ಹಾಸನ ಮೇ.೨೬: ವ್ಯೆದ್ಯರ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮ ಮುಖ್ಯ ಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ವ್ಯೆದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆ ಭೇಟಿ ನೀಡಿ ಸೋಂಕಿತರನ್ನು ಪತ್ತೆ ಹಚ್ಚಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಬೇಕಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ತಿಳಿಸಿದ್ದಾರೆ.
ನಗರದ ಕಲಾ ಕಾಲೇಜು ಕ್ರೀಡಾಂಗಣದಲ್ಲಿAದು ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಲು ಈಗಾಗಲೇ ೪೭ ವಾಹನಗಳನ್ನು ನಿಯೋಜಿಸಲಾಗಿದ್ದು ಇವರೊಂದಿಗೆ ೭೫ ಜನ ವ್ಯೆದ್ಯರುಗಳು, ೧೫೦ ನರ್ಸ್ಗಳನ್ನು ಒಳಗೊಂಡAತೆ ತಂಡಗಳನ್ನು ರಚಿಸಲಾಗಿದೆ ಅಗತ್ಯ ವಿದ್ದರೆ ಹೆಚ್ಚುವರಿ ವಾಹನಗಳನ್ನು ನಿಯೋಜಿಸಲಾಗುವುದು ಎಂದರು.
ಸಕಲೇಶಪುರ ಆಲೂರು ತಾಲ್ಲೂಕುಗಳಿಂದ ೫ ವಾಹನಗಳು ,ಬೇಲೂರು ತಾಲ್ಲೂಕಿಗೆ ೪ ವಾಹನಗಳು, ಹೊಳೆನರಸೀಪುರ ತಾಲ್ಲೂಕಿಗೆ ೫ ವಾಹನಗಳು, ಅರಕಲಗೂಡು ತಾಲ್ಲೂಕಿಗೆ ೫ ವಾಹನಗಳು, ಚನ್ನರಾಯಪಟ್ಟಣ ತಾಲ್ಲೂಕಿಗೆ ೮ ವಾಹನಗಳು,ಹಾಸನ ತಾಲ್ಲೂಕಿಗೆ ೧೨ ವಾಹನಗಳು ಹಾಗೂ ಅರಸೀಕೆರೆ ತಾಲ್ಲೂಕಿಗೆ ೮ ವಾಹನಗಳನ್ನೂ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ವೈದ್ಯರುಗಳು ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲಿದ್ದು ಸೋಂಕು ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ. ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ಕರೆ ನೀಡಿದರು.
ಶಾಸಕರಾದ ಪ್ರೀತಂ ಜೆ ಗೌಡ ಜಿಲ್ಲಾಧಿಕಾರಿ ಅರ್ ಗಿರೀಶ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಎ. ಪರಮೇಶ್ ಅವರು ಸಹ ವೈದ್ಯಕೀಯ ತಂಡಕ್ಕೆ ತಪಾಸಣೆಯ ಕಿಟ್ ಗಳನ್ನು ಹಸ್ತಾಂತರಿಸಿದರು
ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ ,ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ತಹಸೀಲ್ದಾರ್ ಶಿವಶಂಕರಪ್ಪ , ತಾಲ್ಲೂಕು ವೈದ್ಯಾಧಿಕಾರಿ ಡಾ|| ವಿಜಯ್ ಮತ್ತಿತರರು ಹಾಜರಿದ್ದರು.
