ಹಾಸನ: ಕೊರೋನಾ ಎಂಬ ಮಹಾಮಾರಿಯಿಂದ ದೂರ ಮಾಡಿ ಕೊರೋನಾ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿಯೊಬ್ಬರ ತಪಾಸಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಘೋಷಣೆ ಮಂತ್ರ ಪಟಿಸಿದರು.
ಕೋವಿಡ್ ಕುರಿತು ಜಿಪಂನಲ್ಲಿ ನಡೆದ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು,
ಸಭೆ ನಡೆಸಿ ಹಾಸನ ಜಿಲ್ಲೆಯ ಶಾಸಕರ ಸಲಹೆ ಸೂಚನೆಗಳನ್ನು ಪಡೆದಿದ್ದೆನೆ. ಹಾಸನ ಜಿಲ್ಲೆಗೆ ೧೦ ಕೋಟಿ ಹಣದ ಅವಶ್ಯಕತೆ ಇರುವುದನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ೫೦ ವೆಂಟಿಲೇಟರ್ ಒದಗಿಸಲಾಗುವುದು. ಕೊರೊನಾ ಶಂಕಿತರನ್ನು ಕಡ್ಡಾಯವಾಗಿ ಕೊವೀಡ್ ಕೆರ್ ಸೆಂಟರ್ ಗೆ ದಾಖಲು ಮಾಡಲು ಸೂಚಿಸಲಾಗಿದೆ. ವೈದ್ಯಕೀಯ ಸಿಬ್ಬಂದಿಯನ್ನು ಶೀಘ್ರವೇ ನೇಮಕಾತಿ ಮಾಡಲಾಗುವುದು. ಔಷಧಿ ಮಾತ್ರೆ ಕೊರತೆ ನಿರ್ಮಾಣವಾಗದಂತೆ ನೋಡಿಕೊಳ್ಳಲಾಗುವುದು. ಕೊರೊನಾ ಮುಕ್ತ ಗ್ರಾಮ ಮಾಡಲು ಪ್ರತಿಯೊಬ್ಬರನ್ನೂ ತಪಾಸಣೆ ಒಳಪಡಿಸುವ ನಿರ್ಧಾರಕೈಗೊಳ್ಳಲಾಗಿದೆ ಎಂದರು. ಕೊರೊನಾ ೩ನೇ ಅಲೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿAದ ಜಿಲ್ಲಾ ಆಸ್ಪತ್ರೆಗಳವರಗೆ ಪ್ರತಿ ಆಸ್ಪತ್ರೆಯಲ್ಲಿ ಆಕ್ಸಿಜನ್. ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು. ಮುಂದಿನ ೩ ತಿಂಗಳ ಕಾಲದಲ್ಲಿ ಇದನ್ನು ಒದಗಿಸಲಾಗುತ್ತದೆ. ಮುಂದಿನ ೩ ತಿಂಗಳಲ್ಲಿ ಆರೋಗ್ಯ ಇಲಾಖೆಗಳಿಗೆಲ್ಲಾ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಒದಗಿಸಲಾಗುವುದು. ಹಾಗೂ ೧೮ ವರ್ಷ ಮೆಲ್ಪಟ್ಟ ಎಲ್ಲರಿಗು ಕನಿಷ್ಟ ಒಂದು ಡೋಸ್ ವ್ಯಾಕ್ಸಿನೇಷನ್ ವ್ಯವಸ್ಥೆಗೆ ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುವುದು. ಜನ ಸಂಪರ್ಕಕ್ಕೆ ಬರುವ ಎಲ್ಲಾರಿಗು ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಿ, ಹಾಸನ ಜಿಲ್ಲೆಯಲ್ಲಿ ೭ ಬ್ಲಾಕ್ ಫಂಗಸ್ ವರದಿಯಾಗಿರುವವರನ್ನು ಚಿಕಿತ್ಸೆಗೆ ಬೇರೆ ಕಡೆ ವರ್ಗಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ಕಾಯಿಲೆಗೆ ಚಿಕಿತ್ಸೆ ನಿಡಲಾಗುವುದು. ರಾಜ್ಯದಲ್ಲಿ ಹೊಸದಾಗಿ ೨೫ ಸಾವಿರ ಹಾಸಿಗೆ ನಿರ್ಮಾಣ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ನಾ ಬೇರೆ ಪಕ್ಷಗಳ ತರಹ ಹಾರಿಕೆ ಉತ್ತರ ಕೊಡುವುದಿಲ್ಲ. ನಾವು ಭರವಸೆ ಕೊಟ್ಟಂತೆ ಎಲ್ಲಾ ಕೆಲಸವನ್ನು ಮಾಡುತ್ತೆವೆ ಎಂದು ಮತ್ತೆ ಭರವಸೆ ನುಡಿದರು.