ಪ್ರತಿನಿತ್ಯ ಮಳೆ,ಚಳಿ ಎನ್ನದೆ ಮನೆ-ಮನೆಗಳಿಗೆ ದಿನ ಪತ್ರಿಕೆಯನ್ನು ನೀಡುವ ಪತ್ರಿಕಾ ವಿತರಕರ ಕಾಯಕ ನಿಜಕ್ಕೂ ಅಗಮ್ಯವಾಗಿದ್ದು, ಶೀಘ್ರವೇ ಸಂಬಂಧಿಸಿದ ಇಲಾಖೆ ಮತ್ತು ರ‍್ಕಾರ ಪತ್ರಿಕಾ ವಿತರಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸುವ ಕಡೆ ಗಮನ ನೀಡಬೇಕು ಎಂದು ಬೇಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್ ತಿಳಿಸಿದರು.
ಪಟ್ಟಣದ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗಕ್ಕೆ ವಿಶೇಷವಾದ ಸ್ಥಾನವಿದೆ. ರ‍್ಕಾರ ಮತ್ತು ಸಮಾಜದ ಅಂಕು ಡೊಂಕುಗಳನ್ನು ಯಾವ ಮುಲಾಜು ಇಲ್ಲದೆ ತಿದ್ದಿವ ಏಕೈಕ ಪತ್ರಿಕಾರಂಗವೂ ಕೂಡ ಕೋವಿಡ್ ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇನ್ನೂ ಪತ್ರಿಕಾ ವಿತರಕರು ಕಷ್ಟ ದೇವರೇ ಪ್ರೀತಿಯಾಗಿದೆ. ಕಾರಣ ಮಳೆ.ಚಳಿ ಎನ್ನದೆ ಪತ್ರಿಕೆ ಹಂಚುವ ಕಾಯಕ ಅಷ್ಟು ಸುಲಭವಲ್ಲ. ಅದರೂ ಯುವಕರು ಹಂಚುವ ಕಾಯಕದಲ್ಲಿ ನಿರತವಾಗಿರುವುದು ಅನನ್ಯ, ಈ ಕಾರಣದಿಂದ ಪತ್ರಿಕಾ ವಿತರಕರಿಗೆ ರ‍್ಕಾರ ಸೇರಿದಂತೆ ಸಂಘ ಸಂಸ್ಥೆಗಳು ಕೂಡ ನೆರವಿಗೆ ಬರಬೇಕಿದೆ ಎಂದು ಕರೆ ನೀಡಿದರು.
ಕಾವೇರಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಚಂದ್ರಮೌಳಿ ಮಾತನಾಡಿ, ಪತ್ರಿಕಾ ವಿತರಕರು ತಮ್ಮ ಎಡಬಿಡದ ಕೆಲಸದಲ್ಲಿ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ಕಾರಣ ಪತ್ರಿಕೆ ಹಂಚುವ ಸಂರ‍್ಭದಲ್ಲಿ ನೀವುಗಳು ಸೀಲ್ ಡೌನ್ ಬೀದಿ ಮತ್ತು ಕೊರೊನಾ ರೋಗಿಗಳು ಇರುವ ಬೀದಿ ಬೀದಿಯಲ್ಲಿ ಹಂಚುವ ಸಂರ‍್ಭದಲ್ಲಿ ಕೋವಿಡ್ ಮುನ್ನಚ್ಚರಿಕೆ ಕ್ರಮಗಳಾದ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೆಯೇ ತಮ್ಮ ವ್ಯಾಸಂಗದಲ್ಲಿ ಮುನ್ನಡೆ ಸಾಧಿಸಿ ಮುಂದೆ ನೀವುಗಳು ಸಮಾಜದ ಉನ್ನತ ಹುದ್ದೆಯನ್ನು ಪಡೆಯಬೇಕು. ಇಂದು ಲಯನ್ಸ್ ಸಂಸ್ಥೆಯಿಂದ ನೀಡುತ್ತಿರುವ ಆಹಾರ ಧಾನ್ಯಗಳ ಒಂದು ಪ್ರೇರಣೆ ಅಷ್ಟೇ, ಎಲ್ಲರೂ ಇಂತಹ ಕೆಲಸಕ್ಕೆ ಕೈಜೊಡಿಸಬೇಕು ಎಂದರು.
ಈ ಸಂರ‍್ಭದಲ್ಲಿ ಪತ್ರರ‍್ತರ ಸಂಘದ ಕರ‍್ಯರ‍್ಶಿ ರಾಘವೇಂದ್ರ ಹೊಳ್ಳ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಎಂ.ಪಿ.ಪೂವಯ್ಯ, ರಮೇಶ್ ಕುಮಾರ್, ಡಾ.ಸಂತೋಷ್ ಮತ್ತು ಸದಸ್ಯರಾದ ಸ್ರ‍್ಣಶ್ರೀನಿವಾಸ್, ಪುಟ್ಟಸ್ವಾಮಿ, ನರಸಿಂಹಸ್ವಾಮಿ, ನೌಷದ್ ಹಾಗೂ
ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಆರಾಧ್ಯ,ಕರ‍್ಯರ‍್ಶಿ
ಗಣೇಶ್,ಖಜಾಂಚಿ ಲೋಹಿತ್, ಸಹಕರ‍್ಯರ‍್ಶಿ ರವಿಹೊಳ್ಳ ಹಾಗೂ ಮಹೇಶ್,ಸಂತೋಷ್ ಇನ್ನೂ ಮುಂತಾದವರು ಹಾಜರಿದ್ದರು.