ಹಾಸನ: ಚುನಾವಣೆಯನ್ನು ಮಾತ್ರ ಒಂದು ವರ್ಷದ ಮೊದಲೆ ಸಿದ್ಧತೆಯಲ್ಲಿ ತೊಡಗುವವರು ಕೊರೋನಾ ಹರಡಿದಾಗ ನಿಬಾಯಿಸುವಲ್ಲಿ ಸರಕಾರವು ಕರುಣೆ ಇಲ್ಲದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ವಿನಯ ಗಾಂದಿಯವರು ಗಂಭೀರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರದಂದು ಮಾತನಾಡಿ, ಕೊರೋನಾ ಸೋಂಕು ಬಂದು ಸಾವನಪ್ಪಿದಾಗ ಶವ ಸಂಸ್ಕಾರ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸತ್ತಂತಹ ಕುಟುಂಬದವರು ಹೆಣ ಸಂಸ್ಕಾರ ಮಾಡಲು ೪೦ ಸಾವಿರದಿಂದ ೬೦ ಸಾವಿರದವರೆಗೂ ಹಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ತಾಳಿಯನ್ನು ಮಾರಾಟ ಮಾಡಿ ಹಣ ಕೊಡಲು ಮುಂದಾಗಿದ್ದಾರೆ. ಇವೆಲ್ಲಾ ಗಮನಿಸಿದರೇ ಸರಕಾರವು ಕರುಣೆ ಇಲ್ಲದಂತೆ ವರ್ತಿಸುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಕೊರೋನಾ ಸೋಂಕಿತರ ಬೆಡ್ ಲ್ಯಾಕ್ ದಂದೆಯಲ್ಲಿ ಕೂತಿದ್ದಾರೆ ಎಂದು ಹೇಳಿಕೆ ಕೊಡಲಾಗಿದೆ. ಎರಡನೇ ಅಲೆಯಲ್ಲಿ ಇದುವರೆಗೂ ರಾಜ್ಯದಲ್ಲಿ ೧೮,೭೯೫ ರಷ್ಟು ಜನರು ಸಾವನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ದಿನೆ ದಿನೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಳದಲ್ಲಿದೆ ಎಂದರು. ರೆಮಿಡಿಸಿವರ್ ದಂದೆ ಹೆಚ್ಚಾಗಿ ಬಡವರಿಗೆ ಸಿಗುತ್ತಿಲ್ಲ.
ಮಳೆಯ ಹೆಚ್ಚಳದಿಂದ ಪ್ರವಾಹ ಬಂದು ಹಳ್ಳಿಗಳ ಸಾವಿರಾರು ಮನೆಗಳು ಕೊಚ್ಚಿ ಹೋಗಿದ್ದು, ಜನರು ಬೀದಿ ಪಾಲಾಗಿದ್ದಾರೆ. ಇನ್ನು ರೈತರು ಬೆಳೆದ ಬೆಳೆಗಳ ನೆರವಿಗೆ ಸರಕಾರ ಬಾರುತ್ತಿಲ್ಲ. ರೈತರ ಸಾಲಮನ್ನಾ ಮಾಡದೇ ಮೋದಿ ಸರಕಾರ ವಿಫಲವಾಗಿದೆ ಎಂದು ದೂರಿದರು. ಎಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಸಿಸಿ ಟಿವಿ ಅಳವಡಿಸುವ ಮೂಲಕ ಕುಟುಂಬಚದ ಸದಸ್ಯರು ಮೊಬೈಲ್ ಮೂಲಕ ರೋಗಿಗಳ ಸ್ಥಿತಿಗಳನ್ನಾದರೂ ನೋಡಬಹುದು. ಕೂಡಲೇ ಸೌಕರ್ಯ ಒದಗಿಸುವಂತೆ ಆಗ್ರಹಿಸಿದರು. ಮುಂದಾಲೋಚನೆ ಇಲ್ಲದೆ ಆದೇಶ ಕೊಟ್ಟ ಕುಂಬಮೇಳದಲ್ಲಿ ೫೦ ಲಕ್ಷಕ್ಕೂ ಹೆಚ್ಚು ಜನರು ಸೇರಿದ ಪರಿಣಾಮ ೯ ಜನ ಸ್ವಾಮೀಜಿಗಳು ಸಾವನಪ್ಪಿದ್ದಾರೆ. ೨೫೦ಕ್ಕೂ ಹೆಚ್ಚು ಜನ ಸ್ವಾಮೀಜಿಗಳು ಕೊರೋನಾ ಸೋಂಕಿಗೆ ಸಿಲುಕಿರುವುದು ಸರಕಾರದ ವೈಫಲ್ಯವೆ ಕಾರಣ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟಿçÃಯ ಮಜ್ದೂರ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ರಮೇಶ್, ಶೇಖರ್ ಇತರರು ಪಾಲ್ಗೊಂಡಿದ್ದರು.