ಮುಜಾಗ್ರತಾ ಕ್ರಮ ಕೈಗೊಳ್ಳದ ಕೇಂದ್ರ ಹಾಗೂ ರಾಜ್ಯಸರ್ಕಾರ ಕೋವಿಡ್ ನಿಯಂತ್ರಿಸಲು ವಿಫಲವಾಗಿದೆ ಡಿ.ಕೆ.ಸುರೇಶ್

 ಹಾಸನ:  ಮುಜಾಗ್ರತಾ ಕ್ರಮ ಕೈಗೊಳ್ಳದ ಕೇಂದ್ರ‌ ಹಾಗೂ  ರಾಜ್ಯ ರ‍್ಕಾರ ಕೋವಿಡ್ ನಿಯಂತ್ರಿಸಲು ಸಂಪರ‍್ಣ  ವಿಫಲವಾಗಿದೆ  ‌ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು. 


ದುದ್ದ ಹೈಸ್ಕೂಲ್ ‌ಮೈದಾನದಲ್ಲಿ ದುದ್ದ ಬ್ಲಾಕ್ ‌ಕಾಂಗ್ರೆಸ್ ವತಿಯಿಂದ ಬಾಗೂರು ‌ಮಂಜೇಗೌಡ‌ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಆಹಾರ‌ಕಿಟ್ ವಿತರಣಾ ಕರ‍್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ನಾಯಕರು ಅಧಿಕಾರದ ದಾಹದಲ್ಲಿ‌ ಕಾಲ ಕಳೆಯುತ್ತಿದ್ದಾರೆ  ಹೊರತು ಕೋವಿಡ್ ‌ನಿಯಂತ್ರಣ  ಮಾಡುವಲ್ಲಿ‌ಯಾವುದೇ‌ಆಸಕ್ತಿ ಇಲ್ಲ.ದೇಶದಲ್ಲಿ ಶೇಕಡ ೭೦ ರಷ್ಟು ಹಸಿವಿನಿಂದ ಬಳಲುತ್ತಿದ್ದಾರೆ.‌ರ‍್ಕಾರ ಇವರ‌ ನೆರವಿಗೆ ಬಾರದೆ ಕಾಲಹರಣ ಮಾಡುತ್ತಿದೆ ಅವರು ಕೋವಿಡ್ ನಿಯಂತ್ರಣಕ್ಕೆ ಯಾವುದೇ ಪರಿಣಕಾರಿ‌‌ಯೋಜನೆ‌ಜಾರಿಗೆ‌ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಜನರಿಗೆ ಆತ್ಮ ಸ್ಥರ‍್ಯ ತುಂಬುವಲ್ಲಿ ವಿಫಲವಾಗಿದೆ.‌ಇದರಿಂದ ಬಡವರು ಬದುಕು ಕಷ್ಟವಾಗಿದೆ ಎಂದ   ಅವರು  ಪ್ರಧಾನಿ ಮೋದಿ ಅವರು  ಬಡ‌ ಜನರಿಗೆ ೨೧ ಲಕ್ಷ ಕೋಟಿ ಕೊಡುತ್ತೇವೆ.ನೇರವಾಗಿ ಜನ್ ಧನ್ ಖಾತೆಗೆ ಬರುತ್ತದೆ ಎಂದು‌ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾರ ಖಾತೆಗೂ  ೨೧ ಪೈಸೆ ಕೊಡಲಿಲ್ಲ ಎಂದು ಟೀಕಿಸಿದರು.

ಬಡವರು ಕೋವಿಡ್ ಸಂಕಷ್ಟದ ‌ಬಳತ್ತಿರುವುದರನ್ನು ಮನಗಂಡು ಕಾಂಗ್ರೆಸ್ ‌ಪಕ್ಷದಿಂದ ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ

 ಒಂದು‌ ಕೋಟಿ‌ ಆಹಾರ ಕಿಟ್ ವಿತರಣೆ ‌ಮಾಡುವ‌ ಮೂಲಕ ಕಾಂಗ್ರೆಸ್ ಬಡವರ ಪಕ್ಷ ಎಂಬುದನ್ನು ಸಾಭೀತು‌ ಪಡಿಸಿದೆ ಎಂದರು.

