ಸರ್ಕಾರಿ ಶಾಲೆಗಳನ್ನು ಬಳಸಿಕೊಂಡು ಅಲ್ಲಿಯೇ ಸೋಂಕಿತರನ್ನು ಐಸೋಲೇಷನ್ ಮಾಡಿ : ಮಾಜಿ ಸಚಿವ ಎ. ಮಂಜು


ರಾಮನಾಥಪುರ:- ಕೋವಿಡ್ ದೃಡಪಟ್ಟವರು ರಸ್ತೆಯಲ್ಲಿ ಓಡಾಡುತ್ತಿರುವ ಬಗ್ಗೆ ಬಹಳ ದೂರುಗಳಿದ್ದು, ಅಂತವರನ್ನು ಕೋವಿಡ್ ಸೆಂಟರ್ ಅಥವಾ  ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಳೀಯ ಸರ್ಕಾರಿ ಶಾಲೆಗಳನ್ನು ಬಳಸಿಕೊಂಡು ಅಲ್ಲಿಯೇ ಸೋಂಕಿತರನ್ನು ಐಸೋಲೇಷನ್ ಮಾಡಿ ಅವರ ಮನೆಯವರೇ ಊಟ ತಿಂಡಿಗಳನ್ನು ತಂದುಕೊಡುವ ಹಾಗೆ ಮಾಡಿದರೆ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ತಪ್ಪುತ್ತದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎ. ಮಂಜು ತಿಳಿಸಿದರು.


ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಭಾರತ ದೇಶದಲ್ಲಿ ಸುಮಾರು ೩ ಲಕ್ಷಕ್ಕೂ ಅಧಿಕ ಜನ ಸೋಂಕಿತರಿದ್ದು, ಅಂತಯೇ ನಮ್ಮ ಜಿಲ್ಲೆ ಮತ್ತು ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ಕೊರೊನಾ ಪಾಸಿಟೀವ್ ಪ್ರಕರಣಗಳು ದಾಖಲಾಗುತ್ತಿದ್ದು ಆಶಾ ಕಾರ್ಯಕರ್ತೆಯರು ಸೋಂಕಿತರು ಹಾಗೂ ಸಂಪರ್ಕಿತರನ್ನು ಹೋಮ್ ಐಸೋಲೇಷನ್ ಮಾಡಿದ್ದು ಅವರಲ್ಲಿ ಹೆಚ್ಚು ಮಂದಿ ಗ್ರಾಮಗಳಲ್ಲಿ ಓಡಾಡುವ ಮೂಲಕ ಇತರರಿಗೂ ಭಯ ಹುಟ್ಟಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಯಾರ ಮನೆಯಲ್ಲಿಯೂ ಸಹ ಪ್ರತ್ಯೇಕ ಕೊಠಡಿಗಳು, ಶೌಚಾಲಯಗಳು ಇರುವುದಿಲ್ಲ ಇದರಿಂದಲೂ ಸಹ ಸೋಂಕು ಹೆಚ್ಚು ಹರಡುತ್ತದೆ. ಆಶಾಕಾರ್ಯಕರ್ತೆಯರಿಗೆ ಬಿಟ್ಟರೆ ಸೋಂಕಿತರು ಯಾರು ಎಂದು ಊರಿನಲ್ಲಿ ಯಾರಿಗೂ ತಿಳಿದಿರುವುದಿಲ್ಲ ಹಾಗಾಗಿದೆ ಎಂದರು.

ಸೋAಕಿತರು ಯಾರು ಎಂದು ಎಲ್ಲರಿಗೂ ತಿಳಿಯುವಂತೆ ಮಾಡಬೇಕು ಹಾಗಾದಾಗ ಮಾತ್ರ ಸೋಂಕು ಹರಡುವುದು ಕಡಿಮೆಯಾಗುತ್ತದೆ. ಇಲ್ಲವಾದರೆ ಸೋಂಕಿತರು ಎಲ್ಲೆಡೆ ಓಡಾಡಿ ಬೇರೆಯವರಿಗೂ ಹರಡುತ್ತಾರೆ. ಸೋಂಕಿತರೂ ಸಹ ಬೇರೆಯವರಿಗೆ ನಮ್ಮಿಂದ ಹರಡಬಾರದು ಎಂಬುದನ್ನು ಅರಿತು ಸೋಂಕನ್ನು ಮರೆಮಾಚದೆ ವೈದ್ಯರ ಸಲಹೆ ಸೂಚನೆಯಂತೆ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗುತ್ತಾರೆ ಹಾಗೂ ಎಲ್ಲರಿಂದ ದೂರವಿದ್ದರೆ ಬೇರೆಯವರಿಗೂ ಸಹ ಸೋಂಕು ಹರಡುವುದು ಕಡಿಮೆಯಾಗುತ್ತದೆ. ಹೀಗಾಗಿ ಈ ಬಗ್ಗೆ ನಾನು ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ರವರೊಂದಿಗೆ ದೂರವಾಣಿಯಲ್ಲೂ ಮಾತನಾಡಿದ್ದೇನೆ ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಐಸೋಲೇಷನ್‌ನಲ್ಲಿ ಇರುವ ತಾಲೂಕಿನ ಸುಮಾರು ೧೫೦೦ ಸೋಂಕಿತರುಗಳಿಗೆ ಉಚಿತ ಔಷಧಿ ಕಿಟ್ಟನ್ನು ವಿತರಿಸಲು ತೀರ್ಮಾನಿಸಿದ್ದು ಶೀಘ್ರದಲ್ಲಿಯೇ ಅದನ್ನು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರ ಮೂಲಕ ತಾಲೂಕಿನಾದ್ಯಂತ ವಿತರಿಸುತ್ತೇನೆ ಎಂದರು. 

ಅರಕಲಗೂಡು ತಾಲೂಕಿನಲ್ಲಿ ಎರಡು ದೊಡ್ಡ ಆಸ್ಪತ್ರೆಗಳಿವೆ. ಅದು ಅರಕಲಗೂಡು ಹಾಗೂ ಕೊಣನೂರು. ನಾನು ಮಂತ್ರಿಯಾಗಿದ್ದಾಗ ನಾನು ಹುಟ್ಟಿದ ಕೊಣನೂರಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ್ದೆ. ಅರಕಲಗೂಡು ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳು ಕೊಣನೂರಿನಲ್ಲಿಯೂ ಸಿಗುವ ಹಾಗೆ ಮಾಡಬೇಕೆಂದು ಈ ಆಸ್ಪತ್ರೆಯಲ್ಲಿಯೂ ಸಹ ಆಕ್ಸಿಜನ್, ಐಸಿಯು ಸಿಗುವ ಹಾಗೆ ಮಾಡಿದರೆ ರಾಮನಾಥಪುರ ಹಾಗೂ ಕೊಣನೂರು ಎರಡೂ ಹೋಬಳಿಗಳ ಜನತೆಗೆ ಅನುಕೂಲವಾಗುತ್ತದೆ ಎಂಬ ಹಿತದೃಷ್ಠಿಯಿಂದ ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ರವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು ಇದರೊಂದಿಗೆ ಪೋರ್ಟಬಲ್ ಆಕ್ಸಿಜನ್ ಂiÀAತ್ರಗಳನ್ನೂ ಸಹ ನೀಡಬೇಕೆಂದು ಸಹ ಅವರಲ್ಲಿ ಮನವಿ ಮಾಡಿದ್ದೇನೆ. ಅವರೂ ಸಹ ಇನ್ನೊಂದು ವಾರದಲ್ಲಿ ಈ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.




 

 

 

 



Post a Comment

Previous Post Next Post