ಸಲ್ಪ ಬಿಗಿಯಾದ ಲಾಕ್ ಡೌನ್, ಅಲ್ಲಲ್ಲಿ ರಸ್ತೆ ಮಧ್ಯೆ ಬ್ಯಾರಿಕೇಡ್, ಸುಖಸುಮ್ಮನೆ ರಸ್ತೆಗಿಳಿದ ವಾಹನಗಳ ಸೀಜ್

ಹಾಸನ: ಕೊರೋನಾ ಎಂಬ ಮಹಾಮಾರಿ ಆವರಿಸಿದ್ದರಿಂದ ನಿಯಂತ್ರಿಸಲು ಲಾಕ್ ಡೌನ್ ಜಾರಿಯಲ್ಲಿದ್ದರೂ ಇಷ್ಟು ದಿನಗಳ ಕಾಲ ಅಷ್ಟೊಂದು ಕಠಿಣ ಎನಿಸಲಿಲ್ಲ. ಆದರೇ ಗುರುವಾರದಿಂದ ಪೊಲೀಸರು ಸಲ್ಪ ಅಲರ್ಟ್ ಆದಂತೆ ಕಂಡು ಬಂದಿದ್ದು, ಅಲ್ಲಲ್ಲಿ ರಸ್ತೆ ಮಧ್ಯೆ ಬ್ಯಾರಿಕೇಡ್ ಅಳವಡಿಸಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡುತ್ತಿರುವುದು ಕಂಡು ಬಂದಿತು.


       ವಾರದ ಮೂರು ದಿನಗಳ ಕಾಲ ಬೆಳಿಗ್ಗೆ ೬ ರಿಂದ ೧೦ರ ವರೆಗೂ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಉಳಿದ ನಾಲ್ಕು ದಿನ ಯಾರು ಹೊರಗೆ ಕಾಲಿಡಬಾರದು ಎಂಬ ನಿಯಮ ಜಾರಿಗೆ ತರಲಾಗಿದೆ. ನಗರದ ಎನ್.ಆರ್. ವೃತ್ತದ ಬಳಿ ಎರಡು ಕಡೆಯಲ್ಲೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಆಸ್ಪತ್ರೆಗೆ ಹೋಗಿ ಬರುವವರು, ಆಹಾರ ಸಾಗಾಣಿಕೆ ಇಷ್ಟು ಬಿಟ್ಟರೇ ಉಳಿದವರು ಏನಾದರೂ ರಸ್ತೆಗೆ ವಾಹನ ತಂದರೆ ಲಾಕ್ ಡೌನ್ ಆದೇಶ ವಾಪಸ್ ಪಡೆಯುವವರೆಗೂ ನಿಮ್ಮ ವಾಹನ ಸಿಗುವುದಿಲ್ಲ. ಇಷ್ಟೆಲ್ಲಾ ಕಠಿಣ ನಿಯಮ ಜಾರಿಗೆ ತಂದರು ಅನೇಕ ವಾಹನ ಚಾಲಕರು ಕೇರೆ ಮಾಡದೇ ಬ್ಯಾರಿಕೇಡನ್ನೇ ಪಕ್ಕಕ್ಕೆ ಸರಿಸಿ ವಾಹನ ಸಮಚಾರಕ್ಕೆ ಸುಗಮ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತು. ನಗರದ ಸಹ್ಯಾದ್ರಿ ಚಲನ ಚಿತ್ರ ಮಂದಿರದ ಪಾರ್ಕ್ ರಸ್ತೆಗೆ ಅಡ್ಡದಾಗಿ ಹಾಕಲಾಗಿರುವ ಬ್ಯಾರಿಕೇಡನ್ನು ವಾಹನ ಚಾಲಕರು ತೆಗೆದು ಹಾಕುತ್ತಿದ್ದರು. ಲಾಕ್ ಡೌನ್ ನಿಯಮವನ್ನು ಇನ್ನಷ್ಟು ಬಿಗಿ ಮಾಡಬೇಕಾಗಿದೆ. ಇಲ್ಲವಾದರೇ ಕೆಲವರಿಗೆ ಜಾಗೃತಿ ಬರುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


Post a Comment

Previous Post Next Post