ತೈಲ‌ ಹಾಗೂ‌ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದೆ‌ ಬಿಜೆಪಿಯ ಬಹುದೊಡ್ಡ ಸಾಧನೆ ಎಂದು ವ್ಯಂಗ್ಯ ‌ವಾಡಿದ ಅವರು ಮೋದಿ ಅಧಿಕಾರವಧಿಯಲ್ಲಿ ಜನರು‌ ಬಾಯಿಗೆ ‌ಬಟ್ಟೆ ಕಟ್ಟಿಕೊಂಡು ಓಡಾಡಬೇಕಾಗದ ಪರಿಸ್ಥಿತಿ ಬಂದಿರುವುದು ದೇಶದ ಬಹುದೊಡ್ಡ ದುರಂತ ಎಂದರು

ಕೆಪಿಸಿಸಿ ಕರ‍್ಯಾಧ್ಯಕ್ಷ  ಧ್ರುವನಾರಾಯಣ್ ಮಾತನಾಡಿ,  ಕೋವಿಡ್ ನಿಂದ ಲಕ್ಷಾಂತರ ಜನರು‌ ಮರಣ ಹೊಂದಿದ್ದಾರೆ ಇದಕ್ಕೆ‌ ರಾಜ್ಯ ಮತ್ತು ‌ಕೇಂದ್ರ ರ‍್ಕಾರ ಕಾರಣವಾಗಿದೆ. ಕೋವಿಡ್ ನಿಯಂತ್ರಿಸಲು ಸಾಧ್ಯವಾಗದ ರ‍್ಕಾರ  ಮರಣದ ಸಂಖ್ಯೆಯನ್ನು‌  ರ‍್ಕಾರ‌ ಸುಳ್ಳು ‌ಹೇಳುತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌  ಸೋತಿದ್ದರು ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ಕರ‍್ಯಕ್ರಮಕ್ಕೆ ಸೋಲಿಲ್ಲ ಎಂದ ಅವರು, ಸಿದ್ದರಾಮಯ್ಯ ‌ಇಲ್ಲ ಎಂದರೆ ಕಾಂಗ್ರೆಸ್ ‌ಗೆ ಉಳಿಗಾಲ ಎಂದು ಹೆಚ್.ಡಿ ರೇವಣ್ಣ ಅವರು ಮಾತನಾಡಿದ್ದಾರೆ. ಆದರೆ ಜೆಡಿಎಸ್ ನಿಂದ ಸಿದ್ದರಾಮಯ್ಯ ಅವರನ್ನು ಉಚ್ಛಾಟಿಸಿರುವ ಇವರು

ಸಿದ್ದರಾಮಯ್ಯ ‌ಅವರ‌ ಬಗ್ಗೆ ‌ಮಾತನಾಡುವ ನೈತಿಕತೆ‌ ಇಲ್ಲ. ಮೊದಲು ನಿಮ್ಮ ಸರಿಪಡಿಸಿಕೊಳ್ಳಿ ಅದು ಬಿಟ್ಟು ಕಾಂಗ್ರೆಸ್ ‌ ಮನೆಯಲ್ಲಿ  ವಿಷ ಬೆರೆಸುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು. 

ಕರ‍್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಎಂ.ಎಲ್ .ಸಿ‌ ಗೋಪಾಲಸ್ವಾಮಿ, ಹಿರಿಯ ಮುಖಂಡ ಹೆಚ್.ಕೆ.ಜವರೇಗೌಡ, ಮಾಜಿ ಶಾಸಕ ಸಿ.ಎಸ್ .ಪುಟ್ಟೇಗೌಡ,ಬಿ.ಕೆ.ರಂಗಸ್ವಾಮಿ ಹೆಚ್.ಕೆ.ಮಹೇಶ್, ಮಹಿಳಾ ಘಟಕ ರಾಜ್ಯಾಧ್ಯಕ್ಣರಾದ ಪುಷ್ಪಾಮರನಾಥ್, ಸಿ.ವಿ.ರಾಜಪ್ಪ, ಬ್ಲಾಕ್ ‌ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ,ವಕೀಲ ಹರೀಶ್, ರಾಮಚಂದ್ರ, ಮತ್ತಿತರರು ಇದ್ದರು

Post a Comment

Previous Post Next Post