ಹೊಳೆನರಸೀಪುರ: ಜಮೀನು ವಿಚಾರಕ್ಕೆ ಜಗಳ ನಡೆದು ನಾಲ್ವರು ಕೊಲೆಯಾಗಿದ್ದ ತಾಲೂಕಿನ ಮಾರಗೋಡನಹಳ್ಳಿ ಗ್ರಾಮಕ್ಕೆ ಬುಧವಾರ ಐಜಿಪಿ ಪ್ರವೀಣ್ ಪವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ, ಪ್ರಕರಣ ಸಂಬAಧ ಆರೋಪಿಗಳನ್ನು ಬಂಧಿಸಲು 3 ತಂಡಗಳನ್ನು ರಚಿಸಲಾಗಿದೆ. ಗಲಾಟೆ ಸಮಯದಲ್ಲಿ ಸಾಕಷ್ಟು ಜನರು ಇದ್ದರೂ ಸಹ ಹೊಡೆದಾಟ ಮತ್ತು ಕೊಲೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಮೀನು ವಿಚಾರವಾಗಿ ನಡೆದ ಕೊಲೆ ಪ್ರಕರಣದಲ್ಲಿ 7 ಜನರ ವಿರುದ್ಧ ಮೃತ ಮಲ್ಲೇಶ(ಮಂಜೇಗೌಡ)ನ ಪುತ್ರ ಪ್ರಕಾಶ ದೂರು ದಾಖಲಿಸಿದ್ದಾರೆ. ಮಲ್ಲೇಶ ಮತ್ತು ಸ್ವಾಮಿಗೌಡ ಅವರಿಗೂ 17.24 ಎಕರೆ ಜನೀನು ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ಮಲ್ಲೇಶನ ಪರವಾಗಿ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ಇದರಲ್ಲಿ ಎರಡುಕಾಲು ಎಕರೆ ಜಮೀನು ಗ್ರಾಮದ ಬಳಿ ಇದ್ದು, ಈ ಜಮೀನು ವಿಚಾರದಲ್ಲಿ ಪಾಪಣ್ಣ ಹಾಗೂ ಮಲ್ಲೇಶ್ ನಡುವೆ ಗಲಾಟೆ ನಡೆಯುತ್ತಿತ್ತು. ಮೆ 24 ರಂದು ಮಲ್ಲೇಶ ಅವರ ಪುತ್ರ ಬಸವರಾಜು ಟ್ರಾö್ಯಕ್ಟರ್‌ನಲ್ಲಿ ಗ್ರಾಮದ ಸಮೀಪವಿರುವ ಜಮೀನು ಉಳುಮೆ ಮಾಡುತ್ತಿದ್ದಾಗ ಪಾಪಣ್ಣ, ಪ್ರದೀಪ, ಯೋಗೇಶ, , ಯೋಗೇಶನ ಮಕ್ಕಳಾದ ಪ್ರದೀಪ ಹಾಗೂ ಸಂತೋಷ, ರವಿಕುಮಾರ ಮತ್ತು ನಿಂಗಾಜಮ್ಮ ಗುಂಪು ಕಟ್ಟಿಕೊಂಡು ಬಸವರಾಜನ ಮೇಲೆ ಗಲಾಟೆ ಮಾಡಲು ಆರಂಭಿಸಿದ್ದರು. ಈ ವೇಳೆ ಜಗಳ ಬಿಡಿಸಲು ಹೋದ ಮಲ್ಲೇಶ, ಮಂಜೇಶ ಮಲ್ಲೇಶನ ಮಲ್ಲೇಶನ ಅಳಿಯ ರವಿಕುಮಾರ ಮೇಲೆ ಪಾಪಣಿ ಚಾಕುವಿನಿಂದ ಹಾಗೂ ಪ್ರದೀಪ ಕಬ್ಬಿಣದ ಸ್ಪಾö್ಯನರ್‌ನಿಂದ ಮತ್ತು ನಿಂಗಾಜಮ್ಮ ಓಹಿಲೇಶನ ಮಗಳು ಅಕ್ಷತಳಿಗೆ ರೇಜರ್ ನಿಂದ ಹಲ್ಲೆ ಮಾಡಿದ್ದಾರೆ. ಪಾಪಣ್ಣ, ಪ್ರದೀಪ, ಯೋಗೇಶ, ರವಿಕುಮಾರ, ಪ್ರದೀಪ, ಸಂತೋಷ್, ನಿಂಗಾಜಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಮಂಜೇಶ, ಮಲ್ಲೇಶ, ರವಿಕುಮಾರ್ ಮೃತಪಟ್ಟಿದ್ದರೆ, ಪ್ರಕಾಶ, ಅಕ್ಷತಾ ಗಾಯಗೊಂಡಿದ್ದಾರೆ. ಆರೋಪಿ ಪಾಪಣ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಂದವರು ಯಾರು ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಲಕ್ಷೆö್ಮÃಗೌಡ ವೃತ್ತ ನಿರೀಕ್ಷಕ ಅಶೋಕ್, ಪಿಎಸ್‌ಐಗಳಾದ ಕುಮಾರ್ ಹಾಗೂ ವಿನಯ್ ಕುಮಾರ್ ಇದ್ದರು.