ಹಾಸನ ಮೇ.20 :- ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಮನೆ ಮನೆಗೆ ಭೇಟಿ ಹಾಗೂ ಐಸೊಲೇಶನ್ ಪ್ರಕ್ರಿಯೆ ಬಗ್ಗೆ ತಾವೇ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಂತಿಗ್ರಾಮ ಹೋಬಳಿಯ ಹೊಂಗೆರೆ ಗ್ರಾಮಕ್ಕೆ ಭೇಟಿ ನೀಡಿದ ಅವರು ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ಔಷಧಿ ನೀಡಲಾಗುತ್ತಿದೆಯೇ, ಎಂಬ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ಪಡೆದರು.
ಎಲ್ಲಾ ಸೋಂಕಿತರ ಮನೆ ಮನೆ ಭೇಟಿಕಾರ್ಯ ನಡೆದಿದೆಯೇ ಎಂಬುದನ್ನು ಖುದ್ದಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಅವರವರ ಮನೆಯ ಮುಂದೆಯೇ ನಿಂತು ಸೋಂಕಿತ ಸಮಾಲೋಚನೆ ನಡೆಸಿ ವಿವರ ಪಡೆದರು.
ಕೆಲವು ರೋಗಲಕ್ಷಣ ಇರುವವರಿಗೆ ಮಾತ್ರೆಗಳ ವಿತರಣೆ ವಿಳಂಬವಾಗದಂತೆ ಜಿಂಕ್,ವಿಟಮಿನ್ಸಿ, ಐವರ್ಮೆಕ್ಟೀನ್ ಸೇರಿದಂತೆ ಕೆಲವು ಮಾತ್ರೆಗಳನ್ನು ಆದಷ್ಟು ಬೇಗ ತಲುಪಿಸಿ ಸೋಂಕಿತರ ಆರೋಗ್ಯದ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಇದೇವೇಳೆ ಮನೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲದ ಸೋಂಕಿತರಿಗೆ ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಅಲ್ಲದೇ ಗ್ರಾಮಗಳಲ್ಲಿರುವ ಶಾಲೆಗಳನ್ನು ಐಸೋಲೇಷನ್ ಕೇಂದ್ರಗಳನ್ನಾಗಿ ಪರಿವರ್ತಿಸುವಂತೆ ಗ್ರಾಮ ಪಂಚಾಯಿತಿ ಪಿ.ಡಿ.ಓ ಹಾಗೂ ಸ್ಥಳೀಯರಿಗೆ ಅವರು ಸಲಹೆ ನೀಡಿದರು.
ತಹಸೀಲ್ದಾರ್ ಶಿವಶಂಕರಪ್ಪ, ತಾಲ್ಲೂಕು ವೈಧ್ಯಾಧಿಕಾರಿ ಡಾ|| ವಿಜಯ್, ಶಾಂತಿಗ್ರಾಮ ಪಿ.ಡಿ.ಓ. ರಮೇಶ್ ಕೆ.ಡಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾವ್ಯ, ಡಾ||ಕಿರಣ್ ಮತ್ತಿತರರು ಹಾಜರಿದ್ದರು.
Tags
ಹಾಸನ