ಹಾಸನದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮೊದಲ ಹಂತದ ಲಸಿಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೇತೃತ್ವದಲ್ಲಿ ಕರೋನ ಸೋಂಕಿನಿಂದ ರಕ್ಷಣೆ ಮಾಡುವ ಸಲುವಾಗಿ ಕರೋನ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಅದರಂತೆ ದಿನನಿತ್ಯ ತುರ್ತು ಸಾರಿಗೆ ಸೇವೆಯನ್ನು ಒದಗಿಸುವ ಆಟೋ, ಟ್ಯಾಕ್ಸಿ ಚಾಲಕರಿಗೆ ಮೊದಲ ಹಂತದ ಲಸಿಕೆ ಹಾಕುವ ನಿಟ್ಟಿನಲ್ಲಿ ಇಂದು ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಸನ ನಗರದ 2,000 ( ಎರಡು ಸಾವಿರ) ಆಟೋ ಚಾಲಕರಿಗಾಗಿ "ಲಸಿಕಾ ಮಹಾ ಅಭಿಯಾನ" ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಹಾಗೆಯೇ ಕರೋನ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಸಂಕಷ್ಠದಲ್ಲಿರುವ ಹಾಸನ ನಗರದ ಆಟೋ ಚಾಲಕರಿಗೆ ಇಂದು ಫುಡ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

Post a Comment

Previous Post Next Post