ರಸ್ತೆ ಅಗಲೀಕರಣ ಸ್ಥಿತಿ ಅವಲೋಕಿಸಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ

ಬೇಲೂರು: ವಿಶ್ವ ಪ್ರಸಿದ್ಧ ಶಿಲ್ಪಕಲೆಗಳ ನಾಡು ಬೇಲೂರಿನ ಬಸ್ ನಿಲ್ದಾಣ ಮುಂಭಾಗದ ಬಸವೇಶ್ವರ ವೃತ್ತದಲ್ಲಿ ಶೀಘ್ರವೇ ವಿಶ್ವ

ಗುರು ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲಾಗುತ್ತದೆ

ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.



 ಬಸವೇಶ್ವರ ವೃತ್ತದ ಬಸವಣ್ಣನವರ ಭಾವಚಿತ್ರಕ್ಕೆ

ಮಾರ್ಲಾಪಣೆ ನಡೆಸಿ ಮಾತನಾಡಿ ಅವರು, ವಿಶ್ವದ ದಾರ್ಶನಿಕರ

ಪಟ್ಟಿಯಲ್ಲಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ರವರು

ತಮ್ಮದೆಯಾದ ಛಾಪು ಮೂಡಿಸಿ, ಜಾತಿ ಮತ್ತು ಧರ್ಮಗಳ

ನಡುವಿನ ಅಸಮಾನತೆ ವಿರುದ್ಧ ಹೋರಾಟ ನಡೆಸಿ,

ಮನುಷ್ಯತ್ವಕ್ಕೆ ಮುಖ್ಯ ಪ್ರಧಾನ್ಯತೆ ನೀಡಿದ್ದಾರೆ. ಅವರ

ಆದರ್ಶ ಮತ್ತು ಗುಣಗಳನ್ನು ನಮ್ಮ ಬದುಕಿನಲ್ಲಿ

ಅಳವಡಿಸಿಕೊಳ್ಳಬೇಕಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸಿ,

ಕಾಯಕ ಹಾಗೂ ದಾಸೋಹ ಸಿದ್ದಾಂತವನ್ನು ಇಡೀ ನಾಡಿಗೆ ನೀಡಿದ

ಮಾಹನ್ ಪುರುಷ ವಿಶ್ವ ಗುರು ಬಸವಣ್ಣನವರು ಎಂದರು.

ಬೇಲೂರಿನ ಹೃದಯ ಭಾಗದಲ್ಲಿ ಬಸವೇಶ್ವರ ವೃತ್ತಕ್ಕೆ

ಮೊದಲು ಅಂದಿನ ಪಟ್ಟಣ ಪಂಚಾಯತಿ ಅಧ್ಯಕ್ಷರಾದ

ಎಂ.ಆರ್.ವೆಂಕಟೇಶ ಅವರು ಅಂಕಿತ ಹಾಕಿದ್ದಾರೆ. ಈಗಾಗಲೇ

ವೀರಶೈವ ಸಮಾಜ ಕೂಡ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು,

ರಾಷ್ಟ್ರೀಯ ಹೆದ್ದಾರಿ ಅಗಲೀಕರಣವನ್ನು ಗಮನಿಸಿ ಶೀಘ್ರವೇ

ಬಸವೇಶ್ವರ ವೃತ್ತ ನಿರ್ಮಿಸಲು ನಾವುಗಳು ಬದ್ಧವಾಗಿರುವ ಬಗ್ಗೆ

ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ

ಹೆಚ್.ಎಂ.ದಯಾನಂದ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ

ಅಧ್ಯಕ್ಷ ಎಂ.ಆರ್.ವೆಂಕಟೇಶ, ಶರಣಸಾಹಿತ್ಯ ಪರಿಷತ್ತಿನ

ಗೌ.ಅಧ್ಯಕ್ಷ ಸಿ.ಎಂ.ನಿಂಗರಾಜು ಪ್ರಮುಖರಾದ ಸಿಪಿಐ ಶ್ರೀಕಾಂತ್. ತಾ

ಪಂ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ದಿನೇಶ್, ಅದ್ದೂರಿ

ಕುಮಾರ್, ಪುರಸಭೆ ಮುಖ್ಯಾಧಿಕಾರಿ ಸುಜೇಯ್ ಕುಮಾರ್,

ಡಾ.ವಿಜಯ್, ಡಾ.ನರಸೇಗೌಡ, ವಿಜಯಲಕ್ಷ್ಮಿ, ಕನಾಯ್ಕನಹಳ್ಳಿ

ಮಹಾದೇವ್, ಚಂದ್ರಶೇಖರ, ಬಸವರಾಜು, ರವಿಕುಮಾರ್ ಇನ್ನೂ

ಮುಂತಾದವರು ಹಾಜರಿದ್ದರು.

Post a Comment

Previous Post Next Post