲ್ಲ. ಬೆಳೆಯಲು ಅವಕಾಶ ನೀಡಿಲ್ಲ. ತಾಲೂಕಿನ ಅದೆಷ್ಟೋ ಹಿರಿಯ ಕರ‍್ಯರ‍್ತರು ನಾಯಕರ ಧೋರಣೆಯಿಂದ ಬೇಸತ್ತು ಪಕ್ಷದಿಂದ ಮರೆಯಾಗುತ್ತಿದ್ದಾರೆ ಯುವಕರ ಕೈಗೆ ಅಧಿಕಾರ ಕೊಡಬೇಕೆನ್ನುವ ಪ್ರಜ್ವಲ್ ರೇವಣ್ಣ ನವರು ನಿಜವಾದ ಕರ‍್ಯರ‍್ತರನ್ನು ಬಿಟ್ಟು ಹಣ ಇರುವವರಿಗೆ ಮಣೆ ಹಾಕುತ್ತಿದ್ದಾರೆ . ತಾಲ್ಲೂಕು ಶಾಸಕ ಕೆ ಎಸ್ ಲಿಂಗೇಶ್ ಅವರು ಪಕ್ಷದ ಕರ‍್ಯರ‍್ತರಿಗಿಂತ ಬೇರೆ ಪಕ್ಷದಿಂದ ಬಂದ ಮುಖಂಡರನ್ನು ಓಲೈಸುತ್ತಾ ಅವರ ಹಿಂಬಾಲಕರಿಗೆ ಕಾಮಗಾರಿಗಳನ್ನು ನೀಡುತ್ತಾ ಸ್ವಪ್ರತಿಷ್ಟೆ ಮರೆಯುತ್ತಿದ್ದಾರೆ . ಜೆಡಿಎಸ್ ವರಿಷ್ಠರ ಅಹಂಕಾರ ನರ‍್ಲಕ್ಷ್ಯ ಧೋರಣೆ ಇದೇ ರೀತಿ ಮುಂದುವರೆದಲ್ಲಿ ಮುಂಬರುವ ತಾ. ಪಂ ಹಾಗೂ ಜಿ ಪಂ ಚುನಾವಣೆಯಲ್ಲಿ ಜೆಡಿಎಸ್ ಗೆ ಪುರಸಭೆ ಫಲಿತಾಂಶವೇ ಮರುಕಳಿಸುವುದರಲ್ಲಿ ಸಂಶಯವಿಲ್ಲ . ಇದನ್ನೆಲ್ಲಾ ಮನಗಂಡು ಜೆಡಿಎಸ್ ವರಿಷ್ಠರು ತಾಲೂಕು ಕಮಿಟಿ, ತಾಲೂಕು ಅಧ್ಯಕ್ಷ, ಜಿಲ್ಲಾಧ್ಯಕ್ಷ, ಹಾಗೂ ಇತರೆ ಎಲ್ಲಾ ಕಮಿಟಿಗಳನ್ನು ಬದಲಾವಣೆ ಮಾಡಿದರೆ ಐಸಿಯುನಲ್ಲಿರುವ ಜೆಡಿಎಸ್ ಪಕ್ಷ ಮುಂದಿನ ದಿನದಲ್ಲಿ ಉಸಿರಾಡಲು ಸಾಧ್ಯ ಎಂದು ವಿ ಎಸ್ ಬೋಜೇಗೌಡ ಹೇಳಿದ್ದಾರೆ.
ಂಣಣಚಿಛಿhmeಟಿಣs ಚಿಡಿeಚಿ