ಮಂಡ್ಯ: ಮೈಸೂರು–ಮಂಡ್ಯ ಅಕ್ಕ ಪಕ್ಕದ ಜಿಲ್ಲೆಗಳು. ಇಲ್ಲಿನ ಜಿಲ್ಲಾಧಿಕಾರಿಗಳು ಆಡಳಿತಾತ್ಮಕವಾಗಿ ಅಧಿಕಾರಿಗಳಾಗಿರುವುದು ಸಾಮಾನ್ಯ. ಆದರೆ, ಪ್ರಸ್ತುತ ಇಬ್ಬರು ಜಿಲ್ಲಾಧಿಕಾರಿ ಗಳು ಪತಿ–ಪತ್ನಿಯಾಗಿದ್ದು, ವಿಶೇಷ ವಾಗಿದೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ನೇಮಕವಾಗಿರುವ ಡಾ.ಬಗಾದಿ ಗೌತಮ್ ಅವರು ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರ ಪತಿಯಾಗಿದ್ದು, ಭಾನುವಾರ ಅಶ್ವತಿ ಅವರು ಗೌತಮ್ ಅವರಿಗೆ ಶುಭ ಕೋರಿದರು.
ದೂರವಾಣಿ ಮೂಲಕ ಮಾತನಾಡಿದ ಅವರು, ಪತಿ ಗೌತಮ್ ಅವರು ನಾನು ಪ್ರತಿನಿಧಿಸುವ ಪಕ್ಕದ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿರುವುದು ಖುಷಿ ತಂದಿದೆ. ಎರಡು ಜಿಲ್ಲೆಗಳ ಹೊಣೆ ನಮ್ಮ ಮೇಲಿದ್ದು, ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಜಿಲ್ಲೆಯಲ್ಲಿ ಒಳ್ಳೆಯ ಕೆಲಸಗಳು ನಡೆಯಲಿ, ಮೈಸೂರಿಗೆ ಒಳಿತಾಗಲಿ ಎಂದು ಹಾರೈಸಿದರು.
ಪತಿ–ಪತ್ನಿ ಮಂಡ್ಯ–ಮೈಸೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಇದೇ ಮೊದಲಲ್ಲ. ಐದು ವರ್ಷಗಳ ಹಿಂದೆ ಅಜಯ್ ನಾಗಭೂಷಣ್ ಮಂಡ್ಯ ಜಿಲ್ಲಾಧಿಕಾರಿ ಯಾಗಿದ್ದರೆ, ಶಿಖಾ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು.
Tags
ಮಂಡ್ಯ