ನಶೆ’ ಆಲ್ಬಂ ಸಾಂಗ್ ರಿಲೀಸ್

ಸಮಾಜದಲ್ಲಿ  ಯುವಕರಿಂದ ಹಿರಿಯರ ತನಕ ಒಂದೊಂದು ನಶೆ ಇದ್ದೇ ಇರುತ್ತದೆ, ಒಳ್ಳೆಯ ರೀತಿಯ ಚಟ ಅಂದರೆ ಯಾವುದು ? ಅಂದರೆ ಹಾಲು , ಚಹಾ, ಟೀ, ಕುಡಿಯುವುದು ಪತ್ರಿಕೆ ಓದುವುದು , ಪ್ರತಿ ಹೆಜ್ಜೆಯಲ್ಲಿಯೂ  ಸಾಧನೆ ನಮ್ಮದಾಗಿರಬೇಕು,ಇತ್ಯಾದಿ ಇವೆಲ್ಲವೂ ನಮಗೆ  ಒಳ್ಳೆಯ ಚಟವೇ ಹೌದು.

ಜೇಬು ತುಂಬುವಷ್ಟು ಹಣಮಾಡಬೇಕೆನ್ನುವ ಅತಿಆಸೆಗಳು ಒಳ್ಳೆಯದಲ್ಲ ಕೊನೆಗೆ ಹತಾಶೆ ಪಡಲೇಬೇಕು,

ಕೆಟ್ಟ ಚಟಗಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವುದು ಸರಿ ಅಲ್ಲ.ಒಟ್ಟಾರೆ ಈ ಹಾಡಿನ ಮೂಲಕ ಯುವಕರಿಗೆ ನಶೆ ಮಾಡಬೇಡಿ  ಎಂಬ ನಶೆ  ನೀಡಿದ್ದಾರೆ.

ನಶೆಯಲ್ಲಿ ಬಿದ್ದರೆ ತಮ್ಮ ಕಾಲಿನ ಮೇಲೆ ನಿಂತು ದುಡಿಯುವ ಛಲ, ಶ್ರಮ ಎಲ್ಲವೂ ವ್ಯರ್ಥವಾಗಿ, ಜಗತ್ತಿನಲ್ಲಿ ನಮ್ಮ ಸೋಲುಗಳನ್ನು ಸಂಭ್ರಮಿಸಲು ಜನಗಳು ಕಾಯುತ್ತಿದ್ದಾರೆ ಅದಕ್ಕಾದರೂ ನಶೆ ಮಾಡಬೇಡ ಎನ್ನುವ ಸಾಲುಗಳು ಈ ಹಾಡಿನಲ್ಲಿ ತಿಳಿಸಿದ್ದಾರೆ.


ಬೆಂಗಳೂರಿನ ಹೊಂಗಸಂದ್ರದ ಯುವ ಉದಯೋನ್ಮುಖ ಪ್ರತಿಭೆ, ಬಾಡಿ ಬಿಲ್ಡರ್ ಅಶೋಕ್ ಕುಮಾರ್ ಎಚ್.ಎನ್ ಅವರು ಈ ಹಾಡಿನಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

ಓದಿನಲ್ಲಿ ಪದವಿ ಮುಗಿಸಿದ್ದಾರೆ, ನೂರಾರು ಕನಸುಗಳ ಜೊತೆಗೆ ಪೋಲೀಸ್   ಆಗಬೇಕು ಅಂದುಕೊಂಡಿದ್ದಾರೆ.

ಅಥವಾ ಚಲನಚಿತ್ರ ರಂಗದಲ್ಲಿ ಕಲಾವಿದನಾಗಿ ಮುಂದುವರೆಯ ಬೇಕೆನ್ನುವ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.


ಈ " ನಶೆ " ಹಾಡಿಗೆ ಅಶೋಕ ಅವರ ಜೊತೆಗೆ  ಬೇಲೂರಿನ  ಅಂಕಿತಾ ಅನ್ನುವ ಯುವ ಉದಯೋನ್ಮುಖ ಪ್ರತಿಭೆ,ಬೆಂಗಳೂರಿನ ಕಲಾವಿದರ ಜೊತೆಯಲ್ಲಿ ಹೆಜ್ಜೆ ಹಾಕಿದ್ದಾರೆ.

ಖ್ಯಾತ ಗಾಯಕ ರಾಹುಲ್ ಡಿಟ್ಟೋ  ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ, ಚೀಯಾನ್ ಡೆವಿಲ್ ನಿರ್ದೇಶನ ಮಾಡಿದ್ದಾರೆ.

ಖ್ಯಾತ ಸಮಾಜ ಸೇವಕ, ಅಭಿಮಾನಿಗಳ ಮನಗೆದ್ದಿರುವ ಸೋಮಶೇಖರ್ ಹೆಚ್ ಎನ್ ಅವರ ನಿರ್ಮಾಣದಲ್ಲಿ ಮೂಡಿರುವ ಹಾಡು ಇದಾಗಿದೆ.

ಆನಂದ್ ಆಡಿಯೋ ಪಾಪುಲರ್ ಯೂಟ್ಯೂಬ್ ಚಾನೆಲ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲೆಡೆ ಬಾರೀ ಸದ್ದು ಮಾಡ್ತಿದೆ,

 ನಶೆ ಆಲ್ಬಂ ಹಾಡಿನ್ನು  ಎಲ್ಲರೂ ನೋಡಿ ಪ್ರೋತ್ಸಾಹಿಸಿ.

https://youtu.be/bkpZsIu8ufA

                                             

                                           -ನಿರಂಜನ್ ಎ ಸಿ ಬೇಲೂರು

                                                   ಹಾಸನಸೀಮೆ.ಇನ್ 

Post a Comment

Previous Post Next Post