ಒಂದು ಕಡತಕ್ಕೆ ಸಹಿ ಹಾಕಿದ್ರೆ ರಾಜಕೀಯ ನಿವೃತ್ತಿ ಹೆಚ್.ಡಿ. ರೇವಣ್ಣ ಸವಾಲು

ಹಾಸನ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವನರು ನನ್ನ ಒಂದು ಕಡತಕ್ಕೆ ಸಹಿ ಹಾಕಿದ್ದರೇ ನಾನು ರಾಜಕೀಯಿಂದಲೇ ನಿವೃತ್ತಿ ಆಗುತ್ತೇನೆ ಎಂದು ಎಂ.ಎಲ್.ಸಿ. ಗೋಪಾಲಸ್ವಾಮಿ ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಸವಾಲು ಹಾಕಿದರು.


      ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತು ಸದಸ್ಯರಾದ ನಮ್ಮ ಗೋಪಾಲಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರು ಹೇಳುವಂತೆ ಯಡಿಯೂರಪ್ಪ ಅವರು ಏನಾದರೂ ನನ್ನ ಒಂದು ಕಡತಕ್ಕೆ ಸಹಿ ಹಾಕಿದ್ದರೆ ಎಂದು ಸಾಬೀತಾದರೇ ಇಂದೇ ನಾನು ರಾಜಕೀಯ ನಿವೃತ್ತಿ ಆಗ್ತೀನಿ. ಎರಡು ವರ್ಷದಿಂದ ಕೆಲಸ ನಿಲ್ಲಿಸಿದ್ದರೂ ಪರವಾಗಿಲ್ಲ. ನಮ್ಮ ಕೆಲಸ ಹಾಳು ಬಿದ್ದು ಹೋಗಲಿ. ಸಹಿ ಹಾಕಲು ನಾನು ಯಾವತ್ತೂ ಕೇಳಿಲ್ಲ. ಅದರೆ ಮಾಡಿ ಇಲ್ಲಾಂದ್ರೆ ಬಿಡಿ. ನನೆಗುದಿಗೆ ಬಿದ್ದ ಎಲ್ಲ ಕೆಲಸ ಬಿಡಿ ನಮಗೆ ಬೇಜಾರಿಲ್ಲ. ಯಾರಿಗೆ ಕೊಡ್ಬೇಕು ಅಂದ್ರು. ಯಾರಿಗಾದ್ರು ಕೊಡಿ ಅಂತ ಹೇಳಿದ್ದೇನೆ. ಬಿಜೆಪಿಗೆ ನನ್ನಷ್ಟು ಬೈದವರು ಯಾರು ಇಲ್ಲ. ಸಿದ್ದರಾಮಯ್ಯ ಕೂಡ ಬೈದಿದ್ದಾರೆ. ದಯಮಾಡಿ ನಮ್ಮ ಜಿಲ್ಲೆಯ ಜನರನ್ನು ಉಳಿಸಿಕೊಡಿ ಎಂದು ಕೇಳಿದ್ದೇನೆ ಅಷ್ಟೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಹಾಸನದ ಜಿಲ್ಲಾಧಿಕಾರಿ ಕಛೇರಿ ಮುಂದೆ ಸಾಮಾಜಿಕ ಅಂತರದಲ್ಲಿ ಕರೊನಾ ನಿಯಮ ಉಲ್ಲಂಘಿಸದೆ ಪಾಲಿಸುವ ಮೂಲಕ ಬುಧವಾರದಂದು ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. 

