ಹಾಸನ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿರುವುದನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಪ್ರಚಾರಕ್ಕೆ ಎಂದು ಟೀಕಿಸಿರುವುದು ಅವರ ವ್ಯಕ್ತಿತ್ವಕ್ಕೆ ಘನತೆ ತರುವುದಿಲ್ಲ ಎಂದು ಮುಖಂಡ ಬಾಗೂರು ಮಂಜೇಗೌಡ ಹಾಗೂ ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೌರಿಪುರ ವಿಶ್ವನಾಥ್ ತಿರುಗೇಟು ನೀಡಿದ್ದರೆ.
ಜಂಟಿ ಪತ್ರಿಕೆ ಹೇಳಿಕೆ ನೀಡಿರುವ ಅವರು, ಕೋವಿಡ್ ತರ‍್ತು ಪರಿಸ್ಥಿತಿಯಲ್ಲಿ ರಾಜ್ಯ ಹಾಗೂ ಕೇಂದ್ರ ರ‍್ಕಾರಗಳು ಪೆಟ್ರೋಲ್ ,ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಜನಸಾಮಾನ್ಯರ ಬದುಕಿಗೆ ಹೊರೆಯಾಗಿದೆ.ಕಾಂಗ್ರೆಸ್ ಸಾಮಾನ್ಯ ಜನರ, ಬಡವರ ಜೊತೆಗಿರುವ ಪಕ್ಷ ಅದಕ್ಕಾಗಿ ಜನತೆ ಹಿತದೃಷ್ಟಿಯಿಂದ ಬೆಲೆ ಏರಿಕೆ ಖಂಡಿಸಿ ವಿರೋಧ ಪಕ್ಷದಲ್ಲಿದ್ದುಕೊಂಡು ಪ್ರತಿಭಟನೆ ಮಾಡಲಾಗಿದೆ. ವಿಶಾಲ ಜ್ಞಾನ ಇಲ್ಲದ ರೇವಣ್ಣ ಅವರು ಇದು ಪ್ರಚಾರ ಎಂದು ಭಾವಿಸಿದರೆ ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಗೆ ಭವಿಷ್ಯ ಇಲ್ಲ ಎಂದು ಹತಾಶರಾಗಿ ಬಿಜೆಪಿಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.ಅವರ ಹೇಳಿಕೆ ಗಮನಿಸಿದರೆ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ. ಸಿಎಂ ಹಾಸನಕ್ಕೆ ಬಂದು ಹೋದ ಮೇಲೆ ರೇವಣ್ಣ ಅವರಿಗೆ ಸ್ವಲ್ಪ ಪ್ರೀತಿ ಹೆಚ್ಚಾಗಿದೆ ಅನಿಸುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಒಳ್ಳೆಯ ಕೆಲಸಗಳನ್ನು ಟೀಕಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದುಕೊಂಡು ರ‍್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಬೇಕು ಅದನ್ನು ಬಿಟ್ಟು ಅವರೊಂದಿಗೆ ಶಾಮೀಲಾಗಿ ನಾವು ರೈತರಪರ, ಜನರಪರ ,ಬಡವರ ಪರ ಎಂದು ನಿತ್ಯ ಪತ್ರಿಕಾಗೋಷ್ಠಿ ನಡೆಸಿ ನಾಟಕವಾಡಿಕೊಂಡು ಪ್ರಚಾರಗಿಟ್ಟಿಸಿಕೊಳ್ಳುತ್ತಿರುವವರು ಯಾರು ಎಂಬುವುದು ಜಿಲ್ಲೆಯ ಜನತೆಗೆ ರ‍್ಥವಾಗಿದೆ.ಕಾಂಗ್ರೆಸ್ ಗೆ ಪ್ರಚಾರ ಅಗತ್ಯ ವಿಲ್ಲ ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆ ಗಮನಿಸಿದರೆ ಜೆಡಿಎಸ್ ಗೆ ಪ್ರಚಾರ ಬೇಕಿದೆ ಎಂದು ವ್ಯಂಗಿಸಿದ್ದಾರೆ.
