ಆದ್ಯತಾ ಗುಂಪುಗಳಿಗೆ ಮೊದಲು ಕೋವಿಡ್ ಲಸಿಕೆ ನೀಡಲು ಸೂಚನೆ

ಹಾಸನ ಮೇ ೨೮:- ವಿಕಲಚೇತನರು ಸೇರಿದಂತೆ   ರಾಜ್ಯ ಸರ್ಕಾರ ಗುರುತಿಸಲಿರುವ ಆದ್ಯತಾ  ಗುಂಪಿನ  ಅರ್ಹರಿಗೆ ಎಲ್ಲಾ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಹಾಕುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೊರೋನಾ ಮುಂಚೂಣಿ ಕಾರ್ಯಕರ್ತೆಯರಿಗೆ ಲಸಿಕೆ ನೀಡುವ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು  ಸರ್ಕಾರ ನಮೂನೆ-೧ ಹಾಗೂ ೨ ರಲ್ಲಿ ಗುರುತಿಸಿರುವ ಆದ್ಯತೆ ಗುಂಪುಗಳಲ್ಲಿ ಲಸಿಕೆ ಹಾಕಲು ಬಾಕಿ ಇರುವ ಪಲಾನುಭವಿಗಳ ವಿವರ ಪಡೆದ ಅವರು ಇನ್ನೊಂದು ವಾರದೊಳಗೆ ಈ ಗುಂಪಿಗೆ ಸೀಮಿತವಾಗಿ ಎಲ್ಲಾ ಅರ್ಹರಿಗೂ  ಲಸಿಕೆ ಹಾಕಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಆದ್ಯತಾ ಗುಂಪುಗಳಿಗೆ ಮಾತ್ರ ಈಗ ಮೊದಲ ಡೋಸ್ ಲಸಿಕೆ ನೀಡಲಾಗುತ್ತಿದ್ದು ಉಳಿದ ಸಾರ್ವಜನಿಕರು ಕೆಲದಿನಗಳ  ಮಟ್ಟಿಗೆ ಮೊದಲ ಡೋಸ್ ಲಸಿಕೆ ಬರುವವರೆಗೆ ಕಾಯುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಹಾಸಿಗೆ ಹಿಡಿದಿರುವ ವಿಕಲಚೇತನರು ಮತ್ತು ವಯೋವೃದ್ದರಿಗೆ ಅವರ ಮನೆಗಳಿಗೆ ತೆರಳಿ ಲಸಿಕೆ ಹಾಕಬೇಕು ಅದಕ್ಕಾಗಿ ವೈದ್ಯರಿಗೆ ವಾಹನ ಒದಗಿಸುವಂತೆ ಗ್ರಾಮ ಪಂಚಾಯಿತಿ ಪಿ.ಡಿ.ಓ ಗಳಿಗೆ ಸೂಚನೆ ನೀಡಲಾಗುವುದು ಎಂದರು.

ಈ ಕೆಳಕಂಡ ಗುಂಪುಗಳಲ್ಲಿನ ಫಲಾನುಭವಿಗಳು ತಮ್ಮ ಗುರುತಿನ ಚೀಟಿ ತೋರಿಸಿ ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಬಹುದಾಗಿದೆ. ಒಂದು ವೇಳೇ ಗುರುತಿನ ಚೀಟಿ ಇಲ್ಲದಿದ್ದರೆ ಸಂಬAದಪಟ್ಟ ಇಲಾಖೆಗಳಿಂದ ನಿಗದಿತ ನಮೂನೆಯನ್ನು ಭರ್ತಿಮಾಡಿ ಸ;ಲ್ಲಿಸಿ ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.  

ನಮೂನೆ ಒಂದರಲ್ಲಿನ ಆದ್ಯತಾ ಗುಂಪುಗಲ ವಿವರ  ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬಆರೈಕೆದಾರರು, ಖೈದಿಗಳುಚಿತಾಗಾರ/ಸ್ಮಶಾನ/ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು.ಕೊವಿಚ್-೧೯ ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು.

ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು. ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು. ಅಂಚೆ ಇಲಾಖೆಯ ಸಿಬ್ಬಂದಿಗಳು, ಬೀದಿ ಬದಿಯ ವ್ಯಾಪಾರ ಮಾಡುವವರು. ಭದ್ರತೆ ಮತ್ತು ಕಛೇರಿಗಳ ಹೌಸ್ ಕೀಪಿಂಗ್ ಸಿಬ್ಬಂದಿಗಳು.

