ಸರಿಯಾಗಿ ಆಕ್ಸಿಜನ್ ಸಿಗದಿದ್ದರೇ ಸಾಯುವ ಸಂಖ್ಯೆಯಲ್ಲಿ ಹೆಚ್ಚಳದ ಸಾಧ್ಯತೆ ಹೆಚ್.ಡಿ. ರೇವಣ್ಣ ಆತಂಕ

ಹಾಸನ: ಪ್ರತಿನಿತ್ಯ ಅವಶ್ಯಕವಿರುವ ಆಕ್ಸಿಜನ್ ಸರಿಯಾಗಿ ಸಿಗದಿದ್ದರೇ ಮುಂದಿನ ದಿನಗಳಲ್ಲಿ ಸಾಯುವರ ಸಂಖ್ಯೆಯಲ್ಲಿ ಹೆಚ್ಚಳದ ಸಾಧ್ಯತೆ ಇದೆ ಎಂದು ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಅತಂಕವ್ಯಕ್ತಪಡಿಸಿದರು.


       ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಬಂದ ರೋಗಿಗಳಿಗೆ ಸರಿಯಾಗಿ ಆಕ್ಸಿಜನ್ ಮತ್ತು ಮೆಡಿಸನ್ ಸಿಗದೆ ಪ್ರತಿದಿನ ೨೦ ರಿಂದ ೨೪ ಕ್ಕೂ ಹೆಚ್ಚು ಜನರು ಸಾಯುವ ಪರಿಸ್ಥಿತಿ ಬಂದಿದೆ. ಕಳೆದ ಹತ್ತು ದಿನಗಳಲ್ಲಿ ೨೦೦ಕ್ಕೂ ಹೆಚ್ಚು ಜನರು ಸಾವನ್ನಪಿದ್ದಾರೆ. ಚಾಮರಾಜ ನಗರದಲ್ಲಿ ಆಕ್ಸಿಜನ್ ಸಿಗದೆ ೨೪ ಜನ ಸತ್ತಿದ್ದಾರೆ ಎನ್ನಲಾಗಿದೆ. ನಮ್ಮಲ್ಲಿಯೂ ಕೆಲ ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಆಕ್ಸಿಜನ್ ಸಿಗದೆ ಅನೇಕರು ಕೊನೆ ಉಸಿರು ಎಳೆದಿದ್ದರೂ ಅದನ್ನು ಯಾರು ಹೇಳುತ್ತಿಲ್ಲ ಎಂದು ಆತಂಕವ್ಯಕ್ತಪಡಿಸಿದರು. ಇವೆಲ್ಲಾ ಗಮನಿಸಿದರೇ ಪ್ರತಿದಿನ ನಮಗೆ ೭೫೦ ಸಿಲೆಂಡರ್ ಬೇಕಾಗುತ್ತದೆ ಆದರೇ ನಮಗೆ ಇಲ್ಲಿ ಲೋಕಲ್ ಬರುತ್ತಿರುವುದು ೪೮೦ ಸಿಲೆಂಡರ್ ಮಾತ್ರ. ಉಳಿದ ೩೫೦ ಸಿಲೆಂಡರ್ ನಮಗೆ ಕಡಿಮೆ ಆಗಿದೆ. ಸರಿಯಾಗಿ ಸಿಲೆಂಡರ್ ಬರದಿದ್ದರೇ ಇನ್ನು ಡೆತ್ ಸಂಖ್ಯೆ ಹೆಚ್ಚಾಗುವ ಸನ್ನಿವೇಶಗಳಿದೆ ಎಂದು ಎಚ್ಚರಿಸಿದರು. ಇನ್ನು ಮಾತ್ರೆಗಳು, ಗ್ಲೌಸ್ ಗಳು ಬರಬೇಕಿದೆ. ಜಿಲ್ಲಾಧಿಕಾರಿಗಳತ್ತಿರ ೩ ಕೋಟಿ ರೂ ಇತ್ತು ಮತ್ತೆ ಇನ್ನು ೧೦ ಕೋಟಿ ರೂಗಳನ್ನು ತರಿಸಿದ್ದಾರೆ. ಇನ್ನು ೫ ರಿಂದ ೧೦ ಕೋಟಿ ರೂಗಳನ್ನು ತರಿಸಿ ಸ್ವಾಮಿ ಏನೇನು ಅವಶ್ಯಕತೆ ಇದೆ ಅದನ್ನು ಖರೀದಿ ಮಾಡಿದರಾಯ್ತು ಎಂದರು.

      ಹೊಳೆನರಸೀಪುರದಲ್ಲಿ ೩೮೦ ಬೆಡ್ ಇನ್ನು ಹೆಚ್ಚಿಗೆ ಮಾಡಲಾಗುವುದು. ಇದರಲ್ಲಿ ೧೫೦ ಬೆಡ್ ಕೋವಿಡ್ ಗೆ ಮಾಡಲಾಗಿದೆ. ೫೦ ಆಕ್ಸಿಜನ್ ಬೆಡ್ ಮಾಡಲಾಗಿದೆ. ಸಿಟಿಸ್ಕಾö್ಯನ್ ಹಣ ಬೇಕಾಗಿದೆ ಎಂತಾರೆ. ನಾನು ಶಾಸಕನಿಂದಲೆ ೨೫ ಲಕ್ಷದ ಲೆಟರ್ ಕೊಟ್ಟಿದ್ದೇನೆ. ಅನೇಕ ಕಡೆ ಸ್ಕಾö್ಯನ್ ಮಾಡಲು ಅವರಿಗೆ ಇಷ್ಟ ಬಂದ ಧರವನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ ಗಮನಕ್ಕೂ ತರಲಾಗಿದೆ ಎಂದು ಹೇಳಿದರು. 

     ಹಾಸನದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ರಾಜ್ಯದಲ್ಲಿ ೨೦೨೧ ಮೇ ೧೫ರ ಒಳಗೆ ೨೫೦೦ ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿಸಿದ್ದು, ಈ ನೇಮಕಾತಿ ಆದೇಶದಲ್ಲಿರುವ ವೈದ್ಯರುಗಳನ್ನು ಹಾಸನ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಹಲವಾರು ವರ್ಷಗಳಿಂದ ಖಾಲಿ ಇರುವ ಮುಖ್ಯ ವೈದ್ಯಾಧಿಕಾರಿಗಳು, ಹಿರಿಯ ವೈದ್ಯಾಧಿಕಾರಿಗಳು, ಶಸ್ತçಚಿಕಿತ್ಸಕರು ಹಾಗೂ ಇತರೆ ಪ್ರಮುಖ ವೈದ್ಯರುಗಳ ಜಾಗಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶ ಹೊರಡಿಸಿ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯರು ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಹಾಗೂ ಆರೋಗ್ಯ ಸಚಿವರು ಡಾಃ ಸುಧಾಕರ್ ರವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದರು.


Post a Comment

Previous Post Next Post