ಹಾಸನ : ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವ ಸ್ಕಾö್ಯನಿಂಗ್ ಸೆಂಟರ್ ಗಳಲ್ಲಿ ಸರಕಾರ ನಿಗಧಿ ಮಾಡಿರುವ ಧಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ೪ ಸ್ಕಾö್ಯನಿಂಗ್ ಸೆಂಟರ್ ಮೇಲೆ ನೋಟಿಸ್ ಜಾರಿ ಮಾಡಿ ಎಚ್ಚರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಈಗಾಗಲೇ ಎರಡನೇ ಅಲೆ ಆವರಿಸಿ ಎಲ್ಲೆಡೆ ಕೊರೋನಾದಿಂದ ಬಳಲುತ್ತಿರುವ ಸಂದರ್ಭದಲ್ಲಿ ಸ್ಪಂದಿಸಬೇಕಾದ ಸ್ಕಾ÷್ಯನಿಂಗ್ ಸೆಂಟರ್‌ಗಳಲ್ಲಿ ಹೆಚ್ಚಿನ ಧರ ಪಡೆದು ಅಕ್ರಮ ನಡೆಯಬಾರದು. ಈ ಬಗ್ಗೆ ಸಾರ್ವಜನಿಕರಿಂದ ಹೆಚ್ಚು ದೂರು ಬಂದಿದ್ದು, ಇದರ ವಿರುದ್ಧ
ಕಠಿಣ ಕ್ರಮ ಜರುಗಿಸಲಾಗುವುದು. ಹಾಸನ ನಗರದಲ್ಲಿರುವ ಮೂರು ಸಿಟಿ ಸ್ಕಾ÷್ಯನ್ ಸೆಂಟರ್ ಮತ್ತು ಚನ್ನರಾಯಪಟ್ಟಣದಲ್ಲಿರುವ ಹೈಟೆಕ್ ಸಿಟಿ ಸ್ಕಾ÷್ಯನಿಂಗ್ ಸೆಂಟರ್ ಗಳಿಗೆ ತೆರಳಿ ಅಧಿಕಾರಿಗಳು ಪರಿಶೀಲನೆ
ನಡೆಸಲಾಗಿದೆ. ಇಂತಹ ಸ್ಕಾ÷್ಯನಿಂಗ್ ಸೆಂಟರ್ ಮಾಲೀಕರುಗಳಿಗೆ ನೋಟೀಸ್ ಜಾರಿ ಮಾಡಿದ್ದು,
೨೪ ಗಂಟೆಯೊಳಗೆ ಸೂಕ್ತ ಕಾರಣ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ. ಸೆಂಟರ್ ಮಾಲೀಕರ ಉತ್ತರವನ್ನು ಆಧರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಸ್ಕಾ÷್ಯನ್ ಸೆಂಟರ್ ಗಳಲ್ಲಿ ಬಿಪಿಎಲ್
ಕಾರ್ಡ್ ಹೊಂದಿರುವವರಿಗೆ ೧೫೦೦ ಹಾಗೂ ಎಪಿಎಲ್ ಕಾರ್ಡ್ ಇರುವವರಿಗೆ ೨೫೦೦ರೂ ದರ ನಿಗದಿ
ಮಾಡಿರುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಲೆಕ್ಕಿಸದೇ ಸ್ಕಾ÷್ಯನ್ ಸೆಂಟರ್ ಗಳಲ್ಲಿ ಹೆಚ್ಚಿನ ಹಣ ಪಡೆಯಲಾಗುತ್ತಿತ್ತು. ಸ್ಕಾö್ಯನ್ ಮಾಡಿಸಿಕೊಂಡಾಗ ಸರಿಯಾಗಿ ರಶೀದಿ ಕೊಡುತ್ತಿರಲಿಲ್ಲ. ನೋಟಿಸ್ ನೀಡಿದ ನಂತರ ಸರಿಯಾದ ಕಾರಣ ನೀಡದಿದ್ದ ಪಕ್ಷದಲ್ಲಿ ಗ್ರಾಹಕರಿಂದ ಪಡೆದಿರುವ ಹಣವನ್ನು ಅವರು ವಾಪಸ್ ಕೊಡಬೇಕು ಎಂದು ಸೂಚಿಸಿದರು.