ಹಾಸನ ಸೀಮೆ.ಇನ್ ಬಹಿರಂಗ ಪತ್ರಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ

ರಾಜ್ಯದಲ್ಲಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳ ಪೈಕಿ ಹಾಸನದ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯೂ ಒಂದು, ಈ ಆಸ್ಪತ್ರೆಯಲ್ಲಿ ನಿತ್ಯವೂ ಸಾವಿರಾರು ಜನರು ಕೊರೋನಾ ಪರೀಕ್ಷೆಗೆ ಆಗಮಿಸುತ್ತಿದ್ದಾರೆ.


ನಿತ್ಯವೂ ಸರಾಸರಿ 350-450 ಪಾಸಿಟಿವ್ ಕೇಸ್‌ಗಳು ಪತ್ತೆಯಾಗುತ್ತಿದ್ದು, ಸರಾಸರಿ 8-12 ಜನ ಕೊರೋನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ, ಸಮಾಧಾನಕರ ವಿಚಾರ ಎಂದರೆ ಸರಾಸರಿ 450-500 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುತ್ತಿದ್ದಾರೆ.
ಹೀಗೆ ಪರೀಕ್ಷೆಗಾಗಿ ಬರುತ್ತಿರುವ ಸಾವಿರಾರು ಜನರ ಕಣ್ಣೆದುರಿಗೆ, ಗುಣಮುಖರಾದ ನೂರಾರು ಜನರ ಮುಂದೆ ಬೆರಳೆಣಿಕೆಯಷ್ಟು ಸಾವನ್ನಪ್ಪುತ್ತಿರುವ ಕೊರೋನಾ ಸೋಂಕಿತರ ಶವಗಳನ್ನು ಅತ್ತಿಂದಿತ್ತ ಇತ್ತಿಂದತ್ತ ರವಾನಿಸುತ್ತಿದ್ದರು,  ಶವಗಳನ್ನು ಸಾಗಿಸುತ್ತಿದ್ದದ್ದರಿಂದ ಪರೀಕ್ಷೆಗಾಗಿ ಬಂದವರಿಗೆ, ಗುಣಮುಖರಾಗಿ ತೆರಳುತ್ತಿದ್ದವರಿಗೆ ಆತ್ಮಸ್ಥೈರ್ಯ ಕುಗ್ಗಿದಂತ್ತಾಗುತ್ತಿತ್ತು.

ಇದನ್ನು ಗಮನಿಸಿದ 'ಹಾಸನ ಸೀಮೆ‌.ಇನ್' ತಂಡದ ಸದಸ್ಯ ನಿರೂಪಕ ಯದೀಶ್ 'ಮಾನ್ಯ ಜಿಲ್ಲಾಧಿಕಾರಿಯವರಿಗೊಂದು ಬಹಿರಂಗ ಪತ್ರ' ಎನ್ನುವ ತಲೆಬಹರದಲ್ಲಿ ಜಿಲ್ಲಾಧಿಕಾರಿಗಳಿಗೊಂದು ಪತ್ರ ಬರೆದಿದ್ದರು, ಹಾಸನ ಸೀಮೆ‌.ಇನ್ ಮೂಲಕ ಜಿಲ್ಲಾಧಿಕಾರಿಯವರಲ್ಲಿ‌ ಮನವಿ ಮಾಡಲಾಗಿತ್ತು.

ಪರೀಕ್ಷೆಗಾಗಿ ಬಂದವರ ಮುಂದೆ ಹೀಗೆ ಶವಗಳನ್ನು ರವಾನಿಸುತ್ತಿರುವುದು ಅವರ ಆತ್ಮಸ್ಥೈರ್ಯ ಕುಗ್ಗಲು ಕಾರಣವಾಗುತ್ತಿದೆ ಆದ ಕಾರಣ ಜಿಲ್ಲಾಧಿಕಾರಿಯವರು ಇತ್ತ ಗಮನಹರಿಸಿ ಕೊರೋನಾ ಪರೀಕ್ಷೆಯನ್ನು ಪ್ರತ್ಯೇಕವಾಗಿ ನಡೆಸಬೇಕು ಇಲ್ಲವೇ ಶವಗಳನ್ನು ಪ್ರತ್ಯೇಕವಾಗಿ ಸಾಗಿಸಬೇಕು ಎಂದು ವಿನಂತಿ ಮಾಡಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಈ ಬಹಿರಂಗ ಪತ್ರ ಜಿಲ್ಲಾಧಿಕಾರಿಯವರಿಗೆ ತಲುಪುವುದರ ಜೊತೆಗೆ ಅನೇಕ ಜನರಿಗೆ ತಲುಪಿತ್ತು, ಇದೀಗ ನಮ್ಮ ಪತ್ರಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಯವರು ಹಾಗೂ ಆರೋಗ್ಯ ಇಲಾಖೆ ಕೊರೋನಾ ಪರೀಕ್ಷೆಗೆ ಬರುತ್ತಿರುವವರಿಗ ಪ್ರತ್ಯೇಕ ವ್ಯವಸ್ಥೆ ಮಾಡಿರುತ್ತದೆ, ಶವಗಳನ್ನು ಸಹ ಪ್ರತ್ಯೇಕವಾಗಿ ಸಾಗಿಸುತ್ತಿದೆ

ನಮ್ಮ ಮನವಿಗೆ ಸ್ಪಂದಿಸಿದ ಹಾಸನ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಯವರಾದ ಆರ್ ಗಿರೀಶ್  ರವರಿಗೆ ಹಾಸನ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ
ಹಾಸನ ಸೀಮೆ.ಇನ್ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.

Post a Comment

Previous Post Next Post