ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ರಾಜ್ಯ ರ‍್ಕಾರದ ಆದೇಶದ ಮೇರೆಗೆ ೧೪ ದಿನಗಳ ಲಾಕ್ ಡೌನ್ ನ ಮೂರನೇ ದಿನವಾದ ಇಂದು ಅನಗತ್ಯವಾಗಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ ಸುಮಾರು ೩೨ ಸಾವಿರ ದಂಡ ವಿಧಿಸಲಾಗಿದೆ ಎಂದು ವೃತ್ತನಿರೀಕ್ಷಕ ಶ್ರೀಕಾಂತ್ ತಿಳಿಸಿದರು.
ನಂತರ ಮಾತನಾಡಿದ ಅವರು ನಮ್ಮ ವ್ಯಾಪ್ತೀಯಲ್ಲಿ ಈಗಾಗಲೇ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು,ಅರೇಹಳ್ಳಿ ,ಹಳೇಬೀಡು, ಹಾಗೂ ಬೇಲೂರು ಠಾಣೆಗಳಲ್ಲಿ ಲಾಕ್ ಡೌನ್ ಸುತ್ತೋಲೆಯನ್ನು ಸರ‍್ವಜನಿಕರು ಪಾಲಿಸಬೇಕು ಎಂದು ತಿಳಿಸಿದ್ದೇವೆ.ಆದರೂ ಕೂಡ ನಿಯಮ ಮೀರಿ ಅನಗತ್ಯವಾಗಿ ಸಂಚರಿಸುತ್ತಿದ್ದವರ ಮೇಲೆ ಕ್ರಮ ಕೈಗೊಂಡು ವಾಹನವನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ.ಅಲ್ಲದೆ ಮಾಸ್ಕ್ ಧರಿಸದಂತವರ ಮೇಲೆ ಸುಮಾರು ೧೦೦ ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಪಿಎಸ್ಐ ಎಸ್ ಜಿ ಪಾಟೀಲ್ ಪಟ್ಟಣದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಬಂದ್ ಯಶಸ್ವಿಗೊಳಿಸಿದರು.
Tags
ಬೇಲೂರು