      ದೃವ ನಾರಾಯಣ ಯಾರ ಪರ ಇದ್ದೇನೆ ಅಂತ ಹೇಳೋಕ್ ಹೇಳಿ. ಸಿದ್ದರಾಮಯ್ಯ ಇಲ್ಲ ಅಂದಿದ್ರೆ ಅವರು ಗೆಲ್ತಿದ್ದರಾ. ನಾವು ಬಿರುಕು ಎಲ್ಲೂ ಮೂಡಿಸಿಲ್ಲ. ದೃವನಾರಾಯಣ್ ಮೇಲೆ ನನಗೆ ಗೌರವ ಇದ್ದು, ಅವರಿಗೆ ಒಳ್ಳೆಯದಾಗಲಿ ಎಂದ ಅವರು, ಸಿದ್ದರಾಮಯ್ಯ ಅವರನ್ನು ಬಿಟ್ಟೆ ಗೆಲ್ಲುವ ಶಕ್ತಿ ಕೊಡಲಿ ಎಂದು ಟಾಂಗ್ ನೀಡಿದರು. ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ನಾನು ಹೋಗಿಲ್ಲ. ಕೆಲಸದ ಮನೆ ಹಾಳುಬಿದ್ದು ಹೋಗಲಿ. ದಿನಾ ಇಲ್ಲಿ ಜನ ಸಾಯ್ತಾ ಇದಾರೆ. ಸಿಎಂ ಎದುರು ಕುಸ್ತಿ ಮಾಡ್ಲಾ. ಕೆಳಗಡೆ ಕೂತಿದ್ದರೆ ಮಾತಾಡ್ತಿದ್ದೆ. ಮುಖ್ಯಮಂತ್ರಿಗೆ ಗೌರವ ಕೊಡ್ಬಾರ್ದಾ. ಅದಕ್ಕೆ ಅಂದು ಸಿಎಂ ಹಾಸನಕ್ಕೆ ಬಂದಾಗ ನಡೆದ ಪ್ರಸಂಗದ ಬಗ್ಗೆ ಮೆಲುಕು ಹಾಕಿದರು. ಬಿಜೆಪಿಯನ್ನು ಎ, ಬಿ ಟೀಂ ಎಂದು ನಮ್ಮನ್ನ ಕರೆದರು. ದೇವೇಗೌಡರ ಮುಗಿಸಲು ಇವರು ವ್ಯೂಹ ರಚಿಸಿದರು. ತಮ್ಮ ಸರ್ಕಾರ ಇದ್ದಾಗ ನಮಗೆ ಏನೆಲ್ಲ ತೊಂದರೆ ಕೊಟ್ಟರು ಗೊತ್ತಿರುವ ವಿಚಾರ. ನಾರಾಯಣ ಉತ್ತಮ ಸಂಸದೀಯ ಪಟು ಎಂದರು. ಸಮ್ಮಿಶ್ರ ಸರ್ಕಾರದಲ್ಲಿ ನಾನೇ ಅನುಭವಿಸಿದೆ. ಕುಮಾರ ಸ್ವಾಮಿಗೆ ಏನ್ ಮಾಡೋಕ್ ಬಿಟ್ಟರು ಇವರು. ಎಚ್ಡಿಕೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ೧೪ ತಿಂಗಳು ನರಕಯಾತನೆ ಅನುಭವಿಸಿದಾನೆ ಅವನು. ಅದನ್ನೆಲ್ಲ ಸಮಯ ಬಂದಾಗ ಹೇಳ್ತಿನಿ. ಮುಂದಿನ ೨೦೨೩ ರ ಚುನಾವಣೆಯನ್ನು ಎರಡು ರಾಷ್ಟಿçÃಯ ಪಕ್ಷಗಳನ್ನು ದೂರವಿಟ್ಟು ಏಕಾಂಗಿಯಾಗಿ ಗೋರಾಟ ಮಾಡುತ್ತೇವೆ ಎಂದು ಶಪತ ಮಾಡಿದರು. ನಾನು ಸೂಪರ್ ಸಿಎಂ ಆಗಿದ್ದರೇ ಹೆಚ್.ಡಿ. ಕುಮಾರಸ್ವಾಮಿಯಿಂದ ಬೆಂಗಳೂರಲ್ಲಿ ಹೊಲ, ಗದ್ದೆ ಮನೆಯನ್ನು ಏನಾದರೂ ಬರೆಯಿಸಿಕೊಂಡಿದ್ದೇನಾ ಎಂದು ಪ್ರಶ್ನೆಯೊಂದಕ್ಕೆ ರೇವಣ್ಣ ಉತ್ತರಿಸಿದರು.

     ಹಾಸನ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಇನ್ನು ಕಡಿಮೆ ಆಗಿಲ್ಲ. ಶೇಕಡ ಆರುವರೆಯಷ್ಟು ದಿನ ದಾಖಲಾಗುತ್ತಿದೆ. ಇನ್ನು ೬ ರಿಂದು ೭ ಜನರು ಸಾವನಪ್ಪುತ್ತಿದ್ದಾರೆ. ಲೆಕ್ಕಕ್ಕೆ ಇಲ್ಲದವು ಇನ್ನು ಇದೆ. ಖಾಸಗಿಯವರಿಗೆ ಡಯಾಲಿಸಸ್ ಗುತ್ತಿಗೆ ಕಒಟ್ಟು ಯಾವ ಪ್ರಯೋಜನವಾಗುತ್ತಿಲ್ಲ. ಔಷಧಿಗಳಿಲ್ಲ ಎಂದು ಹೊರಗೆ ತರಲು ಕಳುಹಿಸಲಾಗುತ್ತಿದೆ. ಗುತ್ತಿಗೆಯನ್ನು ವಾಪಸ್ ಪಡೆಯುವುದಾಗಿ ಈಗಾಗಲೇ ಹೇಳಿದ್ದಾರೆ ಎಂದರು. ಕರೊನಾದಿಂದ ಸತ್ತವರಿಗೆ ೧ ಲಕ್ಷ ರೂಗಳನ್ನು ಶೀಘ್ರ ಕೊಡಬೇಕು ಅಂತ ಒತ್ತಾಯ ಮಾಡುತ್ತೇನೆ. ಗುಣಮುಖರಾಗಿ ಬಂದವರಿಗೂ ಕೊಡಬೇಕು. ಡೈರಿಯಿಂದ ನಾವೂ ಕೊಡ್ತಿವಿ. ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನೈಜ ಬಡವರಿಗೆ ಅನುದಾನ ತಲುಪಬೇಕು ಎಂದು ಆಗ್ರಹಿಸಿದರು. ಇನ್ನು ರೈತರುಗಳಿಗೆ, ಬಡವರಿಗೆ ಟೈಲರ್, ಸವಿತಾ ಸಮಾಜಕ್ಕೆ ಇನ್ನು ಪರಿಹಾರದ ಹಣ ಬಂದಿರುವುದಿಲ್ಲ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಕೂಡಲೇ ಆಯಾ ಕ್ಷೇತ್ರದ ಪುರಸಭೆ, ನಗರಸಭೆ, ಪಟ್ಟಣ ಪಮಚಾಯಿತಿ ವ್ಯಾಪ್ತಿಯಲ್ಲಿ ಅವರಿಗೆ ಸರ್ಟಿಪಿಕೇಟ್ ಕೊಟ್ಟು ಪರಿಹಾರವನ್ನು ಕೊಡುವಂತೆ ಒತ್ತಾಯಿಸಿದರು.


Post a Comment

Previous Post Next Post