ನ್ಯಾಯಾAಗ ಅಧಿಕಾರಿಗಳು. ವಯೋವೃದ್ಧರ / ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು. ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಮಾದ್ಯಮದವರು. ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು.ಆಯಿಲ್ ಇಂಡಸ್ಟಿç ಮತ್ತು ಗ್ಯಾಸ್ ಸರಬರಾಜು ಮಾಡುವವರು (ಪೆಟ್ರೋಲ್ ಬಂಕ್ ಕರ್ಮಚಾರಿ  ಒಳಗೊಂಡAತೆ). ಔಷದಿ ತಯಾರಿಸುವ ಕಂಪನಿಯ ಸಿಬ್ಬಂದಿಗಳು. ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳು ಹಾಗೂ ಎಲ್.ಎಂ.ಪಿ ಸಿಬ್ಬಂದಿ (ಐiquiಜ meಜiಛಿಚಿಟ oxಥಿgeಟಿ ಠಿಟಚಿಟಿಣ) ಗಳು. ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು (ಉದಾಹರಣೆ: ವೃದ್ಧಾಶ್ರಮ ವಾಸಿಗಳು,

ನಿರ್ಗತಿಕರು).ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು ಹಾಗೂ ಕರ್ನಾಟಕ ರಾಜ್ಯ ಆಹಾರ ನಿಗಮ ಸಿಬ್ಬಂದಿಗಳು. 





ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.) ಕೆಲಸಗಾರರು ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ. ೧೮ ವರ್ಷ ೪೪ ವರ್ಷ ವಯೋಮಾನದಲ್ಲಿನ ಕೋಮಾರ್ಬಿಡಿಟಿ ಹೊಂದಿರುವ ಫಲಾನುಭವಿಗಳು.ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಸಿಬ್ಬಂದಿ. ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ಇಲಾಖೆಯ ಸಿಬ್ಬಂದಿ. ಭಾರತ್ ಎಲೆಕ್ಟಾçನಿಕ್ ಅಮಿಟೆಡ್ (ಬಿ.ಇ.ಎಲ್) ಸಿಬ್ಬಂದಿಗಳು.

ನಮೂನೆ ಎರಡರಲ್ಲಿನ ಆದ್ಯತಾ ಗುಂಪಿನ ಪಟ್ಟಿ  ಕಟ್ಟಡ ಕಾರ್ಮಿಕರು ಟೆಲಿಕಾಮ್ ಮತ್ತು ಇಂಟರನೆಟ್ ಸೇವಾದಾರರು  ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗಳು ಬ್ಯಾಂಕ್ ಸಿಬ್ಬಂದಿ ಹಾಗೂ ವಿಮೆ (Iಟಿsuಡಿಚಿಟಿಛಿe) ಸಿಂಧಿಗಳು ಪೆಂಟ್ರೋಲ್ ಬಂಕ್‌ನ ಕೇಲಸಗಳನ್ನು ಚಿತ್ರೋದ್ಯಮದ ಉದ್ಯಮಿ ಕಾರ್ಯಕರ್ತ ಸಿಬ್ಬಂದಿ ಅಡ್ವೊಕೇಟ್‌ಗಳು -ಹೋಟೆಲ್ ಮತ್ತು ಆತಿಥ್ಯ ಸೇವಾದಾರರು,  ಕೆ.ಎಂ.ಎಫ್ ಸಿಬ್ಬಂದಿಗಳು ರೈಲ್ವೆ ಸಿಬ್ಬಂದಿಗಳು, ಗಾರ್ಮೆಂಟ್ ಕಾರ್ಖಾನೆ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು, ಭಾರತದ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು, ಜೈಲ್ ಸಿಬ್ಬಂದಿಗಳು, ಖSಏ ಕೆಲಸಗಾರರು, ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಸ್ವಧಾರ್ ಗೃಹವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯವಾಸಿಗಳು. (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ) ಹಿಂದೂಸ್ತಾನ್ ಏರೋನಾಟಿಕ್ಸ್ ಅಮಿಟೆಡ್ ಸಂಸ್ಥೆಯ ಸಿಬ್ಬಂದಿಗಳಿಗೆ ಲಸಿಕೆ ನಿಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು

ಸಭೆಯಲ್ಲಿ ಆರ್ ಸಿ ಎಚ್ ಅಧಿಕಾರಿ ಕಾಂತರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದಿಲೀಪ್, ಅಂಗವಿಕಲ ಕಲ್ಯಾಣಾಧಿಕಾರಿ ಮಲ್ಲೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕಾರದ ರೇವತಿ ಸುಧಾಕರ್ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


Post a Comment

Previous Post Next Post