ಹಾಸನ: ಲಾಕ್ ಡೌನ್ ದಿನದಂದು ಯಾವ ವ್ಯವಹಾರ ನಡೆಸಬಾರದು ಎಂದು ನಿಯಮ ಜಾರಿಯಲ್ಲಿದ್ದರೂ ಲೆಕ್ಕಿಸದೇ ವ್ಯವಹಾರ ನಡೆಸುತ್ತಿದ್ದ ಮುತ್ತೂಟ್ ಫೈನಾನ್ಸ್ ಗೆ ನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರು ಫೈನಾನ್ಸ್ ಮಳಿಗೆಗೆ ಬೀಗ ಹಾಕಿಸಿ ಸಿಬ್ಬಂದಿಯನ್ನು ಪೊಲೀಸ್ ಠಾಣೆ ಕರೆದೊಯ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಸರಕಾರದ ಮಾರ್ಗಸೂಚಿಯಂತೆ ವಾರದ ಮೂರು ದಿನಗಳು ಬ್ಯಾಂಕ್ ವ್ಯವಹಾರವನ್ನು ಬೆಳಿಗ್ಗೆ ೮ ರಿಂದ ೧೦ ಗಂಟೆಯವರೆಗೂ ಮಾಡಬಹುದಾಗಿದೆ. ಉಳಿದ ನಾಲ್ಕು ದಿನಗಳ ಕಾಲ ಬಾಗಿಲು ತೆಗೆಯಬಾರದು ಎಂಬ ಆದೇಶವಿದ್ದರೂ ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ಶನಿವಾರ ಲಾಕ್ ಡೌನ್ ಇದ್ದರೂ ನಗರದ ಪಾಲಿಕ ಹೋಟೆಲ್ ಬಳಿ ಇರುವ ಮುತ್ತೂಟ್ ಫೈನಾನ್ಸ್ ಬಾಗಿಲು ತೆಗೆದು ವ್ಯವಹಾರ ನಡೆಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದಲೇ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಚಾರಿಸಿ ಕೂಡಲೇ ಬೀಗ ಹಾಕಲು ಸೂಚನೆ ನೀಡಿದರು. ನಂತರ ಇಬ್ಬರೂ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.