ಹಾಸನದ ಸ್ಪಂದಿನ ಸಿರಿ ವೇದಿಕೆ ೨೦೧೨ರಲ್ಲಿ ಪ್ರಾರಂಭವಾಗಿ ಹಲವಾರು ಜನಪರವಾದ ಸಾಮಾಜಿಕ ಆರೋಗ್ಯ ಪರಿಸರ ಸಾಂಸ್ಕೃತಿಕ ಸಾಹಿತ್ಯಿಕ ಆಧ್ಯಾತ್ಮಿಕ ಸೇವೆಯನ್ನು ಸಲ್ಲಿಸುತ್ತಿದ್ದು ಕರೋನಾ ವೈರಸ್ ಕಾರಣ ಸಹೃದಯ ಸಂಗಮ ಬದುಕು ಬರಹ ಉಪನ್ಯಾಸ ಕಾರ್ಯಕ್ರಮ ಗೂಗಲ್ ಮೀಟ್‌ನಲ್ಲಿ ಏರ್ಪಡಿಸುತ್ತಿದೆ. ವೇದಿಕೆಯ ಬೆಂಗಳೂರು ಜಿಲ್ಲಾ ಘಟಕ ಉದ್ಘಟನಾ ಕಾರ್ಯಕ್ರಮವು ಜೂಮ್ ಮೀಟ್‌ನಲ್ಲಿ ನಡೆಯಿತು. ಆದ್ಯಂತ್ ಕಶ್ಯಪ್ ಅವರ ಗಣೇಶ ಸ್ತುತಿಯಿಂದ ಆರಂಭವಾದ ಕಾರ್ಯಕ್ರಮವನ್ನು ಶ್ರೀಮತಿ ಕಲಾವತಿ ಮಧುಸೂದನ್ ರಾಜ್ಯಾಧ್ಯಕ್ಷರು ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಬಾ.ನಂ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಲೇಖಕ ಗೊರೂರು ಅನಂತರಾಜು ಮಾತನಾಡಿ ಮುಂದಿನ ದಿನಗಳಲ್ಲಿ ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲೆಂದು ಶುಭಾಶಯ ಹಾರೈಸಿದರು. ಜಿಲ್ಲಾಧ್ಯಕ್ಷರು ತನುಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಚಾಲಕರು ಶ್ರೀಮತಿ ವಸುಮತಿ ರಾಮಚಂದ್ರ ಸ್ವಾಗತಿಸಿದರು. ಆದ್ಯಂತ್ ಕಶ್ಯಪ್ ಹಾಡುಗಾರಿಕೆಯಿಂದ ರಂಜಿಸಿದರು. ಜಿಲ್ಲಾ ಉಪಾಧ್ಯಕ್ಷರು ಜಯಂತಿ ವಂದಿಸಿದರು. ಈ.ಈಶಾನ್‌ದತ್ತ ದೀಕ್ಷಿತ್ ಹನುಮನ್ಖಾಲಿಸಾ ಪಠಿಸಿದರು. ವಿ.ಗಣೇಶ್ ನೀತಿಬೋಧಕ ಕತೆ ಹೇಳಿದರು. ಶ್ರೀಮತಿ ಆಶಾ ಶ್ರೀಧರ್ ಎಲ್.ಎಸ್.ನಿರೂಪಿಸಿದರು.
Tags
ಹಾಸನ