ಮತ್ತೆ ಮೆಡಿಷನ್ ಕಿಟ್ ಗಳನ್ನು ನೀಡಿ ಕೋವಿಡ್ ರೋಗಿಗಳಿಗೆ ನೆರವಾದ ಕೃಷ್ಣೇಗೌಡ

 ಅರಕಲಗೂಡು:  ಉದ್ಯಮಿ ಎಂ.ಟಿ. ಕೃಷ್ಣೇಗೌಡರ ಸಹಾಯ ಹಸ್ತದ ಯಾತ್ರೆ ಮುಂದುವರಿದಿದ್ದು ಇದೀಗ ಕಸಬಾ ಹೋಬಳಿಯ ಗ್ರಾಪಂ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೆಡಿಷನ್ ಕಿಟ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.



ತಾಲೂಕಿನ ಬೊಳಕ್ಯಾತನಹಳ್ಳಿ, ಹೆತ್ತಗೌಡನಹಳ್ಳಿ ಪ್ರಾಥಮಿಕ  ಆರೋಗ್ಯ ಕೇಂದ್ರ, ಹೆಬ್ಬಾಲೆ ಆಯುಷ್ ಆಸ್ಪತ್ರೆ,  ಹಾಗೂ ಗಂಜಲಗೂಡು ಗ್ರಾಮ ಪಂಚಾಯಿತಿಗಳಿಗೆ  ಔಷಧಿ ಕಿಟ್ , ಮಾಸ್ಕ್ , ಸ್ಯಾನಿಟೈಸರ್ ಮುಂತಾದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.


ಕೋವಿಡ್ ಸಂಕಷ್ಟ ಸಮಾಜದ ಪ್ರತಿಯೊಬ್ಬರನ್ನು ಕಾಡುತ್ತಿದ್ದು ಜನರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ  ಕೊರೊನಾ ಪೀಡಿತರಿಗೆ ನೆರವಾಗುವ  ಉದ್ದೇಶದಿಂದ  ಈ ಕೊಡುಗೆ ನೀಡಲಾಗಿದೆ. ಕೋವಿಡ್ ಸಂಕಷ್ಟ ದೂರವಾಗಿ  ಪ್ರತಿಯೊಬ್ಬರೂ  ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ಹಾರೈಸಿದರು. 


ಸಮಾಜ ಸೇವಕ ಕಳ್ಳಿಮುದ್ದನಹಳ್ಳಿ ಲೋಕೇಶ್,  ಗಂಜಲಗೂಡು ಗ್ರಾಪಂ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಚಂದ್ರು, ಸದಸ್ಯ ಧರಣೇಶ್,  ಜಿಲ್ಲಾ ಬಿಎಸ್ ಪಿ ಅಧ್ಯಕ್ಷ  ಅತ್ನಿ ಹರೀಶ್, ಮುಖಂಡರಾದ ಹೆಂಟಗೆರೆ ಸಂದೀಪ್, ರಘುವರ, ಚಂದ್ರಣ್ಣ, ದಯಾನಂದ್, ಕುಮಾರ್, ದಿನೇಶ್, ಪರಮೇಶ್, ಮನು ಮತ್ತಿತರ ಸಮಾನ ಮನಸ್ಕರು ವಿತರಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Post a Comment

Previous Post Next Post