ಅರೇಹಳ್ಳಿಯಲ್ಲಿ ಕೋವಿಡ್ ಜಾಗೃತಿ-ಅರಿವು ಕಾರ್ಯಕ್ರಮ

 


ಬೇಲೂರು:  ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾಡಳಿತ ಹಾಸನವತಿಯಿಂದ ತಾಲ್ಲೂಕಿನ ಅರೇಹಳ್ಳಿಯಲ್ಲಿ ಕೋವಿಡ್ ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.



ಹಾಸನದಿಂದ ಆಗಮಿಸಿದ್ದ ಜಾಗೃತಿ ವಾಹನವನ್ನು ಸ್ವಾಗತಿಸಿ ಮತ್ತು ಜಾಗ್ರತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅರೇಹಳ್ಳಿ ಸಮುದಾಯ ಆಸ್ಪತ್ರೆ ವೈದ್ಯೆ ಮಮತಾ ಅವರು, ಕೋವಿಡ್ ಹೆಮ್ಮಾರಿ ಎರಡನೆ ಅಲೆಯಾಗಿ ಇಡಿ ಮನುಕುಲವನ್ನೇ ಅಲುಗಾಡಿಸುತ್ತಿದೆ. ಈ ಸಂದರ್ಭ ಕರೊನಾ ರೋಗ ಹಿಮ್ಮೆಟ್ಟಿಸಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ಸಂಘ ಸಂಸ್ಥೆಗಳು ಹಮ್ಮಿಕೊಂಡಿದೆ. ಇದಕ್ಕೆ ಪೂರಕವಾಗಿ ಕರಪತ್ರದ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ವೈರಸ್ ಸೋಂಕಿನ ಲಕ್ಷಣಗಳು, ವೈರಸ್ ಸೋಂಕು ಹರಡುವ ರೀತಿ, ಏನೆಲ್ಲಾ ಮುಂಜಾಗ್ರತೆ ವಹಿಸಬೇಕು, ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ಪಡೆಯುವುದು ಹೇಗೆ, ತುರ್ತು ಸಂದರ್ಭ ನೆರವಿಗೆ ಯಾರನ್ನು ಸಂಪರ್ಕಿಸಬೇಕು, ಜಿಲ್ಲಾದ್ಯಂತ

ಆಸ್ಪತ್ರೆಗಳಲ್ಲಿ ಕಾಯ್ದಿರಿಸಿರುವ ಹಾಸಿಗೆಗಳ ಹಾಗೂ ದೊರೆಯುವ ಆಂಬ್ಯುಲೆನ್ಸ್ ವಿವರ, ಖಾಸಗಿ ಆಸ್ಪತ್ರೆ ಮತ್ತು ಸಿಟಿ ಸ್ಕ್ಯಾನ್ ಕೇಂದ್ರಗಳ ಮಾಹಿತಿಯನ್ನು ನೀಡಿದರು.


ಈ ಸಂದರ್ಭ ಕವಿಕಾವ್ಯ ಸುಧೆಯ ಮುಖ್ಯಸ್ಥ ಎ.ಸಿ. ನಿರಂಜನ್, ದಾದಿಯರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ ಇದ್ದರು.


Post a Comment

Previous Post Next Post