ಮಧು ಸಿಲ್ಕ್ ಬಟ್ಟೆ ಅಂಗಡಿಯಲ್ಲಿ ಜನಜಂಗುಳಿ

  ಹಾಸನ: ಕೊರೋನಾ ಆವರಿಸಿ ಜನರು ಸಾವು ಬದುಕಿನಲ್ಲಿ ನರಳುತ್ತಿದ್ದರೇ ಯಾವುದನ್ನು ಲೆಕ್ಕಿಸದೆ ಹೇಮಾವತಿ ಪ್ರತಿಮೆ ಬಳಿ ನಗರದ ಹಳೆ ಬಸ್ ನಿಲ್ದಾಣ ಎದುರು ಇರುವ ಮಧು ಸಿಲ್ಕ್÷್ಸ ಬಟ್ಟೆ ಅಂಗಡಿಯಲ್ಲಿ  ಮದುವೆ ಬಟ್ಟೆ ಖರೀದಿ ಮಾಡಲು ಜನರು ಮುಗಿ ಬಿದ್ದಿದ್ದರು.


                   

      ಒಂದು ಕಡೆ ಸರಕಾರವು ಕೊರೋನಾ ಹೋಗಲಾಡಿಸಲು ಹಲವಾರು ನಿಯಮಗಳನ್ನು ಜಾರಿಗೆ ತರಲಾಗಿದ್ದರೂ ಅನೇಕ ಅಂಗಡಿ ಮುಗ್ಗಟ್ಟುಗಳು ಕದ್ದಿ ಮುಚ್ಚಿ ಹಲವಾರು ವ್ಯಾಪಾರ ವಹಿವಾಟುಗಳನ್ನು ನಡೆಸಲಾಗುತ್ತಿದೆ. ಭಾನುವಾರದಂದು ನಗರದ ಮಧು ಸಿಲ್ಕ್ ಸ್ಯಾರಿ ಮಳಿಗೆಯಲ್ಲಿ ವ್ಯಾಪಾರ ಮಾಡಲು ಮುಗಿ ಬಿದ್ದಿದ್ದರು.ಮದುವೆ ಬಟ್ಟೆ ತೆಗೆಯಲೆಂದು ಹಳ್ಳಿ ಜನರು ಬಂದಿದ್ದಾರೆ. ಸ್ಯಾರಿ ಅಂಗಡಿ ಮಾಲಿಕರು ವ್ಯಾಪಾರದ ಉದ್ದೇಶದಲ್ಲಿ ಸಾಮಾಜಿಕ ಅಂತರ ಎಲ್ಲಾ ಮರೆತಂತೆ ಕಂಡುಬAದಿತು. ಬಾಗಿಲು ತೆಗೆದರೇ ಅಂಗಡಿ ಒಳಗೆ ಪುಲ್ ರಷ್, ಇಂತಹ ಮಳಿಗೆಗಳ ಬಗ್ಗೆ ಹೆಚ್ಚು ಗಮನ ಕೊಡುವುದು ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯ. ವಿಷಯ ತಿಳಿದ ಪೊಲೀಸರು ಇಂತಹ ಮಳಿಗೆ ಮೇಲೆ ಕ್ರಮಕೈಗೊಂಡಿದ್ದಾರೆ.


Post a Comment

Previous Post Next Post