ನಾಯಕತ್ವದ ಬದಲಾವಣೆಗೆ ಹೊರಟರೆ ಜನಾಕ್ರೋಶವಾಗುತ್ತದೆ ಶಾಸಕ ಪ್ರೀತಂ ಜೆ. ಗೌಡ ಹೇಳಿಕೆ

ಹಾಸನ: ಸಮಪರ್ಕವಾಗಿ ಆಡಳಿತ ನಡೆಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ನಾಯಕತ್ವದ ಬದಲಾವಣೆಗೆ ಯಾರಾದರೂ ಹೊರಟರೆ ಜನಾಕ್ರೋಶಕ್ಕೆ ಕಾರಣವಾಗುತ್ತದೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಎಚ್ಚರಿಕೆಯ ಹೇಳಿಕೆ ಕೊಟ್ಟರು.


      ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಿಗೆ ಯಾರು ಮಾಹಿತಿ ಕೊಡುತ್ತಾರೊ ಅದನ್ನು ನಾನು ಗಮನಿಸಿರುವುದಿಲ್ಲ. £ ನಾನು ಮಾಧ್ಯಮ ವರದಿಗಳನ್ನು ನೋಡಿದ್ದೆನೆ. ಮಾಧ್ಯಮದಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸೂರ್ಯ ಚಂದ್ರ ಇದುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ ಸನ್ಮಾನ್ಯ ಯಡಿಯೂರಪ್ಪ ನವರು ಮೇ ೨೦೨೩ ರವರಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತಾರೆ. ೨೦೨೩ರ ನಂತರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ೧೩೦ ಕ್ಕೂ ಹೆಚ್ಚು ಸ್ಥಾನ ಪಡೆದು ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರ ಗಳಿಸಲಿದೆ ಎಮದು ವಿಶ್ವಾಸವ್ಯಕ್ತಪಡಿಸಿದರು. ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ೨೫ ಕ್ಕೂ ಹೆಚ್ಚು ಸ್ಥಾನಗಳಿಸಿ ದೆಹಲಿಗೆ ಕಳುಹಿಸಿ ಯಡಿಯೂರಪ್ಪ ನಾಯಕತ್ವ ಬಲಪಡಿಸುವ ಅಗತ್ಯವಿದೆ. ಕಾಂಗ್ರೆಸ್ .ಜೆಡಿಎಸ್ ಪಕ್ಷದ ನಾಯಕರು ಯಾವ ಕನಸು ಕಾಣುವುದು ಬೇಡ. ಕೊರೊನಾ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿದರೆ ರಾಜ್ಯದ ಜನ ಚಿ-ತೂ ಎಂದು ಉಗಿಯಲಿದ್ದಾರೆ. ಯಾರದರು ನಾಯಕತ್ವ ಬದಲಾವಣೆ ಮಾಡಲು ಹೋದರೆ ಜನಾಕ್ರೋಶ ಆಗುತ್ತದೆ. ೨೦ ಜನ ಅಲ್ಲ ೪೦ ಜನ ದೆಹಲಿಗೆ ಹೋದರು ಯಾವುದೇ ಬದಲಾವಣೆ ಆಗುವುದಿಲ್ಲ. ಇದನ್ನು ನಾನು ನನ್ನ ರಕ್ತದಲ್ಲಿ ಬರೆದುಕೊಡುತ್ತೆನೆ. ಇಟ್ಟುಕೊಂಡಿರಿ ೨೦೨೩ ರ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಾಗ ಹಾಸನ ಶಾಸಕರು ಈ ರೀತಿ ಹೇಳಿದ್ದರು ಅಂತ ಹೇಳಿ. ಯಡಿಯೂರಪ್ಪ ಪ್ರಶ್ನಾತಿತ ನಾಯಕರು. ಬಿಜೆಪಿ ಪಕ್ಷದ ಶಾಸಕಾಂಗದ ಸಭೆ ಕರೆದಿದ್ದು, ಶಾಸಕನ್ನಾಗಿ ಮಂತ್ರಿಯಾಗಿ ಗೋಪಾಲಯ್ಯನವರಿಗು ಗೊತ್ತಿಲ್ಲ. ಮಾಧ್ಯಮದವರಿಗೆ ಗೊತ್ತಿದೆ. ಬಿ.ವೈ. ವಿಜಯೇಂದ್ರ ಕೂಡ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ನಾವು ನರೇಂದ್ರ ಮೋದಿ-ಯಡಿಯೂರಪ್ಪ ನೇತೃತ್ವದಲ್ಲಿ ಮತ ಕೇಳಿ ಶಾಸಕನ್ನಾಗಿದ್ದೆನೆ. ೧೨೩ ಶಾಸಕರು ಯಡಿಯೂರಪ್ಪನವರ ಬೆಂಬಲಕ್ಕಿದ್ದೆವೆ ಎಂದರು. 

      ದೇವೇಗೌಡರ ಮತ್ತು ರೇವಣ್ಣನವರ ಸಹಕಾರದಿಂದ ಜಿಲ್ಲೆಗೆ ಬೇಕಾದ ಎಲ್ಲಾ ಅನುಕೂಲ ಸಹಕಾರ ಪಡೆದುಕೊಂಡಿದ್ದೆವೆ. ದೇವೇಗೌಡರು ಸರ್ಕಾರಕ್ಕೆ ಮನವಿ ಮಾಡಿದÀಂತೆ ಜಿಲ್ಲೆಗೆ ಅನುಕೂಲ ಆಗಿದೆ. ಹಾಸನ ಜಿಲ್ಲೆಯ ಜನಪ್ರತಿನಿಧಿಯಾಗಿ ನಾನು ಬೆಂಗಳೂರಿನಿAದ ಹಾಸನಕ್ಕೆ ಕೂಲಿ ಕಾರ್ಮಿಕನ್ನಾಗಿ ಹಾಸನಕ್ಕೆ ವೆಂಟಿಲೇಟರ್. ಆಕ್ಸಿಜನ್ ಕಾನ್ಸಂಟ್ರೇಶನ್ ತಂದಿದ್ದೆನೆ. ಈ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ. ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ಹಾಸನ ಜಿಲ್ಲೆಗೆ ನಮ್ಮ ಕ್ಯಾಪ್ಟನ್ ರೇವಣ್ಣನವರು. ನಾನು ತಂಡದ ಸದಸ್ಯನಾಗಿ ಕೆಲಸ ಮಾಡುತ್ತೆನೆ. ರಾಜಕೀಯ ಮಾಡುವ ಸಮಯ ಬಂದಾಗ ರೇವಣ್ಣನವರ ವಿರುದ್ದ ಬೇಕಾದರೂ ರಾಜಕೀಯ ಮಾಡುತ್ತೆನೆ ಎಂದು ಹೇಳಿಕೆ ಕೊಟ್ಟರು.


Post a Comment

Previous Post Next Post