ಬೇಲೂರು: ಕೊರೊನಾ 2ನೇ ಅಲೆ ತಡೆಗಟ್ಟಲು ಇದುವರಗೆ ನಡೆಸಿದ ಎಲ್ಲಾಪ್ರ ಯತ್ನಗಳ ನಂತರ ಇದೀಗ ಲಾಕ್‍ಡೌನ್ ಕ್ರಮ
ಕೈಗೊಳ್ಳಲಾಗಿದೆ.
ಅದರಂತೆ ಬೇಲೂರಿನಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ
ಕ್ರಮಗಳ ಜರುಗಿಸಲಾಗುತ್ತಿದೆ. ಬೆಳಿಗ್ಗೆ 6 ಗಂಟೆಯಿಂದ 10
ಗಂಟೆಯವರಗೆ ದಿನಬಳಕೆ ವಸ್ತುಗಳ ಖರೀದಿ ಹಾಗೂ
ತುರ್ತು ಉದ್ದೇಶಗಳಿಗೆ ಹೊರತುಪಡಿಸಿ ಅನ್ಯತಾ ಓಡಾಡುವುದ
ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಬಸ್ ನಿಲ್ದಾಣದ ಸಮೀಪ ಇರುವ ಬಸವೇಶ್ವರ ವೃತ್ತದ ಬಳಿ
ಬೆಳಿಗ್ಗೆಯಿಂದಲೆ ಆರಕ್ಷಕ ವೃತ್ತ ನಿರೀಕ್ಷಕ ಶ್ರೀಕಾಂತ್
ನೇತೃತ್ವದಲ್ಲಿನ ಆರಕ್ಷಕ ಸಿಬ್ಬಂದಿ ಅನಗತ್ಯ ಸಂಚಾರದಲ್ಲಿ
ತೊಡಗಿದ್ದ ವಾಹನಗಳ ತಪಾಸಣೆ ನಡೆಸಿ
ವಶಪಡಿಸಿಕೊಳ್ಳುತ್ತಿದ್ದಾರೆ. ಅಗತ್ಯ ದಾಖಲೆಗಳ ಹೊಂದಿದ್ದ
ವಾಹನಗಳಿಗೆ ಮಾತ್ರವೆ ಅವಕಾಶ ಕಲ್ಪಿಸಲಾಗಿದೆ. 10 ಗಂಟೆಯ
ನಂತರ ಯಾವುದೆ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಸ
ನಿರ್ಬಂಧಿಸಲಾಗಿದೆ.
ಅತಿ ಬಿಗಿಕ್ರಮದ ನಡುವೆಯೂ ಒಂದಲ್ಲ ಒಂದು ಸಬೂಬು
ಹೇಳಿ ನುಣುಚಿಕೊಳ್ಳುವ ಪ್ರಯತ್ನವನ್ನು ವಾಹನ ಸವಾರರು
ಮಾಡುತ್ತಿದ್ದು ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ
ಜರುಗಿಸಲಾಗುತ್ತಿದೆ. ಲಾಕ್‍ಡೌನ್ ಮೊದಲ ದಿನವಾದ್ದರಿಂದ
ಕೆಲವೊಂದು ಸೂಚನೆ ಸಲಹೆ ನೀಡಿ ಕಳುಹಿಸಿದ್ದು ನಡೆಯಿತು.
ಪ್ರಥಮ ದಿನವಾಗಿದ್ದರಿಂದ ಬೆತ್ತದ ರುಚಿ ಅಷ್ಟಾಗಿ ಕಂಡುಬರಲಿಲ್ಲ.
ಬಸವೇಶ್ವರ ವೃತ್ತದಲ್ಲಿ ಸಿಪಿಐ ನೇತೃತ್ವದಲ್ಲಿ
ಕಾರ್ಯಾಚರಣೆ ನಡೆಯುತ್ತಿದ್ದರೆ ನೆಹರೂನಗರದಲ್ಲಿ ಪಿಎಸ್‍ಐ
ಎಸ್.ಜಿ.ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ
ತೊಡಗಿತ್ತು. ಇದೆ ರೀತಿ, ಜೆಪಿ.ನಗರ, ಬಿಕ್ಕೋಡು
ರಸ್ತೆಯಲ್ಲಿಯೂ ವಾಹನಗಳ ತಪಾಸಣೆಯಲ್ಲಿ ಆರಕ್ಷಕ
ಅಧಿಕಾರಿಗಳು, ಸಿಬ್ಬಂದಿ ತೊಡಗಿದ್ದರು. ಇವರಿಗೆ ಗೃಹರಕ್ಷಕ
ಸಿಬ್ಬಂದಿ ಸಹಕಾರ ನೀಡಿದರು. ಇಂದಿನ ಕಾರ್ಯಾಚರಣೆ ವೇಳೆ ವಿವಿಧ
ಹಂತದ ಆರಕ್ಷಕರಾದ ಎಎಸ್‍ಐ ಮೂಡಲಗಿರಿಗೌಡ, ಚಲುವರಾಜ್,
ರಂಗಸ್ವಾಮಿ ಹೆಡ್‍ಕಾನ್ಸ್‍ಟೇಬಲ್‍ಗಳಾದ ಸದಾಶಿವ, ವಿರೂಪಾಕ್ಷಪ್ಪ,
ಜಮೃದ್ಧೀನ್, ಸಂಶುದ್ಧೀನ್ ಮತ್ತು ಮನು, ಯೋಗೇಶ್,
ಶಶಿಕುಮಾರ್, ರಮೇಶ್, ಪುಟ್ಟಸ್ವಾಮಿ ಇತರರು ಇದ್ದರು.