ಬೇಲೂರಿನ 65 ಗುಡಿಸಲು ನಿವಾಸಿಗಳಿಗೆ ಪಡಿತರ ವಿತರಣೆ

ಬೇಲೂರು:

ಇಲ್ಲಿನ ಶಿಕ್ಷಕ ವೃಂದ ಕೊರೊನಾ ವೇಳೆ ಸಂಕಷ್ಟದಲ್ಲಿರುವ ಜೂನಿಯರ್ ಕಾಲೇಜು ಹಿಂಭಾಗದ ಗುಡಿಸಲು ಕುಟುಂಬ ನಿವಾಸಿಗಳಿಗೆ ಪಡಿತರ ವಿತರಿಸಿದರು. 


ಈ ಸಂದರ್ಭ ಮಾತನಾಡಿದ ನಿವೃತ್ತ ಶಿಕ್ಷಕಿ ಸೌಭಾಗ್ಯ ಅಂತೋಣಿ, ಕೊರೊನಾ ಸಂದರ್ಭ ಸಂಕಷ್ಟದಲ್ಲಿರುವ ಕೆಲವರಿಗಾದರೂ ಯಾನಾದರೂ ನೆರವು ಕೊಡಬೇಕೆಂಬುದಾಗಿತ್ತು. 


ನಾನೊಬ್ಬಳೇ ನೆರವು ನೀಡುವುದಕ್ಕೆ ಸಾಧ್ಯವಿಲ್ಲದ್ದನ್ನು ಮನಗಂಡು ಆತ್ಮೀಯರಾದ ಕೆಲವು ಶಿಕ್ಷಕರಲ್ಲಿ ವಿಷಯ ಪ್ರಸ್ಥಾಪಿಸಿದೆ.ಆತ್ಮೀಯರಾದ ವೀರಭದ್ರಪ್ಪ, ಶಿವಣ್ಣ, ಪುರಸಭ ಮಾಜಿ ಉಪಾಧ್ಯಕ್ಷೆ ನಾಗಮ್ಮ, ಸಾಹಿರಾ, ಅಂತೋಣಿ, ಮಧು, ರುದ್ರೇಶ್, ರಫೀಕ್, ಸುರೇಶ್, ಇಂದಿರಾ ಇವರೆಲ್ಲರೂ ಹೆಚ್ಚಿನದಾಗಿ ಸ್ಪಂಧಿಸಿದರು ಹಾಗೂ ಬೆಂಗಳೂರಿನ ನನ್ನ ಅತ್ತಿಗೆ ಹಾಗೂ ಸ್ನೇಹಿತರಿಗೂ ವಿಚಾರ ತಿಳಿಸಿದೆ, ಅವರು ದೇವರ ಹುಂಡಿಯಲ್ಲಿ ಹಾಕಿದ್ದ 22 ಸಾವಿರ

ರೂ.ಗಳನ್ನು ಕಳುಹಿಸಿದ್ದಾರೆ.

ಇದೀಗ 17 ವಸ್ತುಗಳನ್ನು 65 ಕುಟುಂಬಗಳಿಗೆ ನೀಡುತ್ತಿದ್ದೇವೆ. ಅಕ್ಕಿ ಸೊಸೈಟಿಯಲ್ಲೆ ನೀಡುವುದರಿಂದ ಅಕ್ಕಿಯನ್ನು ನೀಡುತ್ತಿಲ್ಲ. ಸಕ್ಕರೆ, ಬೇಳೆ, ಸೋಪು, ಸಾಸಿವೆ, ಎಣ್ಣೆ, ಹಪ್ಪಳ, ತರಕಾರಿ, ಸಾಂಬಾರಪುಡಿ ಇವುಗಳನ್ನು ಕೊಟ್ಟಿದ್ದೇವೆ. ಪಡಿತರ ವಸ್ತುಗಳ ಖರೀದಿಸಿ ತರುವಾಗ ಆಟೋ ವೃಕ್ಷಾದವರು ಬಾಡಿಗೆ ಪಡೆಯದೆ ಸಹಕರಿಸಿದ್ದಾರೆ. 


ನಾವು ನೀಡುವ ಅಲ್ಪ ಪ್ರಮಾಣದ ಪಡಿತರವೆ ಸಾಲದು ಪ್ರತಿಯೊಬ್ಬರೂ

ಇದೆ ರೀತಿ ಸಹಾಯ ಮಾಡಿದರೆ ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಹೆದುರಿಸುತ್ತಿರುವ ಹಲವು ಕುಟುಂಬಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.


ಪೋಟೋ:

ಬೇಲೂರು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಹಿಂಭಾಗದಲ್ಲಿ ಇರುವ ಗುಡಿಸಲು ನಿವಾಸಿಗಳಿಗೆ ಪಡಿತರ ವಿತರಿಸಲಾಯಿತು

Post a Comment

Previous Post Next